ಯಾಕಿಂಗಾಡ್ತಾರೋ ಈ ಹುಡುಗಿರು...
ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೇ ಗೊತ್ತಿಲ್ಲ? ಕೆಲಸ ನಿಮಿತ್ತ ದೂರದ ಊರಿನಲ್ಲಿರುವವರೊಂದಿಗೆ ಅಥವಾ ನಮ್ಮ ಗೆಳೆಯರ ಜೊತೆ ಸಂಪರ್ಕ ಸಾಧಿಸುವಂತಹ ಈ ಸಾಮಾಜಿಕ ಸಂಪರ್ಕ ಜಾಲದಲ್ಲ್ಲಿ ಖಾತೆ ತೆರೆಯದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಕೆಲಸದಲ್ಲಿ ಬ್ಯುಸಿ (ಕಚೇರಿಯಲ್ಲಿ ನಿರ್ಬಂಧಿತ ಸೈಟ್ :)) ಆಗಿರುವುದರಿಂದ ಆರ್ಕುಟ್್ಗೆ ಭೇಟಿ ನೀಡುವುದೇ ಅಪರೂಪವಾಗಿಬಿಟ್ಟಿದೆ. ಹೇಗೋ ಹಳೆಯ ಗೆಳತಿಯೊಬ್ಬಳು ಸ್ಕ್ರಾಪ್ ಬರೆದಿದ್ದಕ್ಕೆ ಉತ್ತರಿಸೋಣ ಎಂದು ಹಲವು ತಿಂಗಳುಗಳ ನಂತರ ಆರ್ಕುಟ್್ಗೆ ಭೇಟಿ ನೀಡಿದೆ. ಹಳೆ ನೆನಪುಗಳನ್ನು ಕೆದಕುತ್ತಾ, ಗೆಳತಿಯರ ಪ್ರೊಫೈಲ್ ಕ್ಲಿಕ್ ಮಾಡುತ್ತಾ ಹೋಗುವಾಗ ಕಂಡದ್ದು ಹೆಚ್ಚಿನ ಗೆಳತಿಯರು ಒಂಟಿ(ಸಿಂಗಲ್) ಆಗಿದ್ದವರು ಕಮಿಟೆಡ್ ಎಂದು ಬರೆದಿದ್ದಾರೆ. ಕಮಿಟೆಡ್? ಎಲಾ... ಇವಳಾ? ಅಂತಾ ಅದೇ ಗೆಳತಿಗೆ ಫೋನಾಯಿಸಿದೆ. ಅಲ್ಲಿಂದ ಬಂದ ಉತ್ತರ ಯಸ್ ಐ ಆಮ್ ಕಮಿಟೆಡ್. ನಿಂಗೊತ್ತಾ ನಾನೊಬ್ಬನನ್ನು ಲವ್ ಮಾಡ್ತಾ ಇದ್ದೇನೆ. ಅದಕ್ಕೆ ಕಮಿಟೆಡ್ ಅಂತಾ ಬರೆದೆ..ಮತ್ತೆ ಪ್ರೇಮದ ಬಗ್ಗೆ 15 ಮಾರ್ಕ್ಸ್್ಗೆ ಪ್ರಬಂಧ ಬರೆಯುವಂತೆ ಅವಳು ಹೇಳುತ್ತಾ ಇದ್ದಳು. ಎಲ್ಲಾ ಹುಡುಗೀರು ಹೀಗೇನೆ (ನನಗನಿಸಿದಂತೆ). ಪ್ರೇಮದಲ್ಲಿ ಬೀಳುವುದೇ ಬದುಕು ಗೆದ್ದಂತೆ ಎಂದು ಅಂದುಕೊಂಡಿದ್ದಾರೆ. ತಾನು ಪ್ರೀತಿ ಮಾಡುತ್ತಿರುವ ವಿಷ್ಯವನ್ನು ಅಪ್ಪ ಅಮ್ಮನಿಂದ ಮುಚ್ಚಿಡುತ್ತಾರೆ (ಹೇಳಿದರೆ ಅದರ ಪರಿಣಾಮ ಏನಾಗುತ್ತದೆ ಅಂತಾ ಎಲ್ಲರಿಗೂ ಗೊತ್ತು) ಆದ್ರೆ ಗೆಳತಿಯರ ಮುಂದೆ ಡಂಗುರ ಸಾರುತ್ತಾರೆ. ಆಮೇಲೆ ಇಂತಹಾ ಸಾಮಾಜಿಕ ಸಂಪರ್ಕ ಜಾಲಗಳಲ್ಲಿ ಕಮಿಟೆಡ್ ಅಂಥಾ ಬರೆದು ಎಲ್ಲರಿಗೂ ತಾನು ಒಂಟಿ ಅಲ್ಲ ಅಂತಾ ತಿಳಿಸುವ ಪ್ರಯತ್ನ ಮಾಡುತ್ತಾರೆ. ಅಂದ ಹಾಗೆ ಪ್ರೀತಿ ಮಾಡುವುದು ತಪ್ಪೆಂದು ನನ್ನ ಅಭಿಪ್ರಾಯವಲ್ಲ. ಹುಡುಗಿ ಪ್ರೀತಿಯಲ್ಲಿ ಬೀಳುವಂತೆ ಹುಡುಗರೂ (ಬಹಳ ಜಾಗರೂಕತೆಯಿಂದ) ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಇಂತಹ ಪ್ರೇಮಿಗಳಾದ ಹುಡುಗರಲ್ಲಿ ಎಷ್ಟು ಮಂದಿ ಈತರಹ ಕಮಿಟೆಡ್ ಅಂತಾ ಸೋಷ್ಯಲ್ ಸೈಟ್್ಗಳಲ್ಲಿ ಬರೆದುಕೊಳ್ಳುತ್ತಾರೆ. ಹೇಳಿ? ಪ್ರೊಫೈಲ್್ನಲ್ಲಿರುವ ರಿಲೇಷನ್್ಶಿಪ್ ಸ್ಟಾಟಸ್್ನಲ್ಲಿ ಕಮಿಟೆಡ್ ಅಂತ ಬರೆದಿರುವ ಗಂಡಸರು ಕಡಿಮೆಯೇ. ಅದಕ್ಕೇ ಹೇಳುವುದು Men Know how to keep the secrets ಅಂತಾ.
ಇನ್ನು ನನ್ನ ಗೆಳತಿಯೊಬ್ಬಳು ಕಮಿಟೆಡ್ ಅಂತಾ ಆರ್ಕುಟ್್ನಲ್ಲಿ ಬರೆದಿದ್ದು, Gmailನ ಸ್ಟೇಟಸ್ ಮೆಸೇಜ್್ನಲ್ಲಿ 'Love...the pulse of Life'ಅಂತಾ ಬರೆದಿದ್ದಳು. ಇಂತಹಾ ಮೆಸೇಜ್್ಗಳಿಂದಾಗಿಯೇ ಹುಡುಗಿ ಲವ್ವ್್ನಲ್ಲಿ ಬಿದ್ದಿದ್ದಾಳೆ ಎಂದು ಎಲ್ಲರಿಗೂ ತಿಳಿದು ಬಿಡುತ್ತದೆ. ಇತ್ತ ಹುಡುಗಿ, ಪ್ರೊಫೈಲ್್ನಲ್ಲಿ ಕಮಿಟೆಡ್ ಅಂತಾ ಬರೆದಿದ್ದರೂ ಅವಳ ಹುಡುಗ ಅಲ್ಲಿ ಸಿಂಗಲ್ ಅಂತನೇ ಬರೆದಿರುತ್ತಾನೆ. ಇನ್ಯಾವುದಾದರೂ ಹುಡುಗಿ ಅವನಲ್ಲಿ ನಿನಗೆ ಗರ್ಲ್್ಫ್ರೆಂಡ್ ಇದ್ದಾಳಾ? ಅಂತ ಕೇಳಿದರೆ ಮೊದಲು 'ಇಲ್ಲ' ಅಂತಾನೆ. ಆಮೇಲೆ ಬೇರೊಬ್ಬಳ ಜೊತೆ ಫ್ಲರ್ಟಿಂಗ್ ಮಾಡ್ತಾನೆ. ಫ್ಲರ್ಟ್ ಮಾಡುವುದು ಬೇರೆ, ಪ್ರೀತಿ ಬೇರೆ ಎಂಬುದು ಅವನ ವಾದವಾಗಿರುತ್ತದೆ. ಆದ್ರೆ ಹುಡುಗಿ ಹಾಗಲ್ಲ, ಒಬ್ಬನನ್ನು ಪ್ರೀತಿಸುತ್ತಾಳೆ, ಅದರ ನಡುವೆ ಇನ್ಯಾವನೋ ಅವಳಲ್ಲಿ ಪ್ರೇಮ ನಿವೇದನೆ ಮಾಡಿದರೆ ಅಥವಾ ಪ್ರೀತಿಸುವಂತೆ ಒತ್ತಾಯಿಸಿದರೆ ಕೂಡಲೇ ಅವಳು ತಾನು ಈಗಾಗಲೇ ಇನ್ನೊಬ್ಬನನ್ನು ಪ್ರೀತಿಸುತ್ತಿರುವ ವಿಷ್ಯ ಆತನಿಗೆ ಹೇಳುತ್ತಾಳೆ. ಅದಕ್ಕೇ ಹೇಳುವುದು ಹುಡುಗಿಯರು ಎಲ್ಲವನ್ನೂ ಹೇಳಿ ಬಿಡುತ್ತಾರೆ ಅಂತಾ. ಇನ್ನೂ ಕೆಲವರಿದ್ದಾರೆ ತಮ್ಮ ಫೈಲ್್ಗಳ ಹೆಸರು, ಇಮೇಲ್ ಪಾಸ್್ವರ್ಡ್್ಗೂ ಕೂಡಾ ಪ್ರಿಯಕರನ ಹೆಸರನ್ನು ಬಳಸುತ್ತಾರೆ ಅಂದ್ರೆ ಎಲ್ಲದರಲ್ಲೂ ತನ್ನ ಪ್ರಿಯಕರನ ಹೆಸರು ಇರಬೇಕು ಎನ್ನುವ ಹುಚ್ಚು ಹಂಬಲವಾಗಿರಬಹುದೇ ಇದು?
ಇನ್ನು ಹೇಳ(ಲೇ) ಬೇಕಾಗಿರುವುದು ಪಿ.ಜಿ ಹುಡುಗೀರ ಬಗ್ಗೆ. ಪಿಜಿ ಎಂದು ಮುದ್ದಾಗಿ ಕರೆಯಲ್ಪಡುವ ಪೇಯಿಂಗ್ ಗೆಸ್ಟ್್ಗಳಿರುವ ಆ ಮನೆ ಬಗ್ಗೆ. ಬೆಂಗಳೂರಿನಲ್ಲಿ ಈ ಪಿಜಿಗಳಿಗೆ ಅದೇನು ಡಿಮಾಂಡಪ್ಪಾ... ಪಿಜಿ(ಲೇಡಿಸ್ ಪಿಜಿ ಬಗ್ಗೆ ಮಾತ್ರ ನಂಗೊತ್ತಿರುವುದು) ತುಂಬಾ ಹುಡುಗಿರೂ ಅಂದ ಮೇಲೆ ಪಿಜಿ ಮಾಲೀಕರಿಗೆ ಆದಾಯವೋ ಆದಾಯ. ಎಲ್ಲಾ ಪಿಜಿಗಳಿಗೂ ಒಬ್ಬ ಮೇಲ್ವಿಚಾರಕಿ(ಆ್ಯಂಟಿ) ಇದ್ದೇ ಇರುತ್ತಾರೆ. ಈ ಆ್ಯಂಟಿಗಳ ಸ್ವಭಾಕ್ಕನುಗುಣವಾಗಿಯೇ ಪಿಜಿ ಹುಡುಗಿಯರ ಸಂಖ್ಯೆ ಇರುತ್ತದೆ. ಅಂದರೆ ತುಂಬಾ ಸ್ಟ್ರಿಕ್ಟ್ ,ಮುಖ ಸಿಂಡರಿಸಿಕೊಂಡೇ ಮಾತಾಡುವ ಆ್ಯಂಟಿಯರು ಇದ್ದರೆ ಯಾವ ಹುಡುಗಿ ತಾನೇ ಅಲ್ಲಿಗೆ ಬಂದಳು?. ಆ್ಯಂಟಿಯರಿಗೆ ಕೂಡಾ ಈ ವಿಷ್ಯ ಗೊತ್ತು, ಅದಕ್ಕಾಗಿಯೇ ಅವರು ಪಿಜಿ ಹುಡುಗಿಯರಿಗೆ ಎಲ್ಲಾ ಸ್ವಾತಂತ್ರ್ಯವನ್ನು ಕೊಟ್ಟಿರುತ್ತಾರೆ.. ಇನ್ನೊಂದು ವಿಷ್ಯ, ಪಿಜಿಯಲ್ಲಿ ಅಷ್ಟೊಂದು ದುಡ್ಡು ತೆತ್ತು ಜೀವಿಸುವಾಗ ಇನ್ಯಾರು ನಮ್ಮನ್ನು ಕೇಳುವವರು ಎಂಬುದು ಹುಡುಗಿಯರ ಮನಸ್ಸಲ್ಲಿ ಅನಿಸದೇ ಇರುತ್ತದಾ? ಹೋಗಲಿ ಬಿಡಿ ಯಾರು ಏನು ಮಾಡಿಕೊಂಡರೇನು? ನಮಗಂತೂ ತಿಂಗಳು ತಿಂಗಳು ಬಾಡಿಗೆ ಸರಿಯಾಗಿ ಸಿಕ್ಕಿದರೆ ಸಾಕು ಎನ್ನುವುದು ಪಿಜಿ ಮಾಲೀಕರ ಅಭಿಪ್ರಾಯವಾಗಿರುತ್ತದೆ. ದೂರದ ಊರಿನಿಂದ ಕೆಲಸ ನಿಮಿತ್ತ ಅಥವಾ ಕಲಿಯಲು ಬೆಂಗಳೂರಿಗೆ ಬಂದಾಗ ಮೊದಲು ನಾವು ವಿಚಾರಿಸುವುದೇ ಪಿಜಿ ಬಗ್ಗೆ. ಅಂತೂ ಮಗಳನ್ನು ಸುರಕ್ಷಿತವಾದ ಪಿಜಿಯೊಂದರಲ್ಲಿ ಸೇರಿಸಿದ್ದೇವೆ ಎಂದು ನಿಟ್ಟುಸಿರು ಬಿಟ್ಟು ಅಪ್ಪ ಅಮ್ಮ ಮನೆಗೆ ತೆರಳುತ್ತಾರೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿ ಬರುವ ಆ ಹೊಸ ಹುಡುಗಿ ಒಂದೆರಡು ದಿನ ನೀರಲ್ಲಿ ಬಿದ್ದ ಕೋಳಿ ತರಹ ಇರುತ್ತಾಳೆ. ಮತ್ತೆ ಮತ್ತೆ ಅಬ್ಬಬ್ಬಾ....ಅಂತಾ ಹೇಳುವಷ್ಟು ಧೈರ್ಯ ಸಾಧಿಸುತ್ತಾಳೆ. ಹೇಳುವವರು ಕೇಳುವವರು ಯಾರು ಇಲ್ಲ. ನಮ್ಮದೇ ಸಾಮ್ರಾಜ್ಯ. ಈ ನಡುವೆ ಬಾಯ್್ಫ್ರೆಂಡ್ ಒಬ್ಬ ಸಿಕ್ಕಿ ಬಿಡುತ್ತಾನೆ. ಅಲ್ಲ ಮಾರಾಯ್ರೆ...ನನಗನಿಸಿದಂತೆ ನಮ್ಮ ಪಿಜಿಯಲ್ಲಿ ಬಾಯ್್ಫ್ರೆಂಡ್ ಇದ್ದಾನೆ ಅಂತಾ ಹೇಳಿಕೊಳ್ಳುವುದೇ ಘನತೆಯ ವಿಷ್ಯ. ಆಮೇಲೆ ಸಿನಿಮಾ, ಪಾರ್ಕು, ಡಿನ್ನರ್ ಅಂತಾ ಸುತ್ತುವುದು ಇದ್ದೇ ಇರುತ್ತದೆ. ವೀಕೆಂಡ್ ಆದ್ರೆ ಪಿಜಿ ಖಾಲಿ ಖಾಲಿ.. ಒಂದಿಷ್ಟು ಹುಡುಗಿರೂ ಮಾತ್ರ ಟಿವಿ ಮುಂದೆ ಕುಳಿತುಕೊಂಡಿರುತ್ತಾರೆ ಅಷ್ಟೇ. ಈ ನಡುವೆ ಅಂಗಿ ಬದಲಿಸಿದಂತೆ ಅದೆಷ್ಟೋ ಹುಡುಗಿಯರು ಬಾಯ್್ಫ್ರೆಂಡ್್ಗಳನ್ನು ಬದಲಿಸುವುದನ್ನು ನೋಡಿದ್ದೇನೆ. ಇದನ್ನೆಲ್ಲಾ ನೋಡ್ತಾ ಇದ್ದರೂ ತಾನಾಯ್ತು ತನ್ನ ಪಾಡಾಯ್ತು ಎಂದು ಇದ್ದು ಬಿಟ್ಟರೆ ಪಿಜಿಯಲ್ಲಿ ಆರಾಮವಾಗಿ ಇರಬಹುದು. ಏನೇ ಆದರೂ ಇದು ಬೆಂಗ್ಳೂರು...ಮೆಟ್ರೋ ಸಿಟಿ ಅಲ್ವಾ... ಇಲ್ಲಿ ಇದೆಲ್ಲಾ ಸರ್ವೇ ಸಾಮಾನ್ಯ ಎಂದು ಮೌನವಾಗಿ ಎಲ್ಲವನ್ನೂ ನೋಡುವುದೇ ಒಳಿತು ಎಂಬ ನಿರ್ಧಾರಕ್ಕೆ ನಾವು ಬರಬೇಕಾಗುತ್ತದೆ. ಇನ್ನೂ ಕೆಲವರಿದ್ದಾರೆ ಮೂರು ಸಾವಿರದೈನೂರರಷ್ಟು ತಿಂಗಳ ಬಾಡಿಗೆ ನೀಡಿ ಪಿಜಿಯಲ್ಲಿ ಒಂದು ದಿನಾನೂ ಇರಲ್ಲ. ಅವಳಿರುವುದು ಬಾಯ್್ಫ್ರೆಂಡ್ ಜೊತೆಗೆ 'ಲಿವಿಂಗ್ ಟುಗೆದರ್'.ದೂರದ ಊರಿನಲ್ಲಿರುವ ಅಪ್ಪ ಅಮ್ಮನಿಗೆ ಮಗಳು ಎಲ್ಲಿರುತ್ತಾಳೆ ಎಂದು ಹೇಗೆ ತಾನೇ ತಿಳಿಯುತ್ತೆ? ಅವರ್ಯಾರದರೂ ಬೆಂಗ್ಳೂರಿಗೆ ಬರುತ್ತಾರೆಂದಾಗ ಅದೇ ಹುಡುಗಿ ಎರಡು ದಿನಗಳ ಮುನ್ನ ಪಿಜಿಗೆ ಹಾಜರಾಗುತ್ತಾಳೆ. ಕುಟುಂಬದವರು ಊರಿಗೆ ಹಿಂತಿರುಗಿದ ಕೂಡಲೇ..ಅವಳೂ ಪ್ಯಾಕಪ್ ಮಾಡಿ 'ಅವನ' ಮನೆಯತ್ತ ಹೊರಟು ನಿಂತಿರುತ್ತಾಳೆ. ಇನ್ನು ಪ್ರೀತಿಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಂಡವರು, ಕದ್ದು ಮುಚ್ಚಿ ಮದುವೆಯಾದವರು, ಮದ್ಯ ,ಸಿಗರೇಟ್ ಸೇವಿಸುವವರು ಹೀಗೆ ಅದೆಷ್ಟೋ ಹುಡುಗಿಯರು ತಿಳಿದೂ ತಿಳಿದೂ ತಪ್ಪು ಮಾಡುತ್ತಿರುತ್ತಾರೆ. ಇಂತವರ ಬಗ್ಗೆ ಏನೆನ್ನಬೇಕು?
ಆದಾಗ್ಯೂ, ಹೆಣ್ಣಿಗೆ ಸ್ವಾತಂತ್ಯ ಬೇಕು. ಆದರೆ ಅದನ್ನು ಬಳಸುಕೊಳ್ಳುವ ರೀತಿಯೂ ಚೆನ್ನಾಗಿಯೇ ಇರಬೇಕು. ನಮ್ಮ ಅಪ್ಪ ಅಮ್ಮ ತಮ್ಮ ಮಗಳ ಮೇಲೆ ಅದೆಷ್ಟೋ ನಿರೀಕ್ಷೆಗಳನ್ನಿಟ್ಟಿರುತ್ತಾರೆ. ಆದರೆ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ತನ್ನನ್ನು ತಾನೇ ಕಳೆದು ಕೊಳ್ಳುವ ಈ ಹುಡುಗೀರು ಅವಿದ್ಯಾವಂತರೇನು ಅಲ್ಲ. ಎಲ್ಲರೂ ಚೆನ್ನಾಗಿ ಓದಿದವರೇ..ಆದರೂ ಇರುಳು ಕಂಡ ಬಾವಿಗೆ ಹಗಲು ಬೀಳುತ್ತಾರೆ. ಊರಿನಿಂದ ಬರುವಾಗ ಮುಗ್ದೆಯಾಗಿದ್ದ ಹೆಣ್ಣು ಮಗಳು ಬೆಂಗಳೂರಿನ ಆಡಂಭರದ ಜೀವನಕ್ಕೆ ಮಾರುಹೋಗುತ್ತಾಳೆ. ಲೈಫ್ ಎಂಜಾಯ್ ಮಾಡಬೇಕೆಂಬ ಆಸೆ, ಪ್ರೀತಿ ಪ್ರೇಮದ ಬಗ್ಗೆಯಿರುವ ಹುಚ್ಚು ಭ್ರಮೆಯೇ ಹೆಣ್ಣಿನ ಜೀವನವನ್ನೇ ನಶಿಸುತ್ತದೆ. ಇಂತಹಾ ಸುದ್ದಿಗಳ ಬಗ್ಗೆ ನಾವು ದಿನ ನಿತ್ಯ ನೋಡುತ್ತೇವೆ, ಕೇಳುತ್ತೇವೆ. ಆದರೂ ಅದೇ ತಪ್ಪನ್ನು ಪುನರಾವರ್ತಿಸುತ್ತೇವೆ. ಇದ್ಯಾಕೆ ಹೀಗೆ ಎಂದು ಕೇಳಿದರೆ Mistake makes a Woman Perfect ಎನ್ನಬಹುದೇನೋ?
Comments
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
In reply to ಉ: ಯಾಕಿಂಗಾಡ್ತಾರೋ ಈ ಹುಡುಗಿರು... by kamalap09
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
In reply to ಉ: ಯಾಕಿಂಗಾಡ್ತಾರೋ ಈ ಹುಡುಗಿರು... by manjunath s reddy
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
In reply to ಉ: ಯಾಕಿಂಗಾಡ್ತಾರೋ ಈ ಹುಡುಗಿರು... by inchara123
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
In reply to ಉ: ಯಾಕಿಂಗಾಡ್ತಾರೋ ಈ ಹುಡುಗಿರು... by rashmi_pai
ಉ: ಯಾಕಿಂಗಾಡ್ತಾರೋ ಈ ಹುಡುಗಿರು...
ಉ: ಯಾಕಿಂಗಾಡ್ತಾರೋ ಈ ಹುಡುಗಿರು...