ನೆನಪುಗಳು...
ಬಾಲ್ಯದ ನೆನಪುಗಳು
ಶಾಲೆಗೆ ಹೋಗೋದಕ್ಕೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಅಮ್ಮನಿಗೆ ಹೋಗೋ ದಾರಿಯಲ್ಲಿರೋ ಒಬ್ಬರ ಮನೆಯಲ್ಲಿ ನಾಯಿ ಇದೆ ಎಂದು ಸುಳ್ಳು ಹೇಳಿದರೂ ಅಮ್ಮ ಕೇಳದೆ ಅವಳೊಟ್ಟಿಗೆ ಕರೆದುಕೊಂಡು ಹೋಗಿ ಅದ್ಯಾವ ನಾಯಿ ತೋರಿಸು ಅಂತ ಕೇಳಿ ಅಲ್ಲಿಲ್ಲದ್ದು ಗೊತ್ತಾಗಿ ಸುಳ್ಳು ಹೇಳಿದ್ದಕ್ಕೆ ಶಾಲೆಯವರೆಗೆ ಕೋಲಿನಲ್ಲಿ ಹೊಡೆದುಕೊಂಡು ಹೋಗಿದ್ದು, ಅಮ್ಮ ಮನೆಗೆ ಬರುವ ಮೊದಲೇ ಮನೆಗೆ ಬಂದಿದ್ದು
..
ಶಿವರಾತ್ರಿಯ ಪ್ರಸಾದ ತೆಗೆದುಕೊಂಡು ಬರುವಾಗ ದಾರಿಯಲ್ಲಿ ನಮ್ಮ ಮನೆಯ ದನ ಎಲ್ಲೋ ಓಡಿಹೋಗುತ್ತಿದ್ದದ್ದನ್ನು ನೋಡಿ ಪ್ರಸಾದವನ್ನು ನಮ್ಮ ಮನೆಯ ಕೆಲಸಕ್ಕ ಬರುವ ಹೆಂಗಸೊಬ್ಬಳಿಗೆ (ದಲಿತ ಮಹಿಳೆ) ಕೊಟ್ಟದ್ದನ್ನು ನೋಡಿದ ದೊಡ್ಡಮ್ಮನಿಂದ ಹಿಗ್ಗಾಮುಗ್ಗಾ ಬೈಗುಳ.
..
ಶಾಲೆಯಲ್ಲಿ ಇಂಜೆಕ್ಷನ್ ಕೊಡ್ತಾರೆ ಅಂತ ತಿಳಿದ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು.
..
ಶಾಲೆಗೆ ಹೋಗುವಾಗ ಬಸ್ಸಿನ ಮೇಲೆ ಕುಳಿತುಕೊಂಡು ಹೋಗಿದ್ದು.
..
ಬೇರೆಯವರ ತೋಟದಲ್ಲಿ ಹಲಸಿನಹಣ್ಣು ಕದಿಯಲು ಹೋಗಿ ಮರದಿಂದ ಕೆಳಗಿಳಿಸಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಆ ತೋಟದ ಯಜಮಾನ ಬಂದಿದ್ದು, ಅವರಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಆಮೇಲೆ ಅವರೂ ನಮ್ಮೊಟ್ಟಿಗೆ ತಿಂದದ್ದು.
..
ಅಮೇರಿಕಾ ಅಮೇರಿಕಾ ಚಿತ್ರ ನೋಡಲು ಹೋಗಿ, ಅಮೇರಿಕಾ ನೋಡಿದಷ್ಟೇ ಸಂಭ್ರಮ ಪಟ್ಟದ್ದು.
..
ಅಕ್ಕನನ್ನು ರಾತ್ರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಅಪ್ಪನಿಂದ ಹೊಡೆತ ತಿಂದದ್ದು.
..
ಮಳೆ ಬರುವಾಗ ಕೊಡೆ ಹಾರಿಹೋಗುತ್ತಿದ್ದ ಕಾರಣ ಅದನ್ನು ಮಡಿಸಿ ಮಳೆಯಲ್ಲೇ ನೆನೆದುಕೊಂಡು ಮನೆಗೆ ಬಂದದ್ದು.
..
ದನ ಕಾಯುವಾಗ ಗೋಲಿ ಆಡುತ್ತಿದ್ದವರನ್ನು ನೋಡಿ ಆಡಲು ಹೋಗಿ ದನಗಳು ಎಲ್ಲೋ ಹೋದ ಕಾರಣ ಮನೆಗೆ ಹೋಗಿ ವಿಷಯ ಹೇಳಿದಾಗ, ಮಾರನೇ ದಿನ ಬೇಸಾಯಕ್ಕೆ ದನವಿಲ್ಲವಲ್ಲ ಎಂದು ತಿಳಿದ ಅಪ್ಪ ನನ್ನನ್ನು ಹೊಡೆಯಲು ಬಂದದ್ದನ್ನು ನೋಡಿ ಓಡಿ ಅಣ್ಣನ ಮನೆಯಲ್ಲಿ ಬಚ್ಚಿಟ್ಟುಕೊಂಡು ರಾತ್ರಿ ಮನೆಗೆ ಹೋಗಿದ್ದು.
Comments
ಉ: ನಾನೇನು ಅಷ್ಟೊಂದು ಕೆಟ್ಟದಾಗಿಲ್ಲ ಬಿಡು!
In reply to ಉ: ನಾನೇನು ಅಷ್ಟೊಂದು ಕೆಟ್ಟದಾಗಿಲ್ಲ ಬಿಡು! by abdul
ಉ: ನಾನೇನು ಅಷ್ಟೊಂದು ಕೆಟ್ಟದಾಗಿಲ್ಲ ಬಿಡು!
In reply to ಉ: ನಾನೇನು ಅಷ್ಟೊಂದು ಕೆಟ್ಟದಾಗಿಲ್ಲ ಬಿಡು! by Chikku123
ಉ: ನಾನೇನು ಅಷ್ಟೊಂದು ಕೆಟ್ಟದಾಗಿಲ್ಲ ಬಿಡು!
In reply to ಉ: ನಾನೇನು ಅಷ್ಟೊಂದು ಕೆಟ್ಟದಾಗಿಲ್ಲ ಬಿಡು! by asuhegde
ಉ: ನೆನಪುಗಳು...