ಹಣೆ ಬರಹ

ಹಣೆ ಬರಹ

ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?
ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?
ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?
ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು ಯಾರಿಗಾಗುವುದು?



(ಚಿತ್ರ ಕೃಫೆ: ವಿಕಿಪೀಡಿಯಾ)

ಸಂಸ್ಕೃತ ಮೂಲ:

ಪತ್ರಂ ನೈವ ಯದಾ ಕರೀರವಿಟಪೇ ದೋಷೋ ವಸಂತಸ್ಯ ಕಿಮ್
ನೋಲೂಕೋSಪ್ಯವಲೋಕತೇ ಯದಿ ದಿವಾ ಸೂರ್ಯಸ್ಯ ಕಿಮ್ ದೂಷಣಮ್ |
ಧಾರಾ ನೈವ ಪತಂತಿ ಚಾತಕ ಮುಖೇ ಮೇಘಸ್ಯ ಕಿಂ ದೂಷಣಮ್
ಯತ್ಪೂರ್ವಂ ವಿಧಿನಾ ಲಲಾಟಲಿಖಿತಂ ತನ್ಮಾರ್ಜಿತುಂ ಕಃ ಕ್ಷಮಃ ||

पत्रं नैव यदा करीरविटपे दोषो वसन्तस्य किम्
नोलूकोऽप्यवलोकते यदि दिवा सूर्यस्य किं दूषणम् ।
धारा नैव पतन्ति चातकमुखे मेघस्य किं दूषणम्
यत्पूर्वं विधिना ललाटलिखितं तन्मार्जितुं कः क्षमः ॥

(ಇದೇ ತಾನೇ ಸುಭಾಷಿತ ಮಂಜರಿಯಲ್ಲಿ ಓದಿದ್ದಿದು)

-ಹಂಸಾನಂದಿ

ಕೊಸರು: *: ಚಾತಕ ಪಕ್ಷಿ ಆಕಾಶದಿಂದ ಬೀಳುವ ಮಳೆನೀರು ನೆಲಕ್ಕೆ ಬೀಳುವ ಮೊದಲೇ (ಮಾತ್ರ) ಕುಡಿಯುತ್ತೆ -ಪ್ರಾಣ ಹೋಗುವಹಾಗಿದ್ದರೂ ಕೆರೆಕಟ್ಟೆಗಳ ನೀರನ್ನು ಕುಡಿಯುವುದಿಲ್ಲ ಅನ್ನುವುದು ಸಂಸ್ಕೃತ ಕಾವ್ಯಗಳಲ್ಲಿ ಆಗಾಗ್ಗೆ ಬಳಕೆಯಾಗುವ ಪಸಿದ್ಧ ಕವಿಸಮಯ

Rating
No votes yet

Comments