ಪ್ರಾಚೀನ ಮತ್ತು ಕನ್ನಡ ಹೆಸರುಗಳೇಕೆ ಬೇಡ?
ಬರಹ
ಬೆಂಗಳೂರು ನಗರದಲ್ಲಿ ಆಡಳಿತ ನಡೆಸುವವರಿಗೆ ಮತ್ತು ವಾಸಿಸುವವರಿಗೆ ಹಳೆಯ ಮತ್ತು ಕನ್ನಡದ ಹೆಸರುಗಳನ್ನು ಕಂಡರೆ ದ್ವೇಷವೇನಾದರೂ ಇದೆಯೆ? ಕೆಲವು ಉದಾಹರಣೆ ನೋಡಿ.
ಬಹಳ ಹಿಂದೆಯೇ 'ಸುಂಕೇನಹಳ್ಳಿ' ಎಂಬುದನ್ನು ಬಸವನಗುಡಿ ಎಂದು ಬದಲಾಯಿಸಿದರು.
'ಗಂಗೇನಹಳ್ಳಿ' ಎಂಬುದನ್ನು ಗಂಗಾನಗರ ಎಂದು ಬದಲಾಯಿಸಿದರು.
'ಬೆಂಗಳೂರು' ಎಂಬುದೇ ಬ್ಯಾಂಗಲೋರ್ ಆಗಿತ್ತು; ಮತ್ತು ಮತ್ತೆ ಬೆಂಗಳೂರು ಆಗುವುದಕ್ಕೆ ಕಾಯುತ್ತಿದೆ.
'ದೀವಟಿಗೆನಗರ' ಎಂಬ ಅಚ್ಚಗನ್ನಡದ ಹೆಸರಿನ ಸ್ಥಳವನ್ನು ದೀಪಾಂಜಲಿನಗರ ಎಂದು ಸಂಸ್ಕೃತೀಕರಣಗೊಳಿಸಿದರು.
ವಿಜಯನಗರ ಅರಸರ ಕಾಲದಲ್ಲಿ ದೇವರ ಉತ್ಸವಕ್ಕೆ ರಥೋತ್ಸವಕ್ಕೆ ಮೆರವಣಿಗೆಗೆ ದೀವಟಿಗೆಗಳನ್ನು ಹಿಡಿಯುತ್ತಿದ್ದ ಜನರಿಗೆ ದತ್ತಿಯಾಗಿ ಬಂದಿದ್ದ ಊರು ದೀವಟಿಗೆ ನಗರ ಈಗ ದೀಪಾಂಜಲಿನಗರವಾಗಿರುವುದು ನನಗಂತೂ ಬೇಸರವಾಗಿದೆ.
ನಿಮಗೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪ್ರಾಚೀನ ಮತ್ತು ಕನ್ನಡ ಹೆಸರುಗಳೇಕೆ ಬೇಡ?
ಉ: ಪ್ರಾಚೀನ ಮತ್ತು ಕನ್ನಡ ಹೆಸರುಗಳೇಕೆ ಬೇಡ?