ಜೋಡಿ ಗ್ರಾಮಗಳ ಉಗಮದ ಬಗ್ಗೆ ಮಾಹಿತಿ ಅಂತರ್ಜಾಲದಲ್ಲಿ ಸಿಗಬಹುದೇ?

ಜೋಡಿ ಗ್ರಾಮಗಳ ಉಗಮದ ಬಗ್ಗೆ ಮಾಹಿತಿ ಅಂತರ್ಜಾಲದಲ್ಲಿ ಸಿಗಬಹುದೇ?

ನಮ್ಮೂರು ಹರಿಹರಪುರ.ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ.  ಶಾಲಿವಾಹನ ಶಕೆ ೧೩೧೭ ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ[ರಥ ಸಪ್ತಮಿ] ಭಾನುವಾರದಂದು ಅಂದರೆ ಕ್ರಿ.ಶ. ೧೩೯೬ ರ ಜನವರಿ ೧೬ರಂದು ತುಂಗಭದ್ರಾ ನದಿ ತಟದ ವಿರೂಪಾಕ್ಷ ಸನ್ನಿಧಿಯಲ್ಲಿ ಎರಡನೇ ಹರಿಹರ ಮಹಾರಾಜನು ವೇದ ಪಂಡಿತ ಮಾಧವಾಧ್ವರಿ ಎಂಬುವರಿಗೆ ತವನಿಧಿ ಎಂಬ ಗ್ರಾಮವನ್ನು ಹರಿಹರಪುರಪುರವೆಂದು ಪುನರ್ನಾಮಕರಣಮಾಡಿ ಏಳು ಉಪಗ್ರಾಮ ಸಹಿತ ದಾನ ನೀಡಿದನು ಎಂದು ತಾಮ್ರಶಾಸನ ವಿದೆ.ಶಾಸನದಲ್ಲಿ  ದಾನದ ವಿವರಣೆ, ಗಡಿಯ ಗುರುತುಗಳು, ಇತ್ಯಾದಿ ಎಲ್ಲಾ ವಿವರಣೆ ಇದೆ. ವಿವರವಾಗಿ ಮತ್ತೊಮ್ಮೆ ಬರೆಯುವೆ. ಆದರೆ ಶಾಸನದಲ್ಲಿ ಎಲ್ಲೂ ಊರಿನ ದೇವಸ್ಥಾನದ ಬಗ್ಗೆ ವಿವರಣೆ ಇಲ್ಲ. ಮುಂದೆ ಅದು ಜೋಡಿಗ್ರಾಮವಾಗಿದೆ. ಆದ್ದರಿಂದ ನನಗೆ ಒಂದಿಷ್ಟು ಮಾಹಿತಿ ಬೇಕಿದೆ

೧] ನಮ್ಮ ರಾಜ್ಯದಲ್ಲಿ  ನೂರಾರು ಜೋಡಿಗ್ರಾಮ ಗಳಿವೆ. ಜೋಡಿಗ್ರಾಮಗಳ ಆರಂಭ ಹೇಗಾಯ್ತು?

೨] ವಿಜಯ ನಗರದ ರಾಜ ಹರಿಹರ-೨ ಇವನ ಬಗ್ಗೆ ಒಂದಿಷ್ಟು ಮಾಹಿತಿಯು ಕನ್ನಡದಲ್ಲಿ ಯಾವ ವೆಬ್ಸೈಟ್ ನಲ್ಲಿ ಸಿಗಬಹುದು?

ಈ ಎರಡೂ ವಿಷಯಗಳಬಗ್ಗೆ ಅಂತರ್ಜಾಲದಲ್ಲಿ ಕನ್ನಡದಲ್ಲಿಮಾಹಿತಿ ಸಿಕ್ಕರೆ ಅನುಕೂಲವಾಗುತ್ತೆ. ಸಂಪದಿಗರಲ್ಲಿ ತಿಳಿದವರು ದಯಮಾಡಿ ಮಾಹಿತಿ ಕೊಡಿ

Rating
No votes yet

Comments