ಪ್ರಳಯ 2012

ಪ್ರಳಯ 2012

ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ಎಲ್ರೂ ಹೀಂಗೆ ಹರಟೆ ಹೊಡಿತಾ ಇರಬೇಕಾದ್ರೆ ಅಕಸ್ಮಾತಾಗಿ ೨೦೧೨ ರ ಪ್ರಳಯದ ವಿಷಯ ಬಂತು.

ಪ್ರಳಯದ ಬಗ್ಗೆ ಹಲ ವಿಷಯಗೆಳೆಲ್ಲ ಬಂದೋತು ಬಿಡಿ..ಅವೆಲ್ಲ ಇಲ್ಲಿ ಬೇಡ !  ಆದ್ರೆ ಇಲ್ಲಿ ಸ್ವಲ್ಪ ಆಸಕ್ತಿಕರ ವಿಷಯವಾಗಿದ್ದು....."ಇಡೀ ಜಗತ್ತೆಲ್ಲ ಮುಳುಗೋಲ್ಲ, ಕೆಟ್ಟವರು ಮಾತ್ರ ಸಾಯ್ತಾರೆ , ಸತ್ಯವಂತರು ಬದುಕ್ತಾರೆ" ಅನ್ನೋದು!!.

ಸತ್ಯವಂತರು ಮಾತ್ರ ಬದುಕ್ತಾರೆ ಉಳಿದವರೆಲ್ಲ ಸಾಯ್ತಾರೆ ಅನ್ನೋದು ಕೇಳಿ ನಾನು, ನಮ್ಮ ಮಾಮನಂತೂ ಬಾಳನೇ ಖುಷಿ ಪಟ್ವಿ. ನಮಗೆ ನಮ್ಮ ಬಗ್ಗೆ ಖುಷಿಯೋ ಖುಷಿ, ಹೆಮ್ಮೆಯೋ ಹೆಮ್ಮೆ! ನಾವಿಬ್ರೂ ಮಾತ್ರ ಉಳಿತೀವಲ್ಲ ಅಂತ!  (ofcourse ಒಳೊಳಗೇ ಇಂತಿಂತ ನಟೀ ಮಣಿಗಳು , ಇಂತಿಂತ ಸುಂದರಿಯರು ಸಹಾ ಒಳ್ಳೆಯವರಾಗಿರ್ಲ್ಲಪ್ಪ ಅಂತಾ ನೂ ಬೇಡಿಕೊಂಡ್ವಿ ;)  )  

ಅಲ್ಲೇ ಇದ್ದ ನನ್ನ ತಮ್ಮನ ಮುಖದಲ್ಲಿ ಇದ್ದ ಖುಶಿನೂ ಹೋಯ್ತು. ಅವನ ಇಳೆ ಬಿದ್ದ ಮುಖ ನೋಡಿ ನಮ್ಮ ಖುಷಿ ಇನ್ನೂ ಸ್ವಲ್ಪ ಜಾಸ್ತಿನೆ ಆಯ್ತು! ;)

ಯಾಕಯ್ಯ ಬೇಜಾರಾಗಿದಿಯ ಅಂತ ಕೇಳಿದರೆ .. ಅವನು ಹೀಂಗೆ ಹೇಳಬೇಕ...?

'ಥೂ ಇದ್ರಜ್ಜಿ, ಎಷ್ಟು ಖುಷಿಯಾಗಿದ್ದೆ , ೨೦೧೨ ಕ್ಕೆ ನಾನೂ ಹೋಗ್ತೀನಿ ಅಂತ , ಈಗ ನೋಡಿದ್ರೆ  ನಾನೂ ಉಳ್ಕೋತೀನಿ ಅಂತ ಇದ್ದೀರಾ? ಈಗ ನಾನೂ "ಏನಾರೂ??!" ಮಾಡ್ಬೇಕು, ಇಲ್ಲಿ ಇದ್ದು ಮಾಡೋದು ಏನೈತಿ ಅನ್ನೋದ?'

ಅಲ್ಲಾರೀ ಇಷ್ಟೊಂದು ನೆಗಟಿವ್ ತಿನ್ಕಿನ್ಗಾ .. ಕೆಲ ಮನುಷ್ಯರಿಗೆ ?!

............................................

 

ಮೇಲಿನದು ಏನೇ ಇರ್ಲಿ, ೨೦೧೨ ರ  ನಂತರ ನಾನಂತೂ ಉಳ್ಕೋತೀನಿ, ನೀವು?

Rating
No votes yet

Comments