ಕೆಲವು ಕನ್ನಡ ಪದಗಳಿಗೆ ಬಳಸುವ ಇಂಗ್ಲೀಷ್ ಪದಗಳು ಕನ್ನಡ ಅನುವಾದಿತ ಪದಗಳಿಗಿಂತ ಸೂಕ್ತ ಮತ್ತು ಸುಲಭ ಬಳಸಲು !

ಕೆಲವು ಕನ್ನಡ ಪದಗಳಿಗೆ ಬಳಸುವ ಇಂಗ್ಲೀಷ್ ಪದಗಳು ಕನ್ನಡ ಅನುವಾದಿತ ಪದಗಳಿಗಿಂತ ಸೂಕ್ತ ಮತ್ತು ಸುಲಭ ಬಳಸಲು !

Comments

ಬರಹ

ಕೆಲವು ಕನ್ನಡಪದಗಳಿಗೆ ಬಳಸುತ್ತಿರುವ ಇಂಗ್ಲೀಷ್ ಪದಗಳು ಸೂಕ್ತ ಮತ್ತು ಸುಲಭವೆನಿಸುತ್ತದೆ. ಇಂತಹ ಪದಗಳಿಗೆ ಕನ್ನಡ ಅನುವಾದಿತ ಪದಗಳು ಕೆಲವೊಮ್ಮೆ ಅರ್ಥೈಸಲು ಕಷ್ಟವಾಗುವುದರ ಜೊತೆಗೆ ಸುಲಭವೂ ಎನಿಸುವುದಿಲ್ಲ.

*  ಉದಾ: "ದ್ವಿಚಕ್ರ ವಾಹನ" ಅಂತ ಬೈಸಿಕಲ್ ಗೆ ಹೇಳುವುದರ ಬದಲು "ಬೈಸಿಕಲ್" ಅಂತ ಹೇಳಿದರೆ ನಿರ್ಧಿಷ್ಟವಾದ ಅರ್ಥವೂ ಕೊಡುತ್ತದೆ. ಅಂದರೆ, ಯಾವ ತರಹ "ದ್ವಿಚಕ್ರ ವಾಹನ" (ಬೈಸಿಕಲ್? ಸ್ಕೂಟರ್?, ಮೊಪೆಡ್?) ಎಂದೂ ತಿಳಿಸುತ್ತದೆ. ದ್ವಿಚಕ್ರವಾಹನ ಅಂತ ಹೇಳಿದರೆ, ಯಾವ ತರಹ ಅನ್ನುವ ಪ್ರಶ್ನೆ ಬರುತ್ತದೆ?  ಇದಕ್ಕೆ ನೀವೇನಂತೀರಾ?

(ಅಮೇರಿಕಾದಲ್ಲಿರುವ ಯಯ್ಟೀನ್ ವ್ಹೀಲರ್ ಟ್ರಕ್ ಗೆ = ೧೮ ಚಕ್ರದ ಭೂತಾಕಾರದ ವಾಹನ (ಕನ್ನಡದಲ್ಲಿ ಹೇಳುವುದಾದರೆ)

* "ಎನ್ಸೈಮ್" ಅನ್ನುವ ಪದಕ್ಕೆ "ಕಿಣ್ವನ" ಅಥವಾ (ಚಿಣ್ವನ) ಅನ್ನೋ ಪದ ಬಳಸಿದರೆ ಅದೂ ಒಂಥರ ಅನರ್ಥವಾದಂತೆ ಅನ್ನಿಸುವುದಿಲ್ಲವೇ?

( ಹೀಗೇ "ಆಸ್ತಮಾ" ಗೆ "ಗೂರಲು" ಅಂತ ಹೇಳಿದರೆ, ಜನಸಾಮಾನ್ಯರಿಗೆ ಅರ್ಥವಾಗದಿರುವುದು ಸಹಜವಾಗಿದೆ)

* ಈಗಾಗಲೇ ಬಳಸುವ ಇಂತಹ ಇಂಗ್ಲೀಷ ಪದಗಳನ್ನು ಅರ್ಥೈಸುವುದು, ಕನ್ನಡ ಅನುವಾದಿತ ಪದಗಳಿಗಿಂತ ಸುಲಭವಾಗಿದೆ. ಇದಕ್ಕೆಲ್ಲಾ ಕನ್ನಡಪದಗಳನ್ನೇ ಉಪಯೋಗಿಸಿ ಎಂದರೆ ಒಂದು ತರಹ ಹುಚ್ಚು ಅನ್ನಿಸುವುದಿಲ್ಲವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet