ಅಮ್ಮಾ ನಾ ಚಾಮಿ ಆಗಬೇಕು!
ನನ್ನ ಮಗ ಈಗಾಗಲೇ ಸಂಪದದಲ್ಲಿ ಕಥೆಯೊಂದನ್ನು ಬರೆದಿದ್ದಾನೆ. ನಾನೀಗ ಇಲ್ಲಿ ಬರೆಯುವ ಸಾಹಸ ಮಾಡುತ್ತಿದ್ದೇನೆ.
ನಿನ್ನೆ ನನ್ನ ಚಿಕ್ಕ ಮಗನ ಹುಟ್ಟಿದ ದಿವಸ. ಅವನ ಪ್ರಶ್ನೆಗಳು ಹೀಗೆ ಶುರುವಾಯಿತು. ಅಮ್ಮಾ, ನನಗೆಷ್ಟು ಹ್ಯಾಪಿ ಬರ್ತ್ ಡೇ ಆಯಿತು, ನಾನು ‘೪ ವರ್ಷ ಕಂದ’. ಅಣ್ಣನಿಗೆ? ‘೮’ , ಅಮ್ಮನಿಗೆ, ಅಪ್ಪನಿಗೆ, ತಾತನಿಗೆ ಮನೆಯವರೆಲ್ಲರದೂ ಕೇಳಿ ಆಯಿತು. ಇದ್ದಕಿದ್ದಂತೆ ಅವನ ಗಮನ ಗೋಡೆಯ ಮೇಲಿದ್ದ ಗಣಪತಿಯತ್ತ ಹೋಯಿತು, ಅಮ್ಮಾ ಆ ಚಾಮಿಗೆ ಎಷ್ಟು ವಯಸ್ಸು?! ನನಗೆ ಸ್ವಲ್ಪ ಗಾಬರಿ. ನಾನು ಯೋಚಿಸಿ ‘೧೦೦೦ ವರ್ಷ’ ಅಂದೆ.
ಈಗ ಶುರುವಾಯಿತು ಸ್ವಲ್ಪ ಗಲಾಟೆ, ನನಗೂ ೧೦೦೦ ವರ್ಷ ಆಗಬೇಕಿತ್ತು, ನಾನು ‘ಯಾಕೆ ಕಂದಾ?’. ನಮ್ಮ ಮನೆ ಆಕಾಶದಲ್ಲಿರಬೇಕಿತ್ತು, ನನಗೆ ಸೂರ್ಯನ ಹತ್ತಿರ ಹೋಗಬೇಕಿತ್ತು, ನಾನು ಚಾಮಿ ಆಗಿರಬೇಕಿತ್ತು, ನೀನ್ಯಾಕೆ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದೆ, ನಾನು ನಿನ್ನಲ್ಲಿ ಬರುವ ಮುಂಚೆ ಬಾಲ ಹನುಮಾನ್ (ರಾತ್ರಿ ನೋಡಿದ್ದ ಸಿನೆಮಾದ ಪ್ರಭಾವ) ಆಗಿದ್ದೆ. ನನಗೆ ರೆಕ್ಕೆ ಎಲ್ಲಾ ಇತ್ತು. ನನಗೆ ಸೂರ್ಯನ ಬಳಿ ಹೋಗಲು ಆಗುತ್ತಿತ್ತು. ಈಗ ನನಗೆ ಚಾಮಿ ಆಗಬೇಕು. ಬೇಗ ನನಗೆ ೧೦೦೦ ವರ್ಷ ಆಗಬೇಕು. ಏನಾದರೂ ಮಾಡು, ನಾನು ಚಾಮಿ ಆಗಬೇಕು.
ಸ್ವಲ್ಪ ಹೊತ್ತು ಯೋಚಿಸಿ ನಾನಂದೆ. ‘ಹೋಗಲಿ, ನೀನು ಯಾವ ಚಾಮಿ ಆಗಬೇಕು?’. ಅವನೆಂದ ‘ನಾನು ನರಸಿಂಹ ಚಾಮಿ ಆಗಬೇಕು’. ನಾನು ‘ಬೇಡ ಕಣೋ, ಕೃಷ್ಣ ಆಗು’. ಅವನು ‘ನಾನು ಟಿವಿಯಲ್ಲಿ ನೋಡಿದ್ದೀನಿ, ಈ ಕೃಷ್ಣನಿಗೆ ಶಕ್ತಿಯೇ ಇಲ್ಲ, ಯಾರೋ ಒಬ್ಬ ಮಣ್ಣಿನಲ್ಲಿ ಮುಚ್ಚಿಬಿಡ್ತಾನೆ! ಆಮೇಲೆ ಮಣ್ಣು ತೆಗೆದಾಗ ಅವನು ಮಾಯ ಆಗಿರುತ್ತಾನೆ. ಆದ್ರೆ ನರಸಿಂಹನಿಗಾದ್ರೆ ಟ್ರೇನಿನಷ್ಟು ಶಕ್ತಿ (ಅವನಿಗೆ ಟ್ರೇನ್ ಪ್ರಯಾಣ ಅಂದ್ರೆ ಬಹಳ ಇಷ್ಟ).
ಇನ್ನೂ ಸ್ವಲ್ಪ ಹೊತ್ತು ತಡೆದು ನಾನಂದೆ ‘ನಾವ್ಯಾರೂ ಚಾಮಿಯನ್ನು ನೋಡೊದಿಕ್ಕೆ ಆಗೊಲ್ಲ ಕಣೋ’. ಇವನೆಂದ ‘ಹಾಗಾದ್ರೆ ಗಣಪತಿಯ ಫೋಟೋ ಕ್ಯಾಮೆರಾದಲ್ಲಿ ತೆಗೆದವರ್ಯಾರು?’. ತಲೆಕೆಡಿಸಿಕೊಂಡು ಹೇಳಿದೆ, ‘ದಿವಸ ಸ್ಕೂಲಿಗೆ ಹೋಗುತ್ತಿದ್ದರೆ (ಹಟ- ದಿನಾ ಯಾಕೆ ಸ್ಕೂಲಿಗೆ ಹೋಗಬೇಕು?), ಚೆನ್ನಾಗಿ ಊಟ ಮಾಡುತ್ತಿದ್ದರೆ ನೀನೊಂದು ದಿನಾ ಚಾಮಿ ಆಗುತ್ತೀಯ ಕಂದಾ. ಹಾಗೆ ದಿವಸ ನಾ ಹೇಳಿಕೊಟ್ಟ ಸ್ತೋತ್ರಗಳನ್ನೆಲ್ಲಾ ಚಾಮಿಗೆ ಹೇಳು, ನೀನು ಚಾಮಿ ಆಗುತ್ತಿ’. ಈಗ ದಿವಸವೂ ನಮ್ಮ ಮನೆಯಲ್ಲಿ ಅವನ ಸ್ತೋತ್ರ ಪಠನೆ ನಡೆಯುತ್ತಿದೆ.
Comments
ಉ: ಸುಸ್ವಾಗತ ಸಂಪದ ಪರಿವಾರಕ್ಕೆ ರೂಪಾ ರಾಜೀವ!!!
In reply to ಉ: ಸುಸ್ವಾಗತ ಸಂಪದ ಪರಿವಾರಕ್ಕೆ ರೂಪಾ ರಾಜೀವ!!! by asuhegde
ಉ: ಸುಸ್ವಾಗತ ಸಂಪದ ಪರಿವಾರಕ್ಕೆ ರೂಪಾ ರಾಜೀವ!!!
In reply to ಉ: ಸುಸ್ವಾಗತ ಸಂಪದ ಪರಿವಾರಕ್ಕೆ ರೂಪಾ ರಾಜೀವ!!! by rooparajiv
ಉ: ಸುಸ್ವಾಗತ ಸಂಪದ ಪರಿವಾರಕ್ಕೆ ರೂಪಾ ರಾಜೀವ!!!
ಉ: ಅಮ್ಮಾ ನಾ ಚಾಮಿ ಆಗಬೇಕು!
In reply to ಉ: ಅಮ್ಮಾ ನಾ ಚಾಮಿ ಆಗಬೇಕು! by Rakesh Shetty
ಉ: ಅಮ್ಮಾ ನಾ ಚಾಮಿ ಆಗಬೇಕು!
In reply to ಉ: ಅಮ್ಮಾ ನಾ ಚಾಮಿ ಆಗಬೇಕು! by Rakesh Shetty
ಉ: ಅಮ್ಮಾ ನಾ ಚಾಮಿ ಆಗಬೇಕು!
ಉ: ಅಮ್ಮಾ ನಾ ಚಾಮಿ ಆಗಬೇಕು!
In reply to ಉ: ಅಮ್ಮಾ ನಾ ಚಾಮಿ ಆಗಬೇಕು! by manjunath s reddy
ಉ: ಅಮ್ಮಾ ನಾ ಚಾಮಿ ಆಗಬೇಕು!
ಉ: ಅಮ್ಮಾ ನಾ ಚಾಮಿ ಆಗಬೇಕು!
ಉ: ಅಮ್ಮಾ ನಾ ಚಾಮಿ ಆಗಬೇಕು!