ಮದುವೆಯೆಂಬ ಮಾರುಕಟ್ಟೆಯಲ್ಲಿ ಹೆಣ್ಣಿನ ಮನಸ್ಸು ಹರಾಜು

ಮದುವೆಯೆಂಬ ಮಾರುಕಟ್ಟೆಯಲ್ಲಿ ಹೆಣ್ಣಿನ ಮನಸ್ಸು ಹರಾಜು

ನಮ್ಮ ಅಜ್ಜಿ ಹೇಳುತಿದ್ದಳು ನಮ್ಮ ಕಾಲದಲ್ಲಿ ತೆರವು ಕೊಟ್ಟು ಮದುವೆ ಮಾಡಿಕೊಳ್ಳುತಿದ್ದರು ಎಂದು. ಆ ಒಂದು ಮಾತು ಕೇಳಿದಾಗಿನಿಂದ ಆ ಕಾಲ ಬಂದಾಗ ಹೆಣ್ಣು ಕೆಲವೊಂದು ಸಮಸ್ಯೆಯಿಂದ ಮುಕ್ತಿಪಡೆಯಬಹುದು.


ಮೊದಲ ಸಲ ಹುಡುಗಿಯನ್ನು ಹುಡುಗ ನೋಡುವುದಕ್ಕೆ ಬಂದಾಗ ಏನೋ ಒಂದು ತರಹದ ಆನಂದ. ತಂದೆ ತಾಯಿಯ ಕಡೆಯಿಂದ ಆಗದ ಎಷ್ಟೋ ಆಸೆಗಳನ್ನು ಪೂರೈಸಿಕೊಳ್ಳಬಹುದೆಂದು ಒಂದು ಕನಸಿನ ಲೋಕವನ್ನೇ ಸೃಷ್ಟಿಸಿರುತ್ತಾಳೆ. ಆಕೆಯು ಆ ದಿನ ಚಾಕ್ಲೇಟ್ ಬಣ್ಣದ ಸೀರೆ ಆಕೆಯ ಸೌಂದರ್ಯಕ್ಕೆ ರಂಗು ನೀಡಿತ್ತು. ಯಾರಾದರೂ ಎಷ್ಟು ಸುಂದರವಾಗಿ ಕಾಣುತಿದ್ದೀಯಾ ಎಂದಾಗ ಕನ್ನಡಿಯಲ್ಲಿ ತನ್ನ ಮುಖವನ್ನು ಇಣುಕಿ ನೋಡುತ್ತಾ, ತನ್ನ ಸೌಂದರ್ಯಕ್ಕೆ ಪರಿಯೇ ಇಲ್ಲದಂತೆ ಭಾಸವಾಗುತ್ತದೆ. ವರನ ಕಡೆಯವರ ಮುಂದೆ ಕುಳಿತಾಗ ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಿದ್ದಳಾಗಬೇಕು. ಶಾಲೆಯಲ್ಲಿ ಮೇಷ್ಟ್ರಿಗೆ ಕಲ್ಲು ಒಗೆದ ಹುಡುಗಿ ಆ ದಿನ ಹುಡುಗನ ಮುಂದೆ ಬಲಿಪಶುವಿನಂತೆ ಭಯದಿಂದ ಕುಳಿತುಕೊಳ್ಳಬೇಕಾಗುತ್ತದೆ. ಪದೇ ಪದೇ ಹುಟ್ಟಿದ ದಿನಾಂಕ, ಜನ್ಮ ನಕ್ಷತ್ರ, ರಾಶಿಗಳನ್ನು ಪ್ರತಿ ಸಲವೂ ಅಮ್ಮನನ್ನು ಕೇಳುತ್ತಾ ಗುನುಗುತಿರುತ್ತಾಳೆ. ಇವುಗಳನ್ನು ಹೇಳುವಲ್ಲಿ ತಪ್ಪಿದರೇ ವಧು ಪರೀಕ್ಷೆಯಲ್ಲಿ ಫೇಲಾಗುವೆನೆಂಬ ಭಯ ಆವರಿಸಿರುತ್ತದೆ.


ಮಧ್ಯಮ ವರ್ಗದ ಅಥವಾ ಹಳ್ಳಿಯ ಹುಡುಗಿ ವರನ ಕಡೆಯವರು ಬರುತ್ತಾರೆಂದರೆ ಊಟಕ್ಕೆ ಕೂಡುವ ಮಣೆಯಿಂದ ಹಿಡಿದು ಊಟ ಬಡಿಸುವ ಪದಾರ್ಥಗಳಿಗಾಗಿ ಏನೇನೋ ಕಸರತ್ತು ಮಾಡಿ ಜೋಡಿಸಿರುತ್ತಾರೆ. ಕೆಲವೊಂದು ಮನೆಯಲ್ಲಿ ಊಟಕ್ಕೆ ಕೂಡುವ ಮಣೆಯೂ ಇರುವುದಿಲ್ಲ ಮತ್ತು ಪದಾರ್ಥವೂ ಇರುವುದಿಲ್ಲ. ಆದರೆ ತಂದೆ ತಾಯಿಗಳು ಸಾಲಮಾಡಿ ಸತ್ಕರಿಸುತ್ತಾರೆ. ಇಷ್ಟೆಲ್ಲ ತಯಾರಿಯಿಂದ ಮೊದಲ ಸಲ ವಧು ಪರೀಕ್ಷೆಗೆ ಕುಳಿತು ಅದರಲ್ಲಿ ವಿಫಲಳಾದಾಗ, ಆಕೆಯು ಕಟ್ಟಿರುವ ಕನಸಿನ ಗೋಪುರ ನುಚ್ಚುನೂರಾಗುತ್ತದೆ.


ಕೆಲವೊಂದು ಸಮಯದಲ್ಲಿ ಒಂದೇ ದಿನ ಇಬ್ಬರು ಗಂಡಿನ ಕಡೆಯವರು ಬರುವುದು ಉಂಟು. ಆ ಸಮಯದಲ್ಲಿ ಬೇರೆ ಬೇರೆ ಸೀರೆಯುಟ್ಟು neatಆಗಿ ready ಆಗಿ ವರನಮುಂದೆ ಕುಳಿತುಕೊಳ್ಳುವಾಗ ಹೆಣ್ಣಿನ ಜೀವನ ಇಷ್ಟೇನಾ.....! ಎಂದು ಮನಸಿನಲ್ಲಿ ಬಂದು ಹೋಗಿರುತ್ತದೆ....


ಆ ಒಂದು ದಿನ ಹುಡುಗಿಯೇನಾದರೂ ತಲೆತುಂಬ ಹೂ ಮುಡಿದು ಹೊರಗೆ ಕಾಲಿಟ್ಟರೇ ಜನ ಮಾತಿನ ಸುರಿಮಳೆ ಗಯ್ಯುತ್ತಾರೆ. ಹುಡುಗ ಯಾರು...? ಯಾವೂರು....? ಏನು ಕೆಲಸ....? ಎಂದು ಕೇಳಿ, ಮುಂದಕ್ಕೆ ಹೋದ ಮೇಲೆ ಇಕೆ ಇದರಲ್ಲಿಯೇ ಮುದುಕಿಯಾಗುತ್ತಾಳೆ ಎಂದು ಗೂಬೆ ಕೂರಿಸುತ್ತಾರೆ....!


ಹುಡುಗಿಗೆ ಒಂದು ಮಚ್ಚೆಯೂ ಬಲಕ್ಕೆ ಇರಬಾರದೆಂದು ಲೆಕ್ಕ ಹಾಕುವ ಜನ, ಹುಡುಗನಿಗೆ ಮಚ್ಚೆಯೇನೂ ಕಾಯಿಲೆಯಿದ್ದರೂ ಅವನು ಗಂಡಸು ಎಂದು ಹೇಳುವವರೂ ಇದ್ದಾರೆ.....!


ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಹೆಣ್ಣು, ಆಕೆಯ ಹೆತ್ತವರೋ, ಗಂಡಿನ ಕಡೆಯವರೋ ಅಥವಾ ಸಮಾಜದ ಪದ್ದತಿಗಳೋ... ಒಟ್ಟಿನಲ್ಲಿ ಇದಕ್ಕೆ ಬಲಿಯಾಗುವವರು ಕೇವಲ ಹೆಣ್ಣು ಹೆತ್ತವರು ಮತ್ತು ಆ ಹೆಣ್ಣು ಮಾತ್ರ........... 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 


 

Rating
No votes yet

Comments