ನಾ ಕಂಡ ನವಿಲು

ನಾ ಕಂಡ ನವಿಲು

ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದಲ್ಲಿ ಒಂದು ಪುಸ್ತಕ ಓದುತ್ತಾ ಕುಳಿತಿದ್ದೆ ಕಿಟಕಿಯ ಹೊರಗೆ ಅಷ್ಟೊಂದು ಕಣ್ಣಾಯಿಸಲಿಲ್ಲ. ಅಕಸ್ಮಾತಾಗಿ ಒಮ್ಮೆ ಕಣ್ಣಾಯಿಸಿದೆ  ನಾಲ್ಕೈದು ನವಿಲುಗಳ ಗುಂಪು ಕಾಳು ಹುಡುಕುತ್ತಾ ರಸ್ತೆಯ ಬದಿಯಲ್ಲಿ ಇದ್ದವು ಅದನ್ನು ಕಂಡು ನನಗೆ ಆಶ್ಚರ್ಯ ಒಂದು ಕಡೆ ಇನ್ನೊಂಡು ಕಡೆ ಖುಷಿಯೋ ಖುಷಿ ಏನಪ್ಪಾ ಇವು ರಸ್ತೆಯ ಬದಿಯಲ್ಲಿ ಒಳ್ಳೆ ಕೋಳಿಗಳ ಥರಾ ಕಾಗೆಗಳ ಥರಾ ಮೇಯ್ತಾ ಇದೆಯಲ್ಲ ಅಂತ. ಕ್ಯಾಮಾರ ಬ್ಯಾಗ್ನಲ್ಲಿ ಇತ್ತು ಹೊರ ತೆಗೆಯವಷ್ಟರಲ್ಲಿ ಬಸ್ ಮುಂದೆ ಹೋಗಿತ್ತು  :( 

 

ಅದೇ ಸಂತೋಷದಲ್ಲಿ ಸ್ಟುಡಿಯೋ ಹತ್ರ ಬಂದೆ ಎಲ್ಲರೂ ಸ್ವಾಗತ ಕೋರಿದರು ನಂತರ ಹಾಗೆ ಆಪೀಸಿನ ಸುತ್ತಲೂ ಒಮ್ಮೆ ಸುತ್ತಾಡಲು ಕ್ಯಾಮರ ಕತ್ತಿಗೆ ನೇತಾಡಿಸಿಕೊಂಡು ಹೊರಟೆ ಸುತ್ತಲೂ  ಗಿಡಮರಗಳಿಂದ ಹಚ್ಚ ಹಸರಾಗಿ ತುಂಬಿತ್ತು. ಹಾಗೆ ಎರಡು ಮೂರು ಪೋಟೋ ಕ್ಲಿಕ್ಕಿಸಿದೆ ಅಲ್ಲಿ ನನ್ನನ್ನೆ ಒಂದು ನವಿಲು ಗುರಾಯಿಸುತ್ತಾ ನಿಂತಿತ್ತು ಅದನ್ನು ನೋಡಿ ನನಗೆ ಇನ್ನಷ್ಟು ಖುಷಿಯಾಗಿ ಒಂದು ಪೋಟೋ ತೆಗೆಯುವಷ್ಟರಲ್ಲಿ ಓಡಿ ಹೋಗಿ ಪೊದೆ ಸೇರಿತು.

ಅಲ್ಲಿಂದ ಬಂದು ಸ್ಟುಡಿಯೋ ಸೇರಿ ಕಲಸದಲ್ಲಿ ತಲ್ಲೀನನಾದೆ. ಮದ್ಯಾಹ್ನ  ಊಟ ಮಾಡಿ ಪುನಃ ಕ್ಯಾಮರಾ ಎತ್ತಿಕೊಂಡು ಹೊರಗೆ ಹೊಗಿ ನವಿಲುಗಳನ್ನು ಹುಡುಕುತ್ತಿದ್ದೆ ಅಲ್ಲೊಂದು ನವಿಲು ಪುನಃ ದರ್ಶನ ನೀಡಿತು.

ನಾನು ತೆಗೆದ ಪೋಟೋಗಳನ್ನು ಲ್ಯಾಪ್ ಟ್ಯಾಪ್ ಗೆ ಹಾಕಿ ಅಲ್ಲಿನ ಸಿಬ್ಬಂದಿಯನ್ನು  ನವಿಲುಗಳ ಬಗ್ಗೆ ಕೇಳಿದೆ ಅವರು ಸಾರ್ ಇಲ್ಲೆಲ್ಲಾ ಸಾಕಷ್ಟು ನವಿಲುಗಳು ಇವೆ ಬೆಳಿಗ್ಗೆ ಆಪೀಸಿನ ಮುಂದೆ ಹತ್ತಾರು ನವಿಲುಗಳು ಬಂದು ಮೇಯ್ತಾ ಇರ್ತಾವೆ ಬೆಳಿಗ್ಗೆ ಬಂದ್ರೆ ಸಾಕಷ್ಟು ನವಿಲುಗಳನ್ನು ನೋಡಬಹುದು ಅಂದ್ರು ಆಯ್ತು ನಾಳೆ ಬೆಳಿಗ್ಗೆ ಬೇಗ ಬರುವೆ ಅಂತ ಹೇಳಿ ಸಂಜೆ ಮದುರೈಗೆ ತೆರಳಿದೆ.

 

ಮಾರನೇ ದಿನ ಬೇಗ ಎದ್ದು ತಯಾರಾದೆ ಆದ್ರೆ ನನ್ನ ಜೊತೆಗಿದ್ದ ನನ್ನ ಸಹದ್ಯೋಗಿ ಏಳಲೇ ಇಲ್ಲ ರಾತ್ರಿ ಎರಡರ ತನಕ ಪ್ರೆಸೆಂಟೇಷನ್ ಮೇಲೆ ಕೆಲ್ಸ ಮಾಡ್ತ ಇದ್ದೆ ಈಗ ನಿದ್ದೆ ಬರ್ತಾ ಇದೆ ಇನ್ನೂ ಸ್ವಲ್ಪ ಸಮಯ ನಿದ್ದೆ ಮಾಡಲು ಬಿಡು ಎಂದು ಹೇಳಿ ಮತ್ತೆ ನಿದ್ದೆ ಮಾಡಿದ ನಾನು ಬೇಸರದಿಂದ  ಟಿವಿ ನೋಡುತ್ತಾ ಕೂತೆ  :(

 

ನಂತರ ಅಲ್ಲಿಂದ ಬಸ್ ನಲ್ಲಿ ಹೋಗಬೇಕಾದ್ರೆ ಕಿಟಕಿಯ ಹೋರಗೆ ನೋಡುತ್ತಾ ಹೋದೆ ಒಂದು ನವಿಲೂ ಸಹ ಕಣ್ಣಿಗೆ ಬಿದ್ದಿಲ್ಲ. ಆಪೀಸು ತಲುಪುವ ಹೊತ್ತಿಗೆ 11 ಗಂಟೆಯಾಗಿತ್ತು ಇನ್ನೆಲ್ಲಿ ನವಿಲುಗಳು ಅಂತ ಹೇಳಿ ಕೆಲ್ಸಕ್ಕೆ ಕೂತೆ.

ಮದ್ಯಾಹ್ನ ಊಟದ ನಂತರ ಗ್ರಾಮವೊಂದರ ಬೇಟಿ ಇತ್ತು ನಾನು ಸಹ ಗ್ರಾಮಕ್ಕೆ ಹೊರಟೆ  ಸಿಕ್ಕಾಪಟ್ಟೆ ಬಿಸಿಲು ಆ ಬಿಸಿಲಲ್ಲೆ ತಲೆ ಮೇಲೆ ಕರವಸ್ತ್ರ ಹಾಕಿ  ಕೈಯಲ್ಲಿ ವಾಟರ್ ಬಾಟಲ್ ಹಿಡಿದು ನಡೆಯುತ್ತಾ ಗ್ರಾಮಕ್ಕೆ  ಮದ್ಯ ಭಾಗಕ್ಕೆ ಎಂಟ್ರಿ  ಆದ್ವಿ ಎಂಟ್ರಿ ಆದಂಗೆ  ನವಿಲಿನಂತ ಹುಡಗಿ ಕಣ್ಣಿಗೆ ಕಾಣಿಸಿದಳು ಬಿಸಿಲಿಗೆ ತಲೆ ಮೇಲೆ ಹಾಕಿದ್ದ ಕರವಸ್ತ್ರ ತೆಗೆದು ಮಡಚಿ ಜೇಬಿನಲ್ಲಿ ಇಟ್ಟು ಆ ನವಿಲನ್ನೇ (ಹುಡಗಿಯನ್ನು) ನೋಡುತ್ತಾ ಇದ್ದೆ. ನನ್ನ ಜೊತೆಗೆ ಬಂದಿದ್ದ ಅಲ್ಲಿನ ರೇಡಿಯೋ ಸ್ಟೇಷನ್ ನವರು ಮೀಟಿಂಗ್ ಗೆ ಎಲ್ಲರನ್ನೂ  ಒಂದು ಕಡೆ ಸೇರಿಸುತ್ತಿದ್ದರೆ ನಾನು ನವಿಲನ್ನು ನೋಡೋದ್ರಲ್ಲಿ ತಲ್ಲೀನನಾಗಿದ್ದೆ.

 

ಗುಂಪು ಸೇರಿಸಿ ನನ್ನ ಕರೆದರು ನಾನು ಅತ್ತ ಕಡೆ ಓಡಿ ಹೋದೆ ನನ್ನ ಮನಸ್ಸಿನಲ್ಲಿ ಈ ನವಿಲು ಸಹ ಮೀಟೀಂಗ್ ಗೆ ಬಂದ್ರೆ ಎಂಗೆ ಅಂತ ಆಲೋಚಿಸುತ್ತಾ ಇದ್ರೆ ಗುಂಪಿನಿಂದ ಒಬ್ರು ಆ ನವಿಲನ್ನ ಕರೆದರು ನನಗೂ ಮನಸ್ಸಿನಲ್ಲಿ ಸಂತೋಷ ಆಯ್ತು ಹತ್ರ ಬಂದು ನನ್ನ ಎದುರಿಗೆ ಕೂತಲು ಮನಸ್ಸಿನಲ್ಲಿ ಏನೋ ಒಂದು ಥರ ಖುಷಿ ಆಗ್ತಾ ಇತ್ತು. ಹಾಗೆ ನೋಡುತ್ತಾ ಕಾಲಿನ ಕಡೆ ನೋಡಿದ್ರೆ ಕಾಲಿಗೆ ಕಾಲುಂಗುರ ಹಾಕಿದ್ದಳು :(  ಮದುವೆ ಆಗಿ ಮೂರು ತಿಂಗಳಾಗಿದೆಯಂತ ನನ್ನ ತಂಡದಲ್ಲಿದ್ದ ಒಬ್ಬ ಹುಡುಗ ಹೇಳಿದ. ಅಲ್ಲಿಗೆ ನನ್ನ ಖುಷಿ ಕಮ್ಮಿ ಆಯ್ತು ಆದ್ರು ಈಗಲೂ ಆ ನವಿಲು ಜ್ಞಾಪಕ ಬರುತ್ತಾ ಇರತ್ತೆ.

 

Rating
No votes yet

Comments