ಈ ನನ್ನ ಬಯಕೆ..

ಈ ನನ್ನ ಬಯಕೆ..

ನಿನ್ನ ಬಿಸಿಯುಸಿರು ತಾಕಿ

ನಾ ಕರಗಿ ಹನಿಹನಿಯಾಗಿ

ನಿನ್ನೆದೆಯ ಚಿಪ್ಪಿನಲ್ಲಿ

ಸ್ವಾತಿಮುತ್ತಾದ

ನನ್ನ ಬೆವರಹನಿಯ

ಮುತ್ತಿನ ಮಾಲೆಯಾಗಿಸುವ

ಆ ನಿನ್ನ ಸ್ಪರ್ಶದಲ್ಲಿ

ಭರವಸೆಯ ಮಹಾಪೂರವೇ ಹರಿದು,

ಬದುಕ ತುಟ್ಟತುದಿಯ ಮುಟ್ಟಿದ

ತೃಪ್ತಿಯೇ ನಾನಾಗಿ,

ನನ್ನೆದೆಯ ಮಿಡಿತ ನೀನೆಂಬ

ಭಾವದಿ ತೇಲುವಾಗ

ಮೌನವೇ ಮಾತಿನ ಸೇತುವೆಯಾಗಿ

ಮೌನವೇ ಮನದ ಕಾರಂಜಿಯಾದಾಗ

ಮಾತುಗಳು ಬೇಡವೆನಿಸಿದ ಆ ಕ್ಷಣ.....

ನೊಸಲಿನ ಮೇಲೊತ್ತಿದ ನಿನ್ನ ಪ್ರೀತಿಯ ಮುದ್ರೆ

ಒಲುಮೆ ಸುಧೆಯ ಹರಿಸಿ

ನಿನ್ನ ಬೆಚ್ಚನೆಯ ಬಾಹುಗಳ ನಡುವೆ

ಮುಚ್ಚಿದ ಕೋಟೆಯಾಗಿ ಅವಿತುಕೊಳ್ಳುವ

ಈ ನನ್ನ ಬಯಕೆ

ನನ್ನೊಳಗಿನ ನನ್ನೊಲವಿಗೆ ಸಾಕ್ಷಿ

 

Rating
No votes yet

Comments