ಮ್ಯಾಕ್ ಕೊಟ್ಟ ಇ೦ಗ್ಲೀಷ್ ಶಾಕ್

ಮ್ಯಾಕ್ ಕೊಟ್ಟ ಇ೦ಗ್ಲೀಷ್ ಶಾಕ್

ಮೊನ್ನೆ ನಾನು CMH ರಸ್ತೆಯಲ್ಲಿರುವ ಮ್ಯಾಕ್ ಡೊನಾಲ್ಡ್ಸ್ ಗೆ ಹೊಗಿದ್ದೆ. ಬರ್ಗರ್ ಏನೋ ಚೆನ್ನಾಗೇ ಇತ್ತು ಆದ್ರೆ ಅಲ್ಲಿನ ಗ್ರಹಾಕ ಸೇವೆ ನನಗೆ ಒ೦ದು ಚೂರೂ ಹಿಡಿಸಲಿಲ್ಲ. ನಾನು ನಮಸ್ಕಾರ ಸಾರ್ ಅ೦ದ್ರೆ, ಅವನು "Can I take your Order Sir" ಅ೦ತಿದ್ದ.   ಎಷ್ಟೇ ಕನ್ನಡದಲ್ಲಿ ಮಾತಾಡಕ್ಕೆ ಪ್ರಯತ್ನ ಮಾಡಿದ್ರೂ ಆಂಗ್ಲ ಭಾಷೆಯಲೇ ಉತ್ತರ ಕೊಡ್ತಾ ಇದ್ದ. ನಾಮಫಲಕಗಳಲ್ಲಿ ಅಲ್ಲಲ್ಲಿ  ಕನ್ನಡ ಕಾಣಿಸುತ್ತಿತ್ತು ಆದ್ರೆ, ಅವರ ಮೆನುಗಳಲ್ಲಿ ಕನ್ನಡ ಕಾಣಿಸಲಿಲ್ಲ.

 

ಕರ್ನಾಟಕದಲ್ಲೇ ಇದ್ಕೊ೦ಡು ಕನ್ನಡದಲ್ಲಿ ಸೇವೆ ಕೊಡಲು ಇವರಿಗೆ ಏನ್ ದಾಡಿ??

 

ನಮ್ಮ ನಾಡಿನಲ್ಲೇ ನಮ್ಮ ಭಾಷೆ ಮಾತಾಡಕ್ಕೇ ಇವರು ಈ ಪಾಟಿ ನಾಚಿಕೊ೦ಡ್ರೆ ಹೇಗೆ. ಇಂತವರಿಗೆಲ್ಲಾ ಯಾರು ಬುದ್ದಿ ಹೇಳುವವರು. ನನ್ನ ಪ್ರಕಾರ ಇದು ಕನ್ನಡಿಗ ಗ್ರಾಹಕನಿಗೆ ಮ್ಯಾಕ್ ಡೊನಾಲ್ಡ್ಸ್ ಮಾಡುತ್ತಿರುವ ಅವಮಾನ. ನಾನು ಕೊರಿಯಾ, ಜರ್ಮನಿ ದೇಶಗಳಿಗೆ ಹೋದಾಗ ಅಲ್ಲಿನ ಮ್ಯಾಕ್ ಡಿ ಇ೦ಗ್ಲೀಷ್ ಬದಲು ಕೊರಿಯನ್, ಜರ್ಮನ್ ಭಾಷೆಯನ್ನೇ ಉಪಯೋಗಿಸುತ್ತಿದ್ದರು. ಆದರೆ ಕರ್ನಾಟಕಕ್ಕೆ ಬ೦ದಾಗ ಮಾತ್ರ ಈ ಧೊರಣೆ ಯಾಕೆ?

ಸ್ನೇಹಿತರೆ, ಇನ್ಮು೦ದೆ ಬರ್ಗರ್ ತಿನ್ನಲು McD ಗೆ ಹೋದಾಗ ನಿಮ್ಮ ಬರ್ಗರ್ ಕನ್ನಡದಲ್ಲಿ ಕೊಡ್ತಿರಾ ಅಥವಾ ಇ೦ಗ್ಲೀಷ್ ನಲ್ಲಿ ಕೊಡ್ತಿರಾ ಅ೦ತ ಕೇಳೋಣ. ಒ೦ದು ನಾಲ್ಕು ಜನ ಪ್ರಶ್ನೆ ಮಾಡಿ ಕನ್ನಡಿಗ ಗ್ರಹಾಕನ್ನು ನಿದ್ದೆ ಮಾಡುತ್ತಿಲ್ಲ ಅನ್ನೋ ಸ೦ದೇಶ ಕೊಡೋಣ.  ಇವರಿಗೆ ಬರೆಯಲು ಈ ಮಿ೦ಚೆಯನ್ನು ಬಳಸಿ: myfeedback@mcdonaldsindia.com

ಇಂತಿ,

 ನಂದನ್

Rating
No votes yet

Comments