ಮಂಗಳನ ಅಂಗಳಕೆ ಇಣುಕು ನೋಟ

ಮಂಗಳನ ಅಂಗಳಕೆ ಇಣುಕು ನೋಟ

ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ?

ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ... ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ.  ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ ಕೆಂಬಣ್ಣದ, ನಕ್ಷತ್ರದಂತೆ ಕಾಣುವ  ಉದಯಿಸುತ್ತಿರುವ ಮಂಗಳನನ್ನು ಕಾಣಬಹುದಾಗಿದೆ.

ಇಂದು ರಾತ್ರಿ ಮಂಗಳ ಭೂಮಿಗೆ ೬೧ ಮಿಲಿಯನ್ ಮೈಲುಗಳಷ್ಟು ಬಳಿಸಾರಲಿದೆ, ಅಂದರೆ ೯೮ ಮಿಲಿಯನ್ ಕಿಲೋಮೀಟರುಗಳು. ಇಷ್ಟು ಸಾಕು, ಖಗೋಳಾಭ್ಯಾಸ ನೆಡೆಸುತ್ತಿರುವ ಹವ್ಯಾಸಿಗಳು ತಮ್ಮ ವಿಶೇಷ ಉಪಕರಣಗಳನ್ನು ಮಂಗಳನತ್ತ ತಿರುಗಿಸಿ ಅಲ್ಲಿನ ಮೇಲೈ ಬಗೆಗಿನ ವಿಷಯಗಳನ್ನು ಸೆರೆಹಿಡಿಯಲು.

೬ ಇಂಚಿನ (೧೫.೨ ಸೆಂಟಿ ಮೀಟರ್) ಟೆಲಿಸ್ಕೋಪಿನ ಸಹಾಯದಿಂದ ಮಂಗಳನ ಹಿಮದೃವಗಳನ್ನೂ, ಮತ್ತಿತರೆ ಮೇಲ್ಮೈ ಗುಣಾವಶೇಷಗಳನ್ನೂ ನೋಡಬಹುದು ಎಂದು ಬ್ರಿಟಿಷ್ ಕೊಲಂಬಿಯಾದ ಎಚ್.ಆರ್ ಮ್ಯಾಕ್ ಮಿಲನ್ ಸ್ಪೇಸ್ ಸೆಂಟರ್ ನ ಖಗೋಳ ವಿಜ್ಞಾನಿ ರಮಿಂದರ್ ಸಿಂಗ್ ಹೇಳುತ್ತಾರೆ.

(ಉಲ್ಲೇಖ: "Mars Pole Holds Enough Ice to Flood Planet, Radar Study Shows.")

ನಿಮ್ಮ ಬೈನಾಕುಲರ್ ಬಳಸಿ ನೀವು ಮಂಗಳನನ್ನು ನೋಡಿದಾಗ ಅದು ತಟ್ಟೆಯಂತೆ ಕಾಣಲಿದ್ದು, ಅದು ಇತರೆ ನಕ್ಷತ್ರಗಳಲ್ಲ ಎಂಬುದನ್ನು ಮನಗಾಣಬಹುದಾಗಿದೆ. ಸಾಮಾನ್ಯವಾಗಿ ನಕ್ಷತ್ರಗಳು ಮಿನುಗುತ್ತಿರುವುದು ನಿಮಗೆ ಗೊತ್ತಿರುವ ವಿಷಯವಲ್ಲವೇ?


ಜನವರಿ ೨೯ ರ ದಿನದಿಂದ ಮಂಗಳ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಂತೆಯೇ, ತಾನು ಪೂರ್ವದಲ್ಲಿ ಹುಟ್ಟುತ್ತಾನೆ ಮತ್ತು ರಾತ್ರಿ ಪೂರ್ತಿ ಕೆಂಬಣ್ಣದ ಗ್ರಹವಾಗಿ ನಮಗೆ ನೋಡಲು ಲಭ್ಯವಿರುತ್ತಾನೆ.


ಸೂರ್ಯ, ಭೂಮಿ ಮತ್ತು ಮಂಗಳ ಒಂದನ್ನೊಂದು ಎದುರಾದಾಗ ಅವು ಒಂದೇ ನೇರದಲ್ಲಿರುವುದನ್ನು ನಾವು ಸೌರಮಂಡಲದ ಮೇಲಿನಿಂದ ಕಾಣಬಹುದಾಗಿದೆ.

(ಏನಾಗುತ್ತೆ ಸೂರ್ಯ, ಭೂಮಿ ಮತ್ತು ಮಂಗಳ ಒಂದೇ ರೇಖೆಯಲ್ಲಿ ಕೂಡಿದಾಗ - ಇದನ್ನು ಓದಿ Mars is on the opposite side of the sun from Earth, aka in solar conjunction.)

ಹೀಗೆ ಮಂಗಳ ಸೂರ್ಯ ಮತ್ತು ಭೂಮಿಯ ಜೊತೆಗೆ ಕಂಡಾಗ ಅದು ಪೂರ್ಣ ಚಂದ್ರನ ಬಳಿ ಕಂಡುಬರುತ್ತಾನೆ, ಮತ್ತು ಈ ಇಬ್ಬರೂ ನೀಲಾಕಾಶವನ್ನು ಜೊತೆಯಾಗಿಯೇ ಸವೆಸುತ್ತಾರೆ.

 

ಮಂಗಳನನ್ನು ನೋಡುವುದು ಸುಲಭ

ಭೂಮಿ ಮತ್ತು ಮಂಗಳನ ನಡುವಿನ ಅಂತರ ಸಮಯ ಸಮಯಕ್ಕೂ ಬದಲಾಗುತ್ತಿರುತ್ತದೆ. ಇದಕ್ಕೆ ಮೂಲ ಕಾರಣ ಗ್ರಹಗಳ ಪಥ ಗುಂಡಗಿರದೆ ಕಂಕಣಾಕಾರದಲ್ಲಿ (elongated ellipses) ರೂಪದಲ್ಲಿರುವುದು.

ಅಂದರೆ ಮಂಗಳ ಪ್ರತಿ ಎರಡು ವರ್ಷಕ್ಕೊಮ್ಮೆ (ಬಹುಶ:) ಭೂಮಿಯ ಅತಿ ಸಮೀಪ ಹಾದು ಹೋಗುತ್ತಾನೆ.

ಆಗಸ್ಟ್ ೨೦೦೩ ರಲ್ಲಿ ಮಂಗಳ ,೬೦೦೦೦ ವರ್ಷಗಳಲ್ಲೇ ಬಹು ಹತ್ತಿರ ಎನ್ನಬಹುದಾದಷ್ಟು ಭೂಮಿಯ ಬಳಿ ಸಾರಿ ಹೋದ.. ಆಗ ಮಂಗಳ ಮತ್ತು ಭೂಮಿಯ ಅಂತರ ೩೫ ಮಿಲಿಯನ್ ಮೈಲುಗಳು ಅಂದರೆ ೫೬ ಮಿಲಿಯನ್ ಕಿಲೋಮೀಟರುಗಳು. ಆಗಂತೂ ಖಗೋಳಾಸಕ್ತರು ಮಂಗಳನ ಉತ್ಕೃಷ್ಟ ಚಿತ್ರಣಗಳನ್ನು ನೋಡಿದರಲ್ಲದೇ, "Mars Spectacular" ಎಂಬ ಮಿಂಚಂಚೆಯನ್ನು ಕಳಿಸಿ ಅನೇಕರನ್ನು ಮೋಸ ಗೊಳಿಸಲಾಯ್ತು ಕೂಡ.

ಇಂದಿನ ದಿನ ಮಂಗಳ ಅಷ್ಟು ಹತ್ತಿರವಿಲ್ಲದಿದ್ದರೂ, ಮಂಗಳನನ್ನು ಬರಿಗಣ್ಣಿನಲ್ಲಿ ಕಾಣಲು ಒಂದು ಒಳ್ಳೆಯ ಅವಕಾಶ ಎಂದು ಸಿಂಗ್ ಹೇಳುತ್ತಾರೆ.


ಮಂಗಳ ರಾತ್ರಿಯ ನೀಲಾಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಮೂರನೇ ವಸ್ತು. ಚಂದ್ರ ಮತ್ತು ಸಿರಿಯಸ್ ನಕ್ಷತ್ರ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿರುತ್ತವೆ.


ಇಂದು ಮರೆಯದೆ ಮಂಗಳನ ದರ್ಶನ ಮಾಡ್ತೀರಲ್ಲಾ?ನಿಮ್ಮ ಅನುಭವ ಹಂಚಿಕೊಳ್ಳಿ..

ಸುದ್ದಿ ಮೂಲ: ನ್ಯಾಷನಲ್ ಜಿಯೋಗ್ರಾಫಿಕ್ ಡಾಟ್ ಕಾಮ್

 

ಸೂಚನೆ: ಮಂಗಳ ಭೂಮಿಯ ಬಳಿ ಸಾರಿ ಎದುರುಬದುರಾದಂತೆಲ್ಲಾ ಅತ್ಯಂತ ಪ್ರಕಾಶಮಾನವಾಗಿಯೂ, ದೂರವಾದಂತೆಲ್ಲಾ ಸ್ಪಷ್ಟವಾಗಿಯೂ ಕಾಣುತ್ತದೆ. 

Rating
No votes yet

Comments