ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

 


ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರ
ಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಷ್ಟಿವೆ ಭಯಂಕರ


ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿ
ಸೋತಂತೆ ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ


ಕನ್ನಡದಲಿ ಅನ್ಯಭಾಷಾ ಪದಗಳೇ ಬೇಡ ಎಂಬ ಮಡಿವಂತಿಕೆ ಬೇಕಿಲ್ಲ
ಆದರೆ ಎಲ್ಲಾ ಆಂಗ್ಲ ಪದಗಳನ್ನೂ ಕಂಗ್ಲೀಷಿಕರಿಸ ಬೇಕೆಂದೇನೂ ಇಲ್ಲ


ಅಭಿಯಂತರ ಇಂಜಿನೀಯರ್ ಆಗಿ ಉಳಿದರೆ ನಿಜಕ್ಕೂ ಎರಡು ಮಾತಿಲ್ಲ
ಆದರೆ ಗುತ್ತಿಗೆದಾರ  ಕಂಟ್ರಾಕ್ಟರ್ ಆಗಿಯೇ ಉಳೀಬೇಕಾದ ಅಗತ್ಯ ಇಲ್ಲ


ಆಂಗ್ಲ ಪರಭಾಷಾ ಪದಗಳಿಂದ ಸಂಪದ್ಭರಿತವಾಗಿರುವ ಮಾತಂತಿರಲಿ
ತನ್ನತನವನ್ನೇ ಕಳೆದುಕೊಂಡು ಪಡೆವ ಸಂಪತ್ತು ನಿಜದಿ ದೂರವಿರಲಿ


ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು
ಕನ್ನಡವನ್ನು ಸಾರಾಸಗಟಾಗಿ ಆಂಗ್ಲಕ್ಕಡವಿಡದಂತೆ ನೋಡಿಕೊಳ್ಳಬೇಕು


ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು
ಒಟ್ಟಾರೆ ತಂದು ಸೇರಿಸದಿರಿ ಕನ್ನಡದಲಿ ಕನ್ನಡೇತರ ಭಾಷಾ ಪದಗಳನ್ನು


*****************************************


-ಆತ್ರಾಡಿ ಸುರೇಶ ಹೆಗ್ಡೆ.


 


ಇದು ಡಾ. ಮೀನಾರು ಹುಟ್ಟು ಹಾಕಿರುವ ಈ ಚರ್ಚೆಯಿಂದ ಸ್ಪೂರ್ತಿಗೊಂಡ ಕವನ.


ಕೆಲವು ಕನ್ನಡ ಪದಗಳಿಗೆ ಬಳಸುವ ಇಂಗ್ಲೀಷ್ ಪದಗಳು ಕನ್ನಡ ಅನುವಾದಿತ ಪದಗಳಿಗಿಂತ ಸೂಕ್ತ ಮತ್ತು ಸುಲಭ ಬಳಸಲು !http://sampada.net/forum/22957


 

Rating
No votes yet

Comments