ಪೋಂಜಿ ಸ್ಕೀಮ್ ಎನ್ನುವ ಟೋಪಿ ಕತೆ

ಪೋಂಜಿ ಸ್ಕೀಮ್ ಎನ್ನುವ ಟೋಪಿ ಕತೆ

ಮನೆ ಬಾವಿಗೆ ಇಲಿ ಬಿತ್ತಂತೆ.ಅದನ್ನು ಹೊರ ತೆಗೆಯಬೇಕಲ್ಲಾ? ಸತ್ತರೆ ಬಾವಿ ನೀರು ಹಾಳಾಗುತ್ತದೆ ನೋಡಿ.

ಬೆಕ್ಕು ಇಳಿಸಿದರೆ,ಅದು ಇಲಿ ತಿಂದೀತು ಅಂತ ಸಲಹೆ ಬಂತು.

ಆದರೆ ಬೆಕ್ಕನ್ನು ಹೊರತೆಗೆಯುವುದು ಹೇಗೆ ಎನ್ನುವ ಸಮಸ್ಯೆ.

ಅದಕ್ಕೆ ಅದೆಲ್ಲ ಬೇಡ,ಇಲಿ ಪಾಷಾಣ ಹಾಕೋಣ.

ಇಲಿ ನೀರು ಕುಡಿದು ಸತ್ತು ಹೋದಾಗ,ಅದನ್ನು ಹೊರಗೆತ್ತಿ ಹಾಕೋದು ಸುಲಭ ಅಂತ ರಾಂಪ ಪರಿಹಾರ ಸೂಚಿಸಿದನಂತೆ :)

----------------------------------------------------------------

ರಾಂಪನ ಮನೆಗೆ ಕಳ್ಳರು ನುಗ್ಗಿದರು.ವಾಶಿಂಗ್ ಮೆಶೀನ್,ಫ್ರಿಜ್,ಕಂಪ್ಯೂಟರ್ ಎಲ್ಲಾ ಒಯ್ದರೂ,ಟಿವಿ ಮುಟ್ಟಲಿಲ್ಲ.

ಯಾಕಿರಬಹುದು ಎಂದಿರಾ?

"ನಾನಾಗ ಟಿವಿ ನೋಡ್ತಿದ್ದೆನಲ್ಲಾ",ಎಂದ ರಾಂಪ :)

----------------------------------------------------------------------

ponzi scheme ಎನ್ನುವ ಟೊಪ್ಪಿ ಕತೆ

ದಕದಲ್ಲೀಗ ಬಾಬಣ್ಣ ಎನ್ನುವ ಖದೀಮ ಸುದ್ದಿಯಲ್ಲಿದ್ದಾನೆ.ಆತ ಬಡ್ಡಿಯ ಆಸೆ ತೋರಿಸಿ,ಅಪಾರ ಹಣ ಸಂಗ್ರಹಿಸಿ,ಈಗ ನಾಪತ್ತೆಯಾಗಿದ್ದಾನೆ.ಈ ಖದೀಮರ ಪಿತಾಮಹ ಚಾರ್ಲ್ಸ್ ಪೋಂಜಿ ಎನ್ನುವಾತನಂತೆ.ಅವನ ಹೆಸರಿನಿಂದ, ಈ ರೀತಿಯ ಮೋಸಕ್ಕೆ ಪೋಂಜಿ ಸ್ಕೀಮ್ ಎನ್ನುವ ಹೆಸರೇ ಇದೆಯಂತೆ.ಉದಯವಾಣಿಯ ಈ ಬರಹ ನೋಡಿ.

-----------------------------------------------------------

Rating
No votes yet

Comments