ನನ್ನ ಮೊದಲ ಬ್ಲಾಗ್

ನನ್ನ ಮೊದಲ ಬ್ಲಾಗ್

ಸಂಪದದ ಬಗ್ಗೆ ಈಗೆರಡು ತಿಂಗಳ ಹಿಂದೆ ಫ್ರೆಂಡ್ ಒಬ್ಬರ ಮೂಲಕ ಗೊತ್ತಾಯಿತು. ಅಂದಿನಿಂದ ಬಿಡದಂತೆ ದಿನವೂ ಓದುತ್ತಿದ್ದೆ.  ಚಿಕ್ಕಂದಿನಿಂದಲೂ ಓದುವ ಆಸೆ ಬಹಳ. ನನ್ನಮ್ಮನಿಗೆ ಕಥೆ, ಕಾದಂಬರಿಗಳನ್ನು ಓದುವ ಹಂಬಲ ಬಹಳ. ಊರು ಕಾರ್ಕಳದ ಹತ್ತಿರ ಒಂದು ಪುಟ್ಟ ಹಳ್ಳಿ, ದಿವಸವೂ ಮಂಗಳೂರಿಗೆ ಓದಲು ಹೋಗಬೇಕಾಗುವುದೆಂದು, ಈಗ ಕರೆಸ್ಪಾಂಡೆನ್ಸ್ ನಲ್ಲಿ ಬಿ.ಕಾಂ ಮಾಡುತ್ತಿದ್ದೇನೆ.  ಜೊತೆಜೊತೆಗೆ ಅಕ್ಕಪಕ್ಕದ ಮಕ್ಕಳಿಗೆ ಮನೆಪಾಟ ಕೂಡ ಹೇಳಿಕೊಡುತ್ತಾ ಇನ್ನು ಹೆಚ್ಚೆಚ್ಚು ಕಲಿಯುವ ಪ್ರಯತ್ನ ಕೂಡ ಮಾಡುತ್ತಿದ್ದೇನೆ. ಸಣ್ಣ ಪುಟ್ಟ ಕವನಗಳನ್ನು ಕಾಲೇಜಿನಲ್ಲಿ ಬರೆಯುತ್ತಿದ್ದರೂ, ಇಲ್ಲಿ ಪ್ರಕಟಿಸುವಷ್ಟು ಚೆನ್ನಾಗಿ ಇಲ್ಲ. 

Rating
No votes yet

Comments