ನಮ್ಮ ಬೆಂಗಳೂರು !!!

ನಮ್ಮ ಬೆಂಗಳೂರು !!!

ಹರಿಶ್ಚಂದ್ರ ಘಾಟನಲ್ಲಿ   ಹೆಣ   ಹೂಳೋಕ್ಕೆ ಜಾಗ ಇಲ್ಲ

ಬಿ ಎಮ್ ಟಿ ಸಿ   ಬಸ್ನಲ್ಲಿ   ತಳ   ಊರೊಕ್ಕೆ    ಸ್ಥಳ ಇಲ್ಲ

ಏರ್ ಪೋರ್ಟ್ ಕಡೆ  ಹೋಗುವವರಿಗೆ   ನೆಲ ಕಾಣಲ್ಲ

ರೈಲ್ವೆ  ಸ್ಟೇಷನ್   ಕಡೆ   ಹೋಗುವವರಿಗೆ   ಜನ ಕಾಣಲ್ಲ

ಮಾರ್ಕೆಟ್   ಪೂರ   ಮೂರಾಬಟ್ಟೆ

ಮಜೆಸ್ಟಿಕ್ ಒಂದು ಕುರಿ ಹಟ್ಟಿ

ಕ್ರಿಮಿ ಕೀಟ   ಬದುಕಿದಾಂಗೆ   ಬದುಕೋ ಜನ ಒಂದುಕಡೆ

ಹದ್ದು ಗಿಡಗ  ಬದುಕಿದಾಂಗೆ   ಬದುಕೋರು  ಇನ್ನೊಂದು ಕಡೆ

ಸರ್ಕಲ್ನಲ್ಲಿ  ಸರಿದಾಡೋಕಾಗಲ್ಲ

ಸೆಂಟ್ರಲ್ನಲ್ಲಿ  ಉಸಿರಾಡೋಕಾಗಲ್ಲ

ವಿಧಾನ ಸೌಧದಲ್ಲಿ  ಒಂದು  ಸಂತೆ

ಹೈ ಕೋರ್ಟ್ ನಲ್ಲಿ  ಇನ್ನೊಂದು  ಸಂತೆ

ಲಾಲಭಾಗ ನಲ್ಲಿ  ಬೇರೆದೇ  ಸಂತೆ

ಕಬ್ಬನ್  ಪಾರ್ಕ್ನಲ್ಲಿ  ಕೇಳೋರೆ  ಇಲ್ವಂತೆ.

Rating
No votes yet

Comments