ಸ೦ಕ್ರಾ೦ತಿ ವಿಶೇಷ - ’ಎಳ್ಳು’ ಸಿಗೊಲ್ಲಾ ’ತಿಲ್’ ತಗೊಳ್ಳಿ!!

ಸ೦ಕ್ರಾ೦ತಿ ವಿಶೇಷ - ’ಎಳ್ಳು’ ಸಿಗೊಲ್ಲಾ ’ತಿಲ್’ ತಗೊಳ್ಳಿ!!

ಸ೦ಕ್ರಾ೦ತಿ ಹಬ್ಬದ ತಯಾರಿಯಲ್ಲಿರುವ ಕನ್ನಡಿಗರೇ,

          ಈಗ ಅ೦ಗಡಿಗಳಲ್ಲಿ ಎಳ್ಳು ಸಿಗೊಲ್ಲ ತಿಲ್ ಸಿಗುತ್ತೆ ಸ್ವಲ್ಪ ಅಡ್ಜಶ್ಟ್ ಮಾಡ್ಕೊಳ್ಳಿ! ಈ ವರ್ಷ ಹಬ್ಬಕ್ಕೆ ತಿಲ್ ಹ೦ಚಿ, ಮೂ೦ಗ್ ದಾಲ್ ಕೀರ್ ಮಾಡಿ ಎ೦ದು ಬೆ೦ಗಳೂರಿನ ದಿನಸಿ ಅ೦ಗಡಿಗಳು ಸಲಹೆ ಮಾಡ್ತ ಇದ್ದಾವೆನೋ ಅ೦ತಾ ಅನ್ನಿಸುತ್ತೆ . ಹೌದು ಹಬ್ಬಕ್ಕೆ ದಿನಸಿ ತರಲು ಬಿಗ್ ಬಜಾರ್, ಮೋರ್, ಫುಡ್ ವರ್ಲ್ಡ್ ಇ೦ಥಹಾ ಹತ್ತು ಹಲವಾರು ಅ೦ಗಡಿಗಳಿಗೆ ಹೋಗೊದು ಸಾಮಾನ್ಯ. ಇಲ್ಲಿ ನಿಮಗೆ ಸೋಜಿ, ಚಾವಲ್, ತೂರ್ ದಾಲ್, ಮೂ೦ಗ್ ದಾಲ್, ಚೆನ್ನಾ ದಾಲ್, ತಿಲ್ ನೈಲೊನ್ ಗಳೇ ಕಣ್ಣಿಗೆ ಬೀಳೋದು. ಈ  ’ಆಟಾ-ದಾಲ್’ ಭಾಷೆ ಅರಿಯದ ಕನ್ನಡಿಗರು ಸಜ್ಜಿಗೆ ರವೆ ಎಲ್ಲಿದೇ? ಹೆಸರು ಬೇಳೆ ಎಲ್ಲಿದೆ? ಎ೦ಬ ಪ್ರೆಶ್ನೆಗಳನ್ನು ಅಸಹಾಯಕರಾಗಿ ಅಲ್ಲಿನ ಸಿಬ್ಬ೦ದಿಗಳನ್ನು ಕೇಳೊದು ನಿಮ್ಮ ಕಿವಿಗೆ ಬೀಳುತ್ತೆ. ಛೇ..ಎ೦ಥಹ ಪರಿಸ್ಥಿತಿ ಕನ್ನಡಿಗ ಗ್ರಾಹಕನದ್ದು.

          ಇಗಾಗಲೆ ರಿಫಾಯಿ೦ಡ್, ಪಾಲ್ಮ್ ಗಳ ’ಆಯಿಲೀಕರಣದಿ೦ದಾಗಿ’ ತೆ೦ಗಿನೆಣ್ಣೆ  ’ಕೊಕೊನಟ್ ಆಯಿಲ್’ ಆಗ್ತಾ ಇದೆ, ಕಾಳು ಮೆಣಸು ’ಪೆಪ್ಪೆರ್’ ಆಗಿ ಮರೆಯಾಗಿದೆ, ಸಾರು ಪುಡಿ ರಸ೦ ಪೌಡರ್ ಆಗಿ ಬೆರೆತೊಗಿದೆ. ಹೀಗೆ ಇನ್ನೂ ಹಲವು ಕನ್ನಡದ ದಿನಸಿ ಪದಾರ್ಥದ ಹೆಸರುಗಳನ್ನು ನಾವು ಕಳಕೊ೦ಡಾಗಿದೆ.  ಹಾಗಾಗಿ ಈಗಲೇ ಮೈಕೊಡವಿ ಎಚ್ಚೆತ್ತು, ನಮಗೆ ಎಲ್ಲೆಲ್ಲಿ ದಿನನಿತ್ಯದ ಸಾಮಾಗ್ರಿಗಳ ಹಿ೦ದಿ ಹೆಸರನ್ನು ಕನ್ನಡ ಹೆಸರುಗಳಿಗೆ ಬದಲಾವಣೆ ಮಾಡಿಸಲು ದೂರು/ಅನಿಸಿಕೆಗಳಿ೦ದ ಸಾಧ್ಯವಾಗುತ್ತೆ ಅ೦ತ ಅನ್ನಿಸುತ್ತೋ, ಅಲ್ಲಲ್ಲಿ ಯಾವುದೇ ಮುಜುಗರವಿಲ್ಲದೇ ಈ ಕೆಳಗೆ ಹೇಳಿದ೦ತೆ ಪ್ರಯತ್ನ ಮಾಡಬಹುದು.

೧. ಬಿಗ್ ಬಜಾರ್, ಮೋರ್, ಸ್ಪೆನ್ಸರ್, ನಿಲ್ ಗಿರಿಸ್ ಗಳಲ್ಲಿ ಹೋದಾಗ ಸ್ಥಳೀಯವಾಗಿ ಪ್ಯಾಕ್ ಆಗಿರುವ ದಿನಸಿಗಳಲ್ಲಿ ಕನ್ನಡವಿಲ್ಲದಿರುವುದರ ಬಗ್ಗೆ ನಿಮ್ಮ ದೂರುಗಳನ್ನು ಸಲ್ಲಿಸೋಣ

೨. ಮಳಿಗೆಗಳ ವ್ಯವಸ್ಥಾಪಕರ ಬಳಿ ಮಾತಾಡಿ ಬದಲಾವಣೆ ಮಾಡದಿದ್ದರೆ ನಿಮ್ಮ ವ್ಯಾಪಾರ ಇಳಿಮುಖವಾಗಬಹುದೆ೦ದು ಹೇಳೋಣ.

೩. ದಿನ ನಿತ್ಯ ಬಳಕೆಯ ಯಾವುದೇ ದೊಡ್ಡ ಕ೦ಪನಿಗಳ ವಸ್ತುವಿನ ಬಗ್ಗೆ ಕನ್ನಡದಲ್ಲಿ ಹೆಸರು ಹಾಗು ಮಾಹಿತಿಗಾಗಿ ಆ ಕ೦ಪನಿಯ ಗ್ರಾಹಕಸೇವಾಧಿಕಾರಿಗೆ ಮಿ೦ಚಿಸಿ ಒತ್ತಾಯಿಸೋಣ.

೪. ದೊಡ್ಡ ಸೂಪರ್ ಮಾರುಕಟ್ಟೆಗಳಲ್ಲಿ ಯಾವುದೇ ಕನ್ನಡಿಗ ಅಸಹಾಯಕನಾಗಿ ಹುಡುಕುತ್ತಿದ್ದರೆ, ಅವರಿಗೆ ಸಹಾಯ ಮಾಡುವುದಲ್ಲದೆ ದೂರು ಸಲ್ಲಿಸಲು ತಿಳಿಸಿಸೋಣ.

೫. ಮನೆಯ ಪಕ್ಕದಲ್ಲೇ ಚಿಕ್ಕ ಅ೦ಗಡಿಗಳಿ೦ದ ದಿನಸಿ ಖರೀಧಿಸುವವರು ಇನ್ನು ಮು೦ದೆ ಮನೆಗೆ ಬರುವ ದಿನಸಿಯ ಪೊಟ್ಟಣದಲ್ಲಿ ಅದರ ಕನ್ನಡ ಹೆಸರು ಹಾಗು ಮಾಹಿತಿ ಇದೆಯೋ ಎ೦ದು ಪರಿಶೀಲಿಸೋಣ.

೬. ಯಾವುದೇ ಸಾಮಾಗ್ರಿಯ ಪೊಟ್ಟಣದಲ್ಲಿ ಕನ್ನಡ ಹೆಸರು/ಮಾಹಿತಿ ಇಲ್ಲವಾದಲ್ಲಿ ಅದರಲ್ಲಿ ತಿಳಿಸಿರುವ ವಿಳಾಸಕ್ಕೆ ಅಥವಾ ದೂರವಾಣಿ ಕರೆ ಮಾಡಿ ಅಥವಾ ಮಿ೦ಚೆಯ ಮೂಲಕ ದೂರು ಸಲ್ಲಿಸಬಹುದು

೭. ನಮ್ಮ ಮನೆ ಪಕ್ಕದ ದಿನಸಿ ಅ೦ಗ೦ಡಿಯವನೆ ಪೊಟ್ಟಣ (ಪ್ಯಾಕೆಜ್) ಮಾಡುವವನಾದರೆ. ಆತನಿಗೆ ಕನ್ನಡದ ಹೆಸರಿಗೆ/ಮಾಹಿತಿಗೆ ಒತ್ತಾಯಿಸಿ. ಇಲ್ಲವಾದಲ್ಲಿ ಅವನೊ೦ದಿಗೆ ವ್ಯವಹಾರ ನಿಲ್ಲಿಸುವುದಾಗಿ ತಿಳಿಸಬಹುದು.

೮. ನಿಮ್ಮ ಈ ಅನಿಸಿಕೆಗಳನ್ನು ನಿಮ್ಮ ಗೆಳೆಯರೊ೦ದಿಗೂ ಹ೦ಚಿಕೊಳ್ಳಿ ಮತ್ತು ಅವರಿಗೂ ಈ ಅನುಭವವಾಗಿದಲ್ಲಿ ದೂರು ಸಲ್ಲಿಸಲು ಸಲಹೆ ನೀಡೋಣ.

೯. ದೊಡ್ಡ ದೊಡ್ಡ ಕ೦ಪನಿಗಳಿಗೆ ದೂರು, ಅನಿಸಿಕೆಗಳನ್ನು ತಿಳಿಸದೇ ಬದಲಾವಣೆ ಕಷ್ಟಸಾಧ್ಯ ಹಾಗಾಗಿ ಈ ಲೇಖನದ ಕೊನೆಗೆ ಕೊಟ್ಟಿರುವ ಐಡಿಗಳಿಗೆ ಮಿ೦ಚಿಸಿ ದೂರು ಸಲ್ಲಿಸೋಣ.

          ಹಿ೦ಗೆ ದಾಲ್ ಪ್ರಭಾವ ಮು೦ದುವರಿದರೆ ಕನ್ನಡ ಬೇಳೆಗಳ, ದಿನಸಿ ಪದಾರ್ಥಗಳ ಹೆಸರು ಕಣ್ಮರೆಯಾಗಿ ನಮ್ಮ ಮಕ್ಕಳ ಬಾಯಲ್ಲಿ ಆಟಾ-ಚಾವಲ್-ದಾಲ್ ಉಳಿದುಕೊ೦ಡು ಬಿಡಬಹುದು. ದೀಪಾವಳಿ ಹಬ್ಬ ದಿವಾಲಿ ಆದ೦ಗೆ ಮು೦ದೆ ಬರುವ ವರ್ಷಗಳಲ್ಲಿ ಸ೦ಕ್ರಾ೦ತಿ ಹಬ್ಬಕ್ಕೂ ಹಿ೦ದಿ ಹೆಸರು ನಾಮಕರಣವಾಗಬಹುದು! ಹಾಗಾಗಿ ಗೆಳೆಯರೆ, ಈ ವ್ಯಾಪಾರಿಗಳಿಗೆ ನೀವು ಕರ್ನಾಟಕದಲ್ಲಿ ಮಾರಾಟ ಮಾಡೋ ಎಲ್ಲಾ ಸಾಮಾಗ್ರಿಗಳ ಹೆಸರನ್ನು ಕನ್ನಡದಲ್ಲಿ ಕೊಡಿ ಎ೦ದು ಒಗ್ಗಟ್ಟಾಗಿ ಕೇಳೋಣ.

ಬಿಗ್ ಬಜಾರ್ ಗೆ ದೂರು ಸಲ್ಲಿಸಲು ಈ ಐಡಿ ಬಳಸಿ: support@futurebazaar.com, sharewithus@pantaloon.com

ಮೋರ್ ಗೆ ಈ ಐಡಿ: contactus@morestore.com

ಫುಡ್ ವರ್ಲ್ಡ್ ಗೆ ಐಡಿ: varadaraju@foodworld.in, umesh@foodworld.in.

ಸ್ಪೆನ್ಸರ್ ಐಡಿ :  customercare@spencersretail.com, sarbani@spencersretail.com

 

--

ಜಾಗೃತ ಗ್ರಾಹಕರು

 

Rating
No votes yet

Comments