ಹೆಂಡ್ತಿ ಅಂದ್ರೆ ಹೇಗಿರಬೇಕು ....?

ಹೆಂಡ್ತಿ ಅಂದ್ರೆ ಹೇಗಿರಬೇಕು ....?

ಹೆಂಡ್ತಿ ಅಂದ್ರೆ ಹೇಗಿರಬೇಕು ಅಂತ ಯಾರಾದ್ರೂ ಕೇಳಿದ್ರೆ ಒಂದು ಕ್ಷಣ ತಬ್ಬಿಗಾಗುವ ಸರದಿ ನಮ್ಮದು. (ಯಾರ ಹೆಂಡ್ತಿ ಅಂತ ಕೇಳಿದ್ರೆ ನನ್ನ ಹತ್ತಿರ ಉತ್ತರ ಇಲ್ಲ :) ) ಇಂತಹುದೇ ಪ್ರಶ್ನೆ ಆದ್ಯವಚನಕಾರ ದೇವರದಾಸಿಮಯ್ಯ ಅವರಿಗೆ ಇದಿರಾಯ್ತು. ದಾಸಿಮಯ್ಯ ನೀಡಿದ ಪ್ರತಿಕ್ರಿಯೆ ಸಾಕಷ್ಟು ಸೋಜಿಗವಾದುದು.
ದಾಸಿಮಯ್ಯ ಒಮ್ಮೆ ಊಟಕ್ಕೆ ಕುಳಿತಿದ್ದರು. ಆ ಸಮಯಕ್ಕೆ ಒಬ್ಬ ವ್ಯಕ್ತಿ ಬಂದ. ಭಗವಾನ್ ಶಿವನೇ ಅಂತ ಹೇಳೋದಿದೆ, ಅದಿರಲಿ. ಬಂದ ವ್ಯಕ್ತಿ ದಾಸಿಮಯ್ಯನನ್ನು ಕೇಳಿದ. 'ಹೆಂಡ್ತಿ ಇದ್ರೆ ಹೇಗಿರಬೇಕು' ಅಂತ. ಆಗ ತಂಗೂಳು (=ತಣ್ಣಗಿನ+ಕೂಳು=ತಣ್ಣಗಿರುವ ಆಹಾರ. ಈ ಪದಕ್ಕೆ ಈಗ ಹೀನಾರ್ಥ ಪ್ರಾಪ್ತಿಯಾಗಿ ಹಳಸಿದ ಎಂಬರ್ಥ ಬಂದಿದೆ. ಇದೇ ತರಹ ನಾತ ಅಂದ್ರೆ ಸುವಾಸನೆ !) ಉಣ್ಣುತ್ತಿದ್ದರು. ಅವರು ಪ್ರಶ್ನೆ ಕೇಳಿ ಮುಗುಳ್ನಕ್ಕು ಮರುಮಾತನಾಡದೇ ತನ್ನ ಹೆಂಡತಿ ದುಗ್ಗಳೆಯನ್ನು ಕರೆದು 'ದುಗ್ಗಳೆ ಅನ್ನ ತುಂಬಾ ಬಿಸಿಯಾಗಿದೆ ಸ್ವಲ್ಪ ತಣಿಸು' ಎಂದರು. ಆಕೆ ಬಿಸಣಿಗೆ ತಂದು ತಣ್ಣಗಿರುವ ಅನ್ನವನ್ನು ಆರಿಸುತ್ತಾ ಕುಳಿತಳು. ಸಾಕಷ್ಟು ಸಮಯದ ನಂತರ 'ಸಾಕು ತಣಿದಿದೆ' ಎಂದರು. ದುಗ್ಗಳೆಯು ತನ್ನ ಅಡುಗೆ ಕೆಲಸಕ್ಕೆ ಹೋದರು. ಬಂದ ವ್ಯಕ್ತಿಗೆ ದಾಸಿಮಯ್ಯನವರು 'ಹೆಂಡತಿ ಅಂತ ಇದ್ರೆ ಹೀಗಿರಬೇಕು' ಅಂದರು.
ಸಂಸಾರದಲ್ಲಿದ್ದು ಮೋಕ್ಷ ಸಾಧ್ಯ ಎಂದು ಸಾರಿದ ವಚನಕಾರರಲ್ಲಿ ಮೊದಲನೆಯ ವಚನಕಾರ ದಾಸಿಮಯ್ಯ. ಸಂಸಾರ ಬಂಧನ ಎಂದು ಯಾವತ್ತೂ ವಚನಕಾರರು ಭಾವಿಸಿರಲ್ಲಿಲ್ಲ. 'ಸತಿಪತಿಯೊಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ' ಎಂಬ ಸಾಲೇ ಸಾಕ್ಷಿ ಈ ಮಾತಿಗೆ.

Rating
No votes yet

Comments