ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು
ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು
ಮೊದಲು ನುಡಿಸಿದ ರಾಗ ನುಲಿಯುತಿದೆ ಇನ್ನೂ
ಬೇರೇ ರಾಗ ಬೇಕೇ ನನಗೆ ಬೇರೇ ಭಾವ ಬೇಕೇ
ಮೊದಲ ಕಂಡ ಕನಸು ಕೂಡ ನನಸಾಗದೇ ಉಳಿದಿದೆ
ಬೇರೇ ಕನಸು ಬೇಕೇ ನನಗೆ ಬೇರೇ ಆಸೆ ಬೇಕೇ
ನನ್ನ ಮನದ ತುಮಲ ನಿನಗೇ ಹೇಗೆ ತಾನೇ ತಿಳಿದೀತು
ನನ್ನ ಭಾವದ ಭಾವ ಹೇಗೆ ತಾನೇ ಹೊಳೆದೀತು
ನನ್ನ ನಿನ್ನ ನಡುವೆಯಿಂದು ಇಲ್ಲವೊಂದು ಸೇತುವೆ
ನನ್ನ ನಿನ್ನ ನುಡುವೆಯಿಂದು ಇಲ್ಲವೊಂದು ಭಾವವು
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು
ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು .
Rating
Comments
ಉ: ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು