ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ
ಈ ಸಲದ IPL ಪಂದ್ಯಾವಳಿಯಲ್ಲಿ ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ ಅನುಭವಿಸಿದ್ದಲ್ಲದೆ ಅದನ್ನು ವಿಶ್ವದ ಎಲ್ಲೆಡೆ ಟಾಮ್ ಟಾಮ್ ಬಾರಿಸಿ ಮತ್ತಷ್ಟು ಮಾನ ಕಳೆಯುವಂತೆ ಮಾಡಿಕೊಂಡರು. IPL ತಂಡಗಳ ಒಡೆಯರು ಸರಕಾರದ ಮಾತನ್ನು ಕೇಳಿಯೋ ಕೇಳದೆಯೋ ನಿಮ್ಮನ್ನು ಆರಿಸದಿದ್ದರೆ ಅದಕ್ಕೆ ಕಾರಣ ಪಾಕಿಗಳು ತಮ್ಮಲ್ಲೇ ಹುಡುಕಿ ಕೊಳ್ಳಬೇಕು.
ನಮ್ಮ ಭರತ ವರ್ಷ ಮಹಾ ಛತ್ರ ನೋಡಿ, ನಮ್ಮನ್ನು ತಮಗೆ ತೋಚಿದ ರೀತಿಯಲ್ಲಿ ನಡೆಸಿಕೊಳ್ಳುವವರಿಗೆ ನಾವು ಮಣೆ ಹಾಕಬೇಕು, ಇಲ್ಲಾ ಹಣೆ ಪಟ್ಟಿ ತಯಾರ್. ತನ್ನ ಕೊಳಕು ಥಳಕನ್ನು ಒಡಲಲ್ಲಿ ಇಟ್ಟುಕೊಂಡು ತನ್ನ ಪಾಡಿಗೆ ತಾನಿದ್ದ ಮುಂಬೈ ನಗರದ ಮೇಲೆ ಕ್ರೌರ್ಯವನ್ನು ತಮ್ಮ AK 47 ನ ನಿರ್ದಯೀ ಕೊಳವೆಗಳ ಮೂಲಕ ರಕ್ತದ ಹೊಳೆ ಹರಿಬಿಟ್ಟ, ವಿಶ್ವವೇ ನಿಬ್ಬೆರಗಾಗಿ ನೋಡಿದ ನಗ್ನ ಹಿಂಸೆ ಸೂತ್ರಧಾರರು ಪಾಕಿಗಳು ಒಂದಂಶವನ್ನು ನೆನಪಿನಲ್ಲಿಡಬೇಕು. ನಿಮ್ಮ ಈ unreasonable ಕ್ರೌರ್ಯಕ್ಕೆ ಉತ್ತರ ಒಂದು ದಿನ ಸಿಕ್ಕೇ ಸಿಗುತ್ತದೆ, ಅದು ನಮ್ಮಿಂದಲೇ ಆಗಬೇಕಿಂದಿಲ್ಲ, ಸ್ವತಃ ಒಳಗಿನವರೆ ಆ ದೇಶವನ್ನು ವಾಸಿಸಲಯೋಗ್ಯವನ್ನಾಗಿ ಮಾಡಲಿದ್ದಾರೆ, ಮಾಡುತ್ತಲೂ ಇದ್ದಾರೆ. ತಾವು ಮಾಡಿದ ಪಾಪಕರ್ಮಗಳಿಗೆ ಬಾಲಿವುಡ್ ಮತ್ತು ಕ್ರಿಕೆಟ್ ಮೂಲಕ ನಿಮ್ಮನ್ನು ನಾವು ಸನ್ಮಾನಿಸಿ, ಆದರಿಸಿದ್ದರೆ ಆ ಆದರ ಭಾರತೀಯರ ಸೌಜನ್ಯ ಮಾತ್ರ ಮತ್ತು ಅದನ್ನು ನಿಮ್ಮ ಜನ್ಮ ಸಿದ್ಧ ಹಕ್ಕೆಂದು ತಿಳಿದು ನಮ್ಮ ದಬಾಯಿಸಲು ಯತ್ನಿಸಬಾರದು. ಹೌದು ಕ್ರೀಡೆ ಮತ್ತು ರಾಜಕಾರಣ ಬೇರೆ ಬೇರೆಯೇ ಇರಬಬಹುದು. ಆದರೆ ಕ್ರೀಡೆ ಮತ್ತು ರಾಜಕಾರಣ ಸಹ ಪ್ರಜೆಗಳ ಬೆಂಬಲ ಮತ್ತು ಭಾಗಿತ್ವದಿಂದ ನಡೆಯುವುದರಿಂದ ರಾಜಕೀಯ ಸಂಬಂಧ ಖಂಡಿತ ಕ್ರೀಡೆಯ ಮೇಲೆ ಬೀಳುತ್ತದೆ
ಪಾಕ್ ಆಟಗಾರರನ್ನು ಆರಿಸದೆ ಇದ್ದದ್ದಕ್ಕೆ ವಿಶ್ವದ ದೊಡ್ಡ ದೊಡ್ಡ ಪತ್ರಿಕೆಗಳು ಭಾರತದ ಕಡೆ ಬೆಟ್ಟು ಮಾಡಿ ನಾವು ಅಪರಾಧಿಯೇನೋ ಎನ್ನುವಂತೆ ಚಿತ್ರಿಸಿದವು. ಆ ಪತ್ರಿಕೆಗಳಿಗೆ ಬರೆದ ವಾಚಕರೂ ಸಹ IPL ಪಂದ್ಯಾವಳಿಯ ಮೇಲೆಯೇ ಸಂಶಯ ಬರುವಂತೆ ಬರೆದರು . ಅದರ ಉದಾಹರಣೆ ಕೆಳಗಿದೆ ನೋಡಿ.
"Obviously the whole of IPL is run by "black money", "money laundering" and "drug money"; using the tournament to turn money earned from criminal activities into good money".
ಮೇಲಿನ ಮಾತು ಸತ್ಯವೋ ಮಿಥ್ಯೆಯೋ ತಿಳಿಯುವ ಆಸಕ್ತಿ ನಮಗಿಲ್ಲ. ಆ ಕೆಲಸ ಸರಕಾರ ಮಾಡಿಕೊಳ್ಳಲಿ ಹಾಗೂ ಕಪ್ಪು ಹಣ, ಹವಾಲ, ಮುಂತಾದ ಹಣದಿಂದ ನಡೆಯುವ ಕ್ರೀಡೆಯಿಂದ ನೀವು ಹಿಂದೆ ಸರಿದು ಸ್ವಚ್ಛತೆ ಕಾಪಾಡಿಕೊಳ್ಳಿ, ಮತ್ತು ನಮ್ಮನ್ನು ನಮ್ಮ ಪಾಡಿಗೆ ಬಿಡಿ.
Comments
ಉ: ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ
In reply to ಉ: ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ by shivaram_shastri
ಉ: ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ
In reply to ಉ: ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ by abdul
ಉ: ಪಾಕಿ ಆಟಗಾರರು ಆಯ್ಕೆ ಆಗದೆ ಮುಖಭಂಗ