ಗೆಳೆಯಾ ನೀ ದೂರವಾದೆ ಏಕೆ?

ಗೆಳೆಯಾ ನೀ ದೂರವಾದೆ ಏಕೆ?

ಗೆಳೆಯಾ


ಬಾಳಿನರ್ಧಕ್ಕೆ ಬಂದು ಬಾಳುವಾಸೆ


ತುಂಬಿ ಮನ ಕರಗಿ ನಿನ್ನಲ್ಲಿ


ಲೀನವಾಯಿತೆನ್ನುವಾಗಲೆ


ನೀ ದೂರವಾದೆ ಏಕೆ?


 


ಮುಗಿಲೆತ್ತರಕ್ಕೂ ಕೈ  ಚಾಚಿ


ಚಂದಿರನ ಮುಡಿಗೆ ಇರಿಸುವಾ


ಕನಸ   ನೀಡಿ  ನಡೆದೆ ನೀನೆಲ್ಲಿಗೆ?


 


ಸಕ್ಕರೆಯ ಸಿಹಿ ಮಾತುಗಳ


ಪೋಣಿಸಿ, ಬಾಳ ಸಿಹಿಯನೆಲ್ಲ


ಬರಿದು ಮಾಡಿದ್ದೇಕೆ?


 


 ಬದುಕಿಗೆ ಬಣ್ಣಬಣ್ಣದಾಸೆ


ತೋರಿ  ನೀ ಬದುಕಿನಷ್ಟೂ


 ಬಣ್ಣಗಳ  ಕರಗಿಸಿದ್ದೇಕೆ?


 


ಸ್ವಪ್ನದಾಚೆಗಿನ ಲೋಕಕೆ  


ಕರೆದೊಯ್ದು ನಡುದಾರಿಯಲ್ಲಿ


ಒಂಟಿಯಾಗಿ ಬಿಟ್ಟುದೇಕೆ?


 


ಸ್ವಚ್ಚ ಪ್ರೀತಿಯ ಧಾರೆ ಎರೆದ


ಅಚ್ಚ ಮನಸ ಅರ್ಥವಾಗದೆ


ರಾಡಿ ಮಾಡಿ ಓಡಿದ್ದೇಕೆ?


 


ಬೇಡ ಗೆಳೆಯಾ ಮತ್ತಾವ ಸುಳಿಗೂ


ಸಿಗಲಾರೆ ನಾ . ಮತ್ತೆಂದೂ


ಬಲೆಗೂ ಬೀಳಲಾರೆ ನಾ


ಬಿದ್ದದ್ದು ಸಿಲುಕ್ಕಿದ್ದು ಸಾಕು


ಸಾಕೆನ್ನುವಷ್ಟು  ನೋವು


ಎದೆ ತುಂಬಾ, ಕರಗಿದೆ


ಕಣ್ಣಿಂದ  ನೀರಾಗಿ

Rating
No votes yet

Comments