ಬಾಲ್ಯದಲ್ಲಿ ಕಂಡ ಗ್ರಹಣ

ಬಾಲ್ಯದಲ್ಲಿ ಕಂಡ ಗ್ರಹಣ

ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ್ಲಿದ್ದಾಗ)ಮಧ್ಯಾಹ್ನ ಹೊತ್ತಲ್ಲೆ ಗ್ರಹಣ ಕಾಲವಿತ್ತು.ರಜಾ ದಿನವೇ ಬಂದಿತ್ತು. ನಾವೆಲ್ಲರೂ ನನ್ನ ಅಜ್ಜನ ಮನೆಯಲ್ಲಿದ್ದೆವು. ಹೆಚ್ಚಿನ ಮೊಮ್ಮಕ್ಕಳೆಲ್ಲರೂ ಸೇರಿದ್ದರು.


ಅಮ್ಮ ರಾತ್ರಿ ಮಲಗುವಾಗ, “ನಾಳೆ ಗ್ರಹಣ ಮಧ್ಯಾಹ್ನ ಊಟ ಮಡೋಹಾಗಿಲ್ಲ. ಬೆಳಗ್ಗೆಯೇ ಹೊಟ್ಟೆ ಗಟ್ಟಿ ಮಾಡಿಕ್ಕೊಳ್ಳಿ” ಎನ್ನ ಬೇಕೇ.!!ನನಗೋ ಇಂಗ್ಲೀಷ್ ನ ಡಬ್ಲ್ಯೂ ಹೆಚ್ ಪ್ರಶ್ನೆಗಳದರೆ ತೊಂಬಾ ಹತ್ತಿರ. ಕೆಳುವಷ್ಟು ಕೇಳಿ, ನಿದ್ದೆ ಹೋದೆವು. ಬೆಳಿಗ್ಗೆ ಎದ್ದು ಎಲ್ಲರೂ ಸ್ನಾನಕ್ಕೆ ಕ್ಯೂ.. ಗ್ರಹಣ ಹಿಡಿಯೋ ಮೊದಲೇ  ಸ್ನಾನ ಮಾಡಬೇಕು ಎಂದು ಅಪ್ಪಣೆಯಾಗಿತ್ತು ಅಜ್ಜನವರದ್ದು!!


ಅಂತೂ ಉಪ್ಪಿಟ್ಟು ತಿಂದು, ೩ ಬಾಳೆ ಹಣ್ಣನ್ನೂ ಹೊಟ್ಟೆಗೆ ಹಾಕಿದೆವು, ಸಂಜೆವರೆಗೆ ಏನು ಇಲ್ಲ ಎಂದು ನೆನಪಿತ್ತು.ಅಜ್ಜ ಟಿವಿ ನೋಡುತ್ತಾ “ಗ್ರಹಣ ಹಿಡಿಯಲು ಪ್ರಾರಂಭವಾಯಿತು” ಎಂದಾಗ.. ಅದೆಲ್ಲೆಲ್ಲಿ  ಇದ್ದೆವೋ ಸೆಕುಂಡಲ್ಲಿ ಟಿವಿ ಮುಂದೆ ಹಾಜಿರ್!!ಕಣ್ಣೂ ಬಾಯಿ ಬಿಟ್ಟು ಹೊಸ ವಿಷ್ಯವೆಂದು ಕುತೂಹಲದಲ್ಲಿ ನೋಡುತ್ತಿದ್ದೆವು. ಆಗ ದೊಡ್ಡಮ್ಮ ಒಳಗಿಂದ ಹೋಗಿ ಸ್ವಲ್ಪ ತುಳಸಿ ಎಲೆ ಚಿವುಟಿ ತಂದು ಕೊಡಿ ಎಂದಾಗ ಒಬ್ಬರೂ ಏಳಲಿಲ್ಲ. ಮತ್ತೆ ದೊಡ್ಡವಳಾದ ಅಕ್ಕನಿಗೇ ಬುಲಾವ್ ಬಂತು. ಅವಳ ಹಿಂದಿನಿಂದ ನಾವೆಲ್ಲರೂ ಹೊರಟೆವು. ದೊಡ್ಡಮ್ಮ ಆ ಎಲೆಗಳನ್ನೆಲ್ಲಾ ಒಂದೊಂದಾಗಿಯೆ, ಹಾಲು,ಮಜ್ಜಿಗೆ, ಇರೋ ಪಾತ್ರೆ ಇತ್ಯಾದಿ ಮೇಲೆಲ್ಲಾ ಇಡುತ್ತಾ ಬಂದರು.ಪುನಃ ಕುತೂಹಲ,ಡಬ್ಲ್ಯೂ ಹೆಚ್ ಪ್ರಶ್ನೆಗಳು! “ವಾತಾವರಣ ವಿಷಮಯವಾಗಿರುತ್ತದೆ.. ತುಳಸಿ ಹಾಕಿದರೆ ಏನಾಗುವುದಿಲ್ಲ” ಎಂದು ಮಕ್ಕಳಿಗೆ ಎಷ್ಟು ಹೇಳಬೇಕೋ ಆಷ್ಟರಲ್ಲೇ ಸ್ಟಾಪ್! ಅಜ್ಜ ಪುನಃ ಬನ್ನಿರೆಂದರು. ಆಗ ಸೂರ್ಯ ಪೂರ್ತಿ ಕಾಣದಂತಾಗಿದ್ದ. ಅಮ್ಮ ನೋಡಿ ಕತ್ತಲಾದಂತಾಯಿತು ಎಂದಾಗ,ಅಣ್ಣ ಅಂಗಳಕ್ಕೆ ಹೋಗಿ ನೋಡಲು ಕಿತಾಪತಿ ಮಾಡ ಹೊರಟ. ದೊಡ್ಡಮ್ಮ ಬೈದು ಒಳ ಕೂರಿಸಿದರು.


ಹೊಟ್ಟೆ ಒಳಗೆ ಚುರ್ ಚುರ್ ಸದ್ದು.. ತಿನ್ನೋಹಾಗಿಲ್ಲ. ಏನಾದರು ತಿನ್ನ ಬಾಕು ಅನ್ನೋ ಹೊಟ್ಟೆ!. ಪಾಪ ಕೂಗದಿರುತ್ತದೆಯೇ ,ಅರ್ಧ ಗಂಟೆಗೊಮ್ಮೆ ಅಡುಗೆ ಕೋಣೆ ಒಳಗೆ  ಕಾಲಿಡುತ್ತಿದ್ದವರು ನಾವು!. ಹಾಗೂ ಹೀಗೂ ತಡೆದುಕೊಳುತ್ತಿದ್ದೆವು. ಅಣ್ಣ, ನಂಗೆ  ಗ್ರಹಣ ನೋಡಬೇಕು ಅಂದು ಅಜ್ಜನವರನ್ನು ಕಾಡತೊಡಗಿದ.ಒಹ್ ಹೀಗೂ ಒಂದು ರೀತಿಯಲ್ಲಿ ನಮಗೂ ನೋಡೋ ಅವಕಾಶ ಸಿಕ್ಕ ಹಾಗೆಯೇ ಎಂದು, ಅವನೊಡನೆ ನಮ್ಮ ಸ್ವರವನ್ನೂ ಸೇರಿಸಿದೆವು. ಅಜ್ಜ ಕೂತಲ್ಲಿಂದ ಎದ್ದು, ಹ್ಮ್ಮ್ ರಾಗ ನಿಲ್ಲಿಸಿ ಏನಾದರೂ ಮಾಡೋಣ ಅಂದು ದನದ ಕೊಟ್ಟಗೆ ಹತ್ತಿರ ಹೋಗಿ, ಒಂದು ಬಕೆಟ್ ಅಲ್ಲಿ ಸೆಗಣಿ ನೀರು ತಂದು ಅಂಗಳದ ಮಧ್ಯವಿರಿಸಿದರು. ಒಬ್ಬೊಬ್ಬರಾಗಿಯೇ ಆ ನೀರಲ್ಲಿ  ಗ್ರಹಣದ ಪ್ರತಿಬಿಂಬ ನೋಡಿ, ಸರಿ ಕಾಣುತ್ತೋ ಇಲ್ಲವೋ ಎಂದು ಅನುಮಾನದಿಂದಲೇ ಹೇಳಿದರು! ತಾ ಮುಂದು, ನಾ ಮುಂದು ಎಂದು, ಅಂತೂ ಕ್ಯೂ ಅಲ್ಲಿ ಅಣ್ಣ ಫಸ್ಟ್ ನಿತ್ತ! ಅದೇನು ಅವ ಕಂಡನೋ ಗೊತ್ತಿಲ್ಲ, ನಾನು ಬಗ್ಗಿ ನೋಡಿದಾಗ ನನ್ನ ಪ್ರತಿಬಿಂಬವೇ ನನಗೆ ಕಂಡದ್ದು!! ನಂಗೇನು ಕಾಣುತಿಲ್ಲ  ತೋರಿಸಿ ಎಂದು ಕೂಗಾಡಿದರೂ, ಅದು ಅಷ್ಟೇ ಕಾಣಿಸೋದು ಎಂದು ಸುಮ್ಮನಾದರು. ತಮ್ಮ ತಂಗಿಯರೆಲ್ಲ ಸಗಣಿ ಮೈ ಕೈ ಗೆ ಮೆತ್ತಿಕೊಂಡಿದ್ದು ಕಂಡಿತೇ ಹೊರತು, ಬಿಂಬವೇನೂ ಕಂಡಿಲ್ಲ ಎಂದೂ ಗೊತ್ತಾಯಿತು! ಅಲ್ಲಿ ಹೊಟ್ಟೆಯ ನೆನಪಾಗಲೇ ಇಲ್ಲ! :)


ಅಜ್ಜ ಪುನಃ ಬುಲಾವ್.. ಟಿವಿಯಲ್ಲೇ ಕಾಣುತ್ತಿದೆ, ನೋಡಿ ಎಂದರು ಸ್ವಲ್ಪವಾಗಿಯೇ ಬೆಳ್ಳಿಯುಂಗುರದಂತೆ ಕಾಣಿಸುತ್ತಿತ್ತು. ಅಷ್ಟಾಗುವಾಗ ೩ ವರ್ಷದ ಮಾವನ ಮಗಳು ಅಳಬೇಕೇ?. ಅವ್ಳಿಗೆ  ಬಾಳೆ ಹಣ್ಣು ಕೊಟ್ಟರು!.ನಾವೆಲ್ಲ ಕುತೂಹಲದ ಕಣ್ಣಲ್ಲಿ ನೋಡಿಯೇ ಬಾಕಿ!! ಆಗ ಅಜ್ಜ, ಪಂಚಾಂಗದಲ್ಲಿದೆ.. ವಯಸ್ಕರು, ಸಣ್ಣ ಮಕ್ಕಳು ತಿನ್ನಬಹುದು ಎಂದು!! ನಾವು ಯಾವ ಕೆಟಗರಿಯೋ ಗೊತ್ತಾಗಲಿಲ್ಲ. ಅಂತೂ ಗ್ರಹಣ ಬಿಟ್ಟಿತು.ಅಮ್ಮ ದೊಡ್ಡಮ್ಮ ಈಗ ಸ್ನಾನಕ್ಕೆ ನಾವು ಮುಂದೆ ಹೋಗುತ್ತೇವೆ, ಸ್ನಾನ ಮಾಡೇ ಅಡುಗೆ ಮಾಡ ಬೇಕು ಎನ್ನುವಾಗ, ಸರ್ರ್ ಅಂತ ಕ್ಯೂ ಬಿಟ್ಟು ಕೊಟ್ಟವು! ಅಂತೂ ಪುನಃ ಜಟ್ ಪಟ್ ಉಪ್ಪಿಟ್ಟು  ತಿಂದು ಹೊಟ್ಟೆಗೆ ಸಮಾಧಾನ ಹೇಳಿದೆವು.


ಇಂದು ಅಂತಹದೇ ದಿನ ಬಂತಲ್ಲ, ಏನೋ ಆ ದಿನಗಳಲ್ಲ ನೆನಪಾಯಿತು. ಒಬ್ಬೊಬ್ಬರು ಒಂದೊಂದು ಕಡೆ!! ನೆನಪುಗಳು ಮಧುರ.. ಮರುಕಳಿಸುತ್ತಿರು.. ಪುನಃ!!

ಗ್ರಹಣ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!!..

-ನಲ್ಮೆಯಿಂದ

ದಿವ್ಯ

Rating
No votes yet

Comments