ಅಕ್ಕನ ಮಾತು

ಅಕ್ಕನ ಮಾತು

 

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.

ಅಕ್ಕನ ಮಾತು ಅಮೃತದಂತಿದೆ,ನಾವು ಮಾಡುವ ಪೂಜೆ ಸಾರ್ಥಕವಾಗಬೇಕಿದ್ದರೆ ,ಭಗವಂತನಿಗೆ ತಲುಪಬೇಕಿದ್ದರೆ ನಮ್ಮಲ್ಲಿರಬೇಕಾದ ಗುಣಗಳಿವು.

ಪರಿಣಾಮಿಗಳಲ್ಲದವರಲ್ಲಿ - ಇದೊಂದು ಅರ್ಥವಾಗಿಲ್ಲ ನನಗೆ ಯಾರಾದ್ರೂ ತಿಳಿಸ್ತೀರಾ?


 

Rating
No votes yet

Comments