ಮಿಸ್ಟೇಕನ್ ಐಡೆಂಟಿಟಿ
ಮಿಸ್ಟೇಕನ್ ಐಡೆಂಟಿಟಿ (ದಯವಿಟ್ಟು ಇದಕ್ಕೆ ಸರಿಯಾದ ಕನ್ನಡ ಶಬ್ದ ತಿಳಿಸಿ)
ಈ ನಗೆಹನಿಯನ್ನು ನೀವು ಓದಿರುತ್ತೀರಿ ಅಥವಾ ಕೇಳಿರುತ್ತೀರಿ. ಒಬ್ಬ ಕುಡುಕ ಒಬ್ಬಳು ಹೆಂಗಸನ್ನು ದುರು ದುರು ನೋಡುತ್ತಿರುತ್ತಾನೆ. ಆಕೆ ಅವನನ್ನು, 'ಯಾಕೆ ಹಾಗೆ ನೋಡ್ತೀಯ?' ಎಂದು ಕೇಳುತ್ತಾಳೆ. ಕುಡುಕ ಹೇಳುತ್ತಾನೆ; 'ನೀನು ನನ್ನ ಹೆಂಡತಿಯ ಹಾಗೇ ಕಾಣಿಸ್ತಾ ಇದ್ದೀಯಾ'. ಸಿಟ್ಟಿಗೆದ್ದ ಆಕೆ, 'ಲೇ ಕುಡುಕಾ, ನಿಷ್ಪ್ರಯೋಜಕಾ, ಮಾಡೋಕೆ ಬೇರೇನೂ ಕೆಲಸ ಇಲ್ವಾ? ನಿನಗ್ಯಾವ ಜನ್ಮದಲ್ಲಿ ಬುದ್ಧಿ ಬರುತ್ತೋ ಆ ದೇವರಿಗೆ ಗೊತ್ತು ... ... ಹಾಗೇ, ಹೀಗೇ ಅಂತ ನಾನ್ ಸ್ಟಾಪ್ ಬಯ್ಯೋಕೆ ಶುರು ಮಾಡ್ತಾಳೆ. ಕುಡುಕ ಹೇಳ್ತಾನೆ, 'ಅರೆ! ನೀನು ನೋಡೋಕೆ ಅಷ್ಟೇ ಅಲ್ಲ, ಮಾತಾಡೋ ತರದಲ್ಲಿ ಕೂಡ ನನ್ನ ಹೆಂಡತಿಯ ಹಾಗೇನೇ ಇದೀಯಾ'.
ತ್ರೇತಾಯುಗದಲ್ಲಿ ದಶರಥ, ಶ್ರವಣಕುಮಾರನನ್ನು ಯಾವುದೋ ಕಾಡು ಮೃಗವೆಂದು ತಿಳಿದು, ಶಬ್ದವೇಧಿ ವಿದ್ಯೆ ಬಳಸಿ ಕೊಂದ. ಕಲಿಯುಗದಲ್ಲಿ, (ಮೊನ್ನೆ, ೧೯೯೭ರಲ್ಲಿ) ದೆಹಲಿಯ ಕನಾಟ್ ಪ್ಲೇಸ್ನಲ್ಲಿ ದೆಹಲಿ ಪೋಲಿಸರು ಇಬ್ಬರು ವ್ಯಾಪಾರಿಗಳನ್ನು 'ಕ್ರಿಮಿನಲ್'ಗಳೆಂದು ತಿಳಿದು ಗುಂಡಿಟ್ಟು ಕೊಂದರು.
ಅಂತಹ ದುರಂತಗಳ್ಯಾವವೂ ಅದೃಷ್ಟವಶಾತ್ ನನ್ನ ಜೀವನದಲ್ಲಿ ನಡೆದಿಲ್ಲ. ಅಥವಾ ಮೇಲೆ ಹೇಳಿದ ನಗೆಹನಿಯಲ್ಲಿ ಆದಂಥ ರಸಾನುಭವವೂ ಆಗಿಲ್ಲ. ಆದರೆ ನನಗೆ ಅನ್ನಿಸುವಂತೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಿಸ್ಟೇಕನ್ ಐಡೆಂಟಿಟಿ ನನ್ನದೇ! ಜನರು ನನ್ನನ್ನು, ನಾನು ನಿಜವಾಗಿ ಏನಾಗಿರುವೆನೋ ಅದರ ಹೊರತಾಗಿ ಬೇರೆಲ್ಲ ಆಗಿ (ತಪ್ಪು) ತಿಳಿಯುತ್ತಾರೆ. ಇದು ನಾನು ಹುಟ್ಟಿದಾಗಲೇ ಶುರು ಆಗಿರಬಹುದು ಎಂಬ ಅನುಮಾನ ನನಗಿದ್ದರೂ ಕಾರಣಾಂತರಗಳಿಂದ ಪ್ರೌಢ ಶಾಲೆಯ (ಹಾಯ್ ಸ್ಕೂಲ್) ವಿದ್ಯಾರ್ಥಿಯಾದಾಗಿನಿಂದ ಶುರು ಮಾಡುತ್ತೇನೆ.
ಆಗ ನನ್ನ ಎತ್ತರ ಕಡಿಮೆ ಇತ್ತು; ವ್ಯಾಯಾಮದ ಗುರುಗಳು ಕ್ಲಾಸಿನ ಹುಡುಗರನ್ನೆಲ್ಲ ಸಾಲಾಗಿ ನಿಲ್ಲಿಸಿದರೆ ನಾನು ಕೊನೆಯಿಂದ ಎರಡನೆ ಇರುತ್ತಿದ್ದೆ ಎಂದು ನೆನಪು. ಆ ಕಾರಣಕ್ಕೋ ಏನೋ, ನನ್ನನ್ನು ಆಗ ಹೆಚ್ಚಿನವರು "ಕನ್ನಡ ಶಾಲೆ"ಯ (ಪ್ರೈಮರಿ ಸ್ಕೂಲಿನ) ಹುಡುಗನೆಂದು ತಿಳಿದಿದ್ದರು. ನಾನು ಕಾಲೇಜಿಗೆ ಹೋದಾಗ ಹಾಯ್ ಸ್ಕೂಲ್ ಹುಡುಗನೆಂದು ಅಂದುಕೊಂಡಿರಬಹುದು; ಏಕೆಂದರೆ ಪದವಿ ಪೂರ್ವ ತರಗತಿಗಳ ಎರಡೂ ವರ್ಷ ನಾನು ಹಾಫ್ ಪ್ಯಾಂಟ್ ಧರಿಸಿಯೇ ಕಾಲೇಜಿಗೆ ಹೋಗಿದ್ದೆ! ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದಾಗ, "ನಾನು M.Sc. ಮಾಡುತ್ತಿರುವೆ" ಎಂದರೆ ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದುದು ಇನ್ನೂ ನೆನಪಿದೆ. ನನ್ನ ಓರಗೆಯವರಲ್ಲಿ ಕೆಲವರು ಹೈಸ್ಕೂಲ್ ನಂತರವೇ 'ಗಡ್ಡ ಮಾಡ'ತೊಡಗಿದ್ದರೆ ನಾನು M.Sc. ಸೇರಿದ ಮೇಲಷ್ಟೇ "ಗಡ್ಡ ಮಾಡ"ಲು ಪ್ರಾರಂಭಿಸಿದ್ದೆ. ಹೀಗೆ, ಈ ತಪ್ಪು ಕಲ್ಪನೆಗಳಿಗೆ ಒಂದು ಕಾರಣವಿತ್ತು; ಅದೆಂದರೆ, ನನ್ನ ದೈಹಿಕ ಬೆಳವಣಿಗೆ ನನ್ನ ಸಮವಯಸ್ಕರಿಗಿಂತ ನಿಧಾನವಾಗಿತ್ತು. ಆದರೆ ಮುಂದೆಯೂ ನನ್ನೀ ಮಿಸ್ಟೇಕನ್ ಐಡೆಂಟಿಟಿ ಅಧ್ವಾನ ನನ್ನನ್ನು ಬಿಡಲಿಲ್ಲ.
೨೦ನೆಯ ಶತಮಾನದ ಎರಡು ಮೂರು ವರ್ಷಗಳು ಬಾಕಿಯಿದ್ದಾಗ ನಾನು ದೆಹಲಿಗೆ ಬಂದೆ. ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನನಗೆ ಮೊದಲಲ್ಲಿ ಜೊತೆಯಾಗಿ ಸಿಕ್ಕವರು ತಮಿಳರು. ಅವರಿಂದ ನಾನು "ಎನ್ನ ವಿಶೇಷ?", "ಸಾಪಡಾಚಾ?" ಮತ್ತು "ಎಪ್ಪಡಿ ಇರಕ್ಯೆಂಗೋ?" ಎಂಬ ಮೂರು ವಾಕ್ಯಗಳನ್ನು (ಅದೂ ಸರಿಯಾಗಿಲ್ಲವಂತೆ) ಕಲಿತು ಸಾಧ್ಯವಾದಲ್ಲೆಲ್ಲಾ ಬಳಸುತ್ತಿದ್ದೆ. ಹೀಗಾಗಿ ನನ್ನ ಸಹೋದ್ಯೋಗಿಗಳು ನನ್ನನ್ನು ತಮಿಳಿನವನೆಂದೆ ತಿಳಿದಿದ್ದರು. (ಹೌದು; ಈಗೀಗ ಉತ್ತರ ಭಾರತದವರಿಗೆ, ದಕ್ಷಿಣ ಭಾರತೀಯರೆಲ್ಲ 'ಮದ್ರಾಸಿ'ಗಳಲ್ಲ ಎಂಬುದು ತಿಳಿದಿದೆ.) ಅಷ್ಟೇ ಅಲ್ಲ; ಕೆಲವರು ಕನ್ನಡಿಗರು ಕೂಡ ಹಾಗೆ ತಿಳಿದಿದ್ದರು ಎಂಬುದು ನನಗೆ ಆಮೇಲೆ ಅವರ ಪರಿಚಯ ಆದ ಮೇಲೆ ತಿಳಿಯಿತು.
ದೆಹಲಿಗೆ ಬಂದ ಮೊದಲಲ್ಲಿ ನನಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ. (ಈಗಲೂ ನನ್ನ ಹಿಂದಿ ಜ್ಞಾನ ಅಷ್ಟಕ್ಕ್ಕಷ್ಟೇ; ಇರಲಿ.) ನಾನು ಇಲ್ಲಿನ (ಉತ್ತರ ಭಾರತದ) ಹೆಚ್ಚಿನವರಂತೆ ಬಿಳಿಯ ಬಣ್ಣದವನಲ್ಲವಾದರೂ ವಿಚಿತ್ರವೆಂಬಂತೆ, ಬಂದ ವರ್ಷವೊಂದೆರಡರಲ್ಲೇ ಎಷ್ಟೊಂದು ಜನ - ರೋಗಿಗಳು; ಅವರ ಸಂಬಂಧಿಕರು - ನನ್ನನ್ನು ಉತ್ತರ ಭಾರತದವನು ಎಂದೇ ತಿಳಿದಿದ್ದರು; ನಾನು ಕರ್ನಾಟಕದವನೆಂದರೆ ಚಕಿತರಾಗುತ್ತಿದ್ದರು. ಬಹುಶಃ ನನ್ನ ಹಿಂದಿ accented ಅಲ್ಲ ಎಂಬ ಕಾರಣದಿಂದ ಇರಬಹುದು.
ಏನಿದ್ದರೂ ಇವೆಲ್ಲ ನನ್ನನ್ನು ಅಷ್ಟು ಕಾಡಿಸಿದ ತಪ್ಪು ಕಲ್ಪನೆಗಳಲ್ಲ. ಮೊದಲೇ ಹೇಳಿಬಿಡುತ್ತೇನೆ; ನಾಲ್ಕು, ಐದನೇ ಮಾಳಿಗೆಯವರೆಗೂ ಪೇಪರ್ ಅನ್ನು ರೊಯ್ಯನೆ, ಕರಾರುವಾಕ್ಕಾಗಿ ಎಸೆಯುವ, ದೆಹಲಿಯ ಉರಿ ಬಿಸಿ, ಕೆಟ್ಟ ಚಳಿಯನ್ನು ಪರಿಗಣಿಸದೆ ಬೆಳಿಗ್ಗೆ, ಬೆಳಿಗ್ಗೆ ತಪ್ಪದೆ ಪೇಪರ್ ಅನ್ನು ಬಟವಾಡೆ ಮಾಡುವ ಪೆಪರ್ವಾಲಗಳ ಬಗ್ಗೆ ನನಗೆ ಪ್ರೀತಿಯಿದೆ, ಗೌರವವಿದೆ. ಆದಾಗ್ಯೂ ನಾನವರಲ್ಲವಾದ್ದರಿಂದ, ನಾನೊಮ್ಮೆ ಭಾನುವಾರದ ಹಿಂದುಸ್ತಾನ್ ಟೈಮ್ಸ್ ಮತ್ತು ಸಂಡೇ ಟೈಮ್ಸ್ ಎರಡನ್ನೂ ಖರೀದಿಸಿ ಖಾನಾವಳಿಯೊಂದಕ್ಕೆ ಹೋದಾಗ ಅಲ್ಲಿನ ಹುಡುಗ 'ಆಪ್ ಪೇಪರ್ ವಾಲೆ ಹೋ ಕ್ಯಾ?' ಎಂದು ಕೇಳಿದ್ದು ನನಗೇಕೋ ಇನ್ನೂ ಜೀರ್ಣವಾಗಿಲ್ಲ.
(ನಿಮಗೀ ಬರಹ ಇಷ್ಟವಾದರೆ ಹೇಳಿ; ಮುಂದುವರೆಸುತ್ತೇನೆ.)
Comments
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by nagenagaari
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by Shreekar
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by shivaram_shastri
ಉ: ಮಿಸ್ಟೇಕನ್ ಐಡೆಂಟಿಟಿ - ಇಷ್ಟೇ ಇಷ್ಟು ಪ್ರೀತಿಯ ನೇವರಿಕೆ
In reply to ಉ: ಮಿಸ್ಟೇಕನ್ ಐಡೆಂಟಿಟಿ - ಇಷ್ಟೇ ಇಷ್ಟು ಪ್ರೀತಿಯ ನೇವರಿಕೆ by Shreekar
ಉ: ಮಿಸ್ಟೇಕನ್ ಐಡೆಂಟಿಟಿ - ಇಷ್ಟೇ ಇಷ್ಟು ಪ್ರೀತಿಯ ನೇವರಿಕೆ
In reply to ಉ: ಮಿಸ್ಟೇಕನ್ ಐಡೆಂಟಿಟಿ by Shreekar
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by inchara123
ಉ: ಮಿಸ್ಟೇಕನ್ ಐಡೆಂಟಿಟಿ - ನಗೆಸಾಮ್ರಾಟರ ದ್ವಿಮುಖ ವ್ಯಕ್ತಿತ್ವ
In reply to ಉ: ಮಿಸ್ಟೇಕನ್ ಐಡೆಂಟಿಟಿ by inchara123
ಉ: ಮಿಸ್ಟೇಕನ್ ಐಡೆಂಟಿಟಿ - ನಗೆಸಾಮ್ರಾಟರ ದ್ವಿಮುಖ ವ್ಯಕ್ತಿತ್ವ
In reply to ಉ: ಮಿಸ್ಟೇಕನ್ ಐಡೆಂಟಿಟಿ - ನಗೆಸಾಮ್ರಾಟರ ದ್ವಿಮುಖ ವ್ಯಕ್ತಿತ್ವ by Shreekar
ಉ: ಮಿಸ್ಟೇಕನ್ ಐಡೆಂಟಿಟಿ - ನಗೆಸಾಮ್ರಾಟರ ದ್ವಿಮುಖ ವ್ಯಕ್ತಿತ್ವ
In reply to ಉ: ಮಿಸ್ಟೇಕನ್ ಐಡೆಂಟಿಟಿ by inchara123
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by Shreekar
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by nagenagaari
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
ಉ: ಮಿಸ್ಟೇಕನ್ ಐಡೆಂಟಿಟಿ
In reply to ಉ: ಮಿಸ್ಟೇಕನ್ ಐಡೆಂಟಿಟಿ by bhalle
ಉ: ಮಿಸ್ಟೇಕನ್ ಐಡೆಂಟಿಟಿ