ನಾನು ಹೇಳೋದನ್ನ ಜನ ಯಾಕೆ ಸರಿಯಾಗಿ ಅರ್ಥ ಮಾಡ್ಕೊಳಲ್ಲ?

ನಾನು ಹೇಳೋದನ್ನ ಜನ ಯಾಕೆ ಸರಿಯಾಗಿ ಅರ್ಥ ಮಾಡ್ಕೊಳಲ್ಲ?

ಮೊನ್ನೆ ಮುಂಜಾನೆ ಎಲ್ಲಿಗೋ ಹೋಗಿದ್ದೆ. ಅಲ್ಲಿಂದ ಆಟೋದಲ್ಲಿ ಆಫೀಸ್ಗೆ ಹೋಗ್ತಾ ಇದ್ದೆ. ತುಂಬಾ ಚಳಿ ಇತ್ತು. ಸಿಗ್ನಲ್ ಒಂದರಲ್ಲಿ ಆಟೋ ನಿಲ್ಲುತ್ತಲೇ ಆಟೋ ಚಾಲಕ ಬೀಡಿ ಹೊತ್ತಿಸಲು ಶುರು ಮಾಡಿದ. ನನಗೆ ಬೀಡಿ ವಾಸನೆ ಸೇರೋದಿಲ್ಲ.(ಅಂದ ಹಾಗೆ  ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ನಿಷೇಧಿಸಲಾಗಿದೆ.) ಚಾಲಕನನ್ನು ತಡೆಯಲು, 'ಭಾಯಿಸಾಬ್' ಅಂದೆ. ನಾನು ಮುಂದೇನೂ ಹೇಳುವ ಮೊದಲೇ, ಅವನು ಅಕ್ಕರೆಯಿಂದ "ಕ್ಯಾ? ಬೀಡಿ ದೇದೂ?(ಏನು? ಬೀಡಿ ಕೊಡಲಾ?) ಅಂದ. ನಾನು ಅವನನ್ನು ಬೀಡಿಗಾಗಿ ಕೇಳುತ್ತಿದ್ದೇನೆಂದು ಅವನು ಅಂದುಕೊಂಡಿದ್ದ!

ಇಂಥ ಹಲವಾರು ಪ್ರಸಂಗಗಳಾಗಿವೆ. ಹಾಗಾಗಿ, ನನ್ನ ನಾನೇ ಕೇಳ್ಕೋತಾ ಇದ್ದೀನಿ, ನಾನು ಹೇಳೋದನ್ನ ಜನ ಯಾಕೆ ಸರಿಯಾಗಿ ಅರ್ಥ ಮಾಡ್ಕೊಳಲ್ಲ? ನಿಮಗೇನಾದರೂ ತಿಳಿದಿದ್ದರೆ ಹೇಳಿ :-) 

Rating
No votes yet

Comments