’ಸಂಪದ ಕನ್ನಡ ತಾಣ" ಕ್ಕೆ ಪಾದಾರ್ಪಣೆ. ಅರ್ಥಾತ್ ಮೊದಲ ಹೆಜ್ಜೆ !
ಶಾಲೆಗೆ ಹೋಗುವ ಮಗುವಿನ ಮೊದಲ ದಿನದ ಸವಿ - ಕಹಿ ಸ್ಮೃತಿಗಳು - ಸಂಕೋಚ, ವಿಸ್ಮಯ, ಆನಂದ, ಹೆದರಿಕೆ, ಎವೆಲ್ಲಾ ನನಗೆ ಅನುಭವಕ್ಕೆ ಬಂದದ್ದು, ಸಂಪದ ಕ್ಕೆ ಪಾದಾರ್ಪಣೆಮಾಡಿದದಿನದಂದು. ಪೀ.ಸಿ. ಯನ್ನು ಮುಟ್ಟಲು ಹಿಂಜರಿಯುತ್ತಿದ್ದ ನನಗೆ, ನನ್ನ ಪ್ರೀತಿಯ ಮಕ್ಕಳಾದ ಚಿ. ರವೀಂದ್ರ ಮತ್ತು ಚಿ. ಪ್ರಕಾಶರು ಸಹಾಯಮಾಡಿದರು. ಈ ದಿನ ಪೀ. ಸಿ. ಯಷ್ಟು ಪ್ರಿಯವಾದ ಸಂಗಾತಿ ನನಗೆ ಹೆಚ್ಚಾಗಿಲ್ಲ, ಎಂದರೆ ಅತಿಶಯೋಕ್ತಿಯಲ್ಲ. !
ಈ ದಿನ (೨೨-೧೨-೨೦೦೬) ಅಂದರೆ ಸುಮಾರು ಒಂದು ವರ್ಷದ ನಂತರ, ಹಿಂದೆ ನೋಡಿದಾಗ ನನ್ನ ಓಟದಲ್ಲಿ ಪ್ರಗತಿ ಅತಿ ಕಡಿಮೆದರದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ನನ್ನ ವಯಸ್ಸಿನ ಹರೆಯದ ಗೆಳೆಯರಿಗೆ ಕಂಪ್ಯೂಟರ್ ಬಳಸಲೂ ಬರುವುದಿಲ್ಲ. ಅಂದರೆ ಕುರುಡರ ಮಧ್ಯೆ ನಾನೇ ಸ್ವಲ್ಪ ಉತ್ತಮ ಕುರುಡ ಎನ್ನಬಹುದೆ ?
ನನ್ನ ಪ್ರೀತಿಯ 'ಸಂಪದ'ಕ್ಕೆ ಬರೆಯಲು ನನಗೆ ಎಲ್ಲಿಲ್ಲದ ಆನಂದ ! ಈ ಗಾಗಲೇ ಅದು ಪ್ರಗತಿಯತ್ತ ದಾಪುಗಾಲು ಹಾಕುತ್ತಾ ನಾಗಾಲೋಟದಿಂದ ಸಾಗಿದೆ. ಅದರ ವೇಗಕ್ಕೆ ನನ್ನಂಥವನು ಸಮೀಕರಿಸಿಕೊಂಡು ಓಡಲು ಅನುವುಮಾಡಿಕೊಳ್ಳಬೇಕಾಗಿದೆ !
ನಾನು ಅಲ್ಪ -ಸ್ವಲ್ಪ ಏನಾದರೂ ಹೇಳುವುದನ್ನು ಸಹೃದಯರು ಓದುತ್ತಾರೆ. ಅದು ನನಗೆ ಮುದಕೊಡುವ ಸಂಗತಿ !
ಕನ್ನಡದಲ್ಲಿ ಬರೆಯಲು ಕೈಹಿಡಿದು ತಿದ್ದಿ ಬರೆಸಿದ, ಶ್ರೀಕಾಂತ ಮಿಶ್ರಿಕೋಟಿ, ಶ್ರೀನಿವಾಸ್ ಮತ್ತು ನಾಡಿಗ್ ರವರಿಗೆ ಧನ್ಯವಾದಗಳು.
ಲಕ್ಷ್ಮೀವೆಂಕಟೇಶ್.
ಮುಂಬೈ-೪೦೦ ೦೮೪
Comments
ದಯವಿಟ್ಟು ಕನ್ನಡ!