ಕದನ ಕುತೂಹಲ

ಕದನ ಕುತೂಹಲ

ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ!


ಯಾರಾದರೂ ಬಿಟ್ಟಾರಾ..?


ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ.


ಆಆಹಾಹಾ...ಅದೇನು ಸಂತೋಷ..


ರಸ್ತೆಯಲ್ಲಿ ಯಾರಾದರು ಇಬ್ಬರು ಏರುಸ್ವರದಲ್ಲಿ ಮಾತನಾಡಲು ಶುರುಮಾಡಲಿ..., ಜನರೊಂದಿಗೆ ನಾನೂ ನನ್ನ ಕೆಲಸವೆಲ್ಲಾ ಬದಿಗೊತ್ತಿ ಜಗಳ ನೋಡುತ್ತಿರುತ್ತೇನೆ.


ಏನೋ ಒಂದು ತರಹ ಖುಷಿ...


ಜಗಳ,ಗಲಭೆ ಅಂದರೆ ಕೆಟ್ಟ ಕುತೂಹಲ- ನಾವು ಬೆಳೆದು ಬಂದಿದ್ದೇ ಹಾಗೇ :


ಬಾಲ್ಯದಲ್ಲಿ ದೇವತೆಗಳು-ರಾಕ್ಷಸರ ನಡುವೆ ಯುದ್ಧದ ಕತೆ ಕೇಳುವ ಕುತೂಹಲ.


ಯಕ್ಷಗಾನ ನೋಡಲು ಹೋದರೆ-ಯುದ್ಧವಾಗುವಾಗ(ರಡ್ಡಡ್ಡಡ್ಡ ಡ್ಡೈ ಚಂಡೆ ಶಬ್ದ ಕೇಳಿದಾಗ), ಅಡ್ಡಾದಿಡ್ಡಿ ಮಲಗಿದ್ದಲ್ಲಿಂದ ಎದ್ದು ಕುಳಿತು ನೋಡುತ್ತಿದ್ದೆವು.


ಸಿನೆಮಾ ಕೊನೆಯಲ್ಲಾದರೂ ಹೀರೋ ವಿಲನ್ ಜತೆ- ಡಿಶುಂ ಡಿಶುಂ-ಹೋರಾಡಲೇಬೇಕು.


ಇಂಗ್ಲೀಷ್ ಸಿನೆಮಾ ಅರ್ಥವಾಗದಿದ್ದರೂ ಗನ್‌ಫೈಟ್..ಟಿಶ್ಯೂಂ..ಡಮಾರ್.. ಅರ್ಥವಾಗುತ್ತಿತ್ತು.


ಸ್ಕೂಲ್‌ನಲ್ಲೂ ತಲೆತುಂಬಾ ಪಾಣಿಪತ್,ಪ್ಲಾಸೀ...ಇತ್ಯಾದಿ ನೂರಾರು ಕದನ ನಡೆಯುತ್ತಿತ್ತು. ಶಾಂತಿ ಬಗ್ಗೆ ಆಸಕ್ತಿ,ಕುತೂಹಲ ಬಂದುದು ಮದುವೆ ವಯಸ್ಸಿಗೆ ಬಂದಾಗಲೇ.. :)


ಏನೋ ಹೇಳಲು ಹೋಗಿ ಇನ್ನೇನೋ ಹೇಳುತ್ತಿದ್ದೇನೆ. ಹಿಂದಿನ ಮನೆಯಲ್ಲಿ ಕದನದ ಬಗ್ಗೆ ಹೇಳಲು ಹೊರಟ್ಟಿದ್ದೆ ಅಲ್ವಾ? ಅದೂ..


ಹಿಂದಿನ ಮನೆಯವಳದ್ದಲ್ಲ, ನನ್ನಾಕೆಯದ್ದೇ ಸ್ವರ. ಕಿರುಚುವಾಗ ಎಲ್ಲಾ ಹೆಂಗಸರ ಸ್ವರ ಒಂದೇ ಅಲ್ಲವಾ? (ಕಪ್ಪು ೭ರಲ್ಲಿ?)


ನಿನ್ನೆ ರಾತ್ರಿಯ (ಉಂಡು ಮಲಗುವಾಗಿನ) ಕದನ, ವಿರಾಮದ ನಂತರ ಈ ದಿನಕ್ಕೆ ಮುಂದುವರಿದಿದೆ..


ವಿಷಯ ಏನಪ್ಪಾ ಅಂದರೆ......


ವಿಷಯ ಯಾರಿಗೆ ಬೇಕು? ನೋಡುಗರಿಗೆ ಕದನ ಮುಂದುವರಿಯಬೇಕು.


ನನಗೆ ಕದನ ವಿರಾಮ ಬೇಕು..


ಹೇಗೂ ಚಳಿಗಾಲದಲ್ಲಿ ಹಗಲು ಕಮ್ಮಿಯಲ್ವಾ... :)


-ಗಣೇಶ.

Rating
No votes yet

Comments