ಮದಿರೆಯ ನಶೆ

ಮದಿರೆಯ ನಶೆ

ಆ ಎರೆಡು ಕಣ್ಣುಗಳು...

 
ನನ್ನ ಮನದೊಳಗೆ

ಮದಿರೆಯ ನಶೆಯಾವರಿಸಿದಂತೆ

ಆವರಿಸಿತು.

ಆ ಕಾಂತಿಯ ಚೇತನದ

ಹೊಳೆಯುಕ್ಕಿ ಹರಿಯುವಂತಿದ್ದ

ಆ ನೋಟ

ನನ್ನದೆಯೊಳಗಿನ  ಸುಪ್ತಸಾಗರದ ಶಾಂತತೆಯನ್ನು 

ಕದಡಿಸಲೋ ಎಂಬಂತೆ

ಸೀಳಿ ನುಗ್ಗಿತು ನನ್ನ ಮನದ

ಜಡತ್ವದ ಕೋಟೆಯನ್ನು ಬೇದಿಸುತ್ತ.

Rating
No votes yet

Comments