ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಮೊನ್ನೆ ದಿನಾಂಕ ೧೫-೦೧-೨೦೧೦ನೇ ಶುಕ್ರವಾರ ಖಗೋಳ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಅತಿ ಮಹತ್ವದ್ದಾಗಿದ್ದ, ವರ್ಷದ ಮೊದಲ ಮತ್ತು ಶತಮಾನದ ಅತ್ಯಂತ ದೀರ್ಘ ಸೂರ್ಯಗ್ರಹಣ ಸಂಭವಿಸಿದ್ದು ಜಗಜ್ಜಾಹೀರು. ನಭೋಮಂಡಲದಲ್ಲಿ ಸೂರ್ಯ ಚಂದ್ರರ ನಡೆಯಿಂದಾಗುವ ಅಪರೂಪದ ಈ ನೆರಳು ಬೆಳಕಿನ ಆಟವನ್ನು ಪ್ರತಿಯೊಬ್ಬರೂ ನೋಡಲೇ ಬೇಕೆಂಬುದು ಎಲ್ಲರ ಅಭಿಮತ. ಬರಿ ಗಣ್ಣಿನಿಂದ ನೋಡುವಂತಿಲ್ಲ. ಸಗಣಿ ನೀರಿನಲ್ಲಿ ಒನಕೆ ನಿಲ್ಲಿಸಿಕೊಂಡು ನೋಡುವುದು ಒಂದು ಪರಿ ಇದು ತೀರ ಹಿಂದಿನಿಂದ ಬಂದ ಪದ್ಧತಿ, ಈ ಬಾರಿ ಇದೂ ಸಹ ಅಪಾಯಕಾರಿ ಎಂದು ಬಿಂಬಿಸಲಾಗಿತ್ತು.
ಎಕ್ಸ್ರೇ ಪೇಪರ್ ಗಳ ಮೂಲಕ ನೋಡುವುದೂ ಅಪಾಯಕಾರಿ. ಹಾಗಿದ್ದರೆ ನೋಡಲೇ ಬೇಕಾದುದನ್ನು ನೋಡುವುದು ಹೇಗೆ? ಪೇಟೆ ಪಟ್ಟಣಗಳಲ್ಲಿ ಸಾಮಾನ್ಯವಾಗಿ ವಿಜ್ಞಾನ ಕೇಂದ್ರಗಳಲ್ಲಿ , ಪ್ಲಾನಿಟೋರಿಯಂಗಳಲ್ಲಿ ಈ ಬಗ್ಗೆ ವಿಶೇಷ ವ್ಯವಸ್ಥೆ ಗೊಳಿಸಲಾಗಿತ್ತು. ನಮ್ಮ ಹಳ್ಳಿಯ ಜನರಿಗೆ ಇದೆಲ್ಲವೂ ಹುಳಿ ದ್ರಾಕ್ಷಿ.ಮೊದಲಿನಿಂದಲೂ ಈ ಇದನ್ನು ನೋಡುವ ಕುತೂಹಲವಿದ್ದ ನಾನು ಈ ಹಿಂದಿನ ಸಂಪೂರ್ಣ ಸೂರ್ಯಗ್ರಹಣವನ್ನು ಮನೆ ಅಂಗಳದಲ್ಲಿ ಕಪ್ಪು ಕಂಬಳಿಯ ಗೂಡು ನಿರ್ಮಿಸಿ, ಅದರಲ್ಲೊಂದು ರೊಟ್ಟಿನ ಪೆಟ್ಟಿಗೆಯನ್ನು ಸೂರ್ಯನಿಗೆದುರಾಗಿ ಜೋಡಿಸಿ ಪಿನ್ ಹೋಲ್ ಪ್ರೊಜೆಕ್ಟರ್ (ಸೂಜಿರಂದ್ರ ಬಿಂಬ ಗ್ರಾಹಿ)ನಿರ್ಮಿಸಿಕೊಂಡು ನೋಡಿದ್ದೆ. ಇದರಿಂದ ನಾನು ಆ ಸಂದರ್ಭದಲ್ಲಿ ಕಂಬಳಿ ಗೂಡಿನಲ್ಲಿದ್ದುದರಿಂದ ಹೊರ ಪ್ರಪಂಚದಲ್ಲಾದ ಬದಲಾವಣೆ ನೋಡಲಾಗಲಿಲ್ಲ.
ಅದಕ್ಕೆ ಈ ಬಾರಿ ಕಂಡುಕೊಂಡ ಉಪಾಯ ಮನೆಯ ಜಗುಲಿಯಲ್ಲಿ (ಹೆಂಚಿನ ಮನೆ) ಒಂದು ಹಂಚನ್ನು ಸ್ವಲ್ಪ ಸರಿಸಿ ಒಂದು ರೊಟ್ಟಿನ ತುಂಡನ್ನಿಟ್ಟು ಚಿಕ್ಕ ರಂಧ್ರದಲ್ಲಿ ಸೂರ್ಯನ ಬೆಳಕು ಒಳಬರುವಂತೆ ಮಾಡಿ ನೆಲದ ಮೇಲೆ ಬೆಳಕು ಬೀಳುವೆಡೆ ಬಿಳಿ ಪೇಪರ್ ಹಾಕಿ ಪದೆ ಪದೇ ಕ್ಯಾಮರಾದಲ್ಲಿ ಫೋಟೋ ಕ್ಲಿಕ್ಕಿಸಿದೆ.
ನಂತರ ಒಂದು ಪ್ರಯೋಗ ಮಾಡುವ ಉದ್ದೇಶದಿಂದ ಜಗುಲಿಯಲ್ಲಿ ಬೆಳಕಿಗಾಗಿ ಹಾಕಿರುವ ಗಾಜಿನ ಮೂಲಕ ಬರುತ್ತಿದ್ದ ಬೆಳಕಿಗೆ ಜರಡಿಯೊಂದನ್ನು ಹಿಡಿದು ಜರಡಿಯಲ್ಲಿರುವ ತೂತುಗಳಷ್ಟೇ ಸೂರ್ಯನನ್ನು ಸೃಷ್ಟಿಸಿ ಫೋಟೋ ತೆಗೆದೆ. ಇದು ಸಮೂಹವಾಗಿ ನೋಡಿದಾಗ ರಂಗೋಲಿಯಂತೆ ಕಂಡರೂ ದೊಡ್ಡದಾಗಿ ನೋಡಿದಾಗ ಪ್ರತಿಯೊಂದರಲ್ಲೂ ಒಂದೊಂದು ಗ್ರಹಣ ಹಿಡಿದ ಸೂರ್ಯನನ್ನು ನೋಡಬಹುದು.ಈ ಕಾರ್ಯದಲ್ಲಿ ನಾನು ಮಾಡಿದ ತಪ್ಪು ಒಂದೆಂದರೆ, ಇಲ್ಲಿ ಬರುವ ಚಿತ್ರ ಉಲ್ಟಾ ಬರುತ್ತದೆ ಎಂಬುದನ್ನೇ ಮರೆತು ಒಂದೊಂದು ಬಾರಿಯೂ ಬೇರೆ ಬೇರೆ ದಿಕ್ಕಿನಲ್ಲಿ ನಿಂತು ಫೋಟೋ ತೆಗೆದಿದ್ದೇನೆ. ಅದಕ್ಕಾಗಿ ಗ್ರಹಣ ಹಿಡಿದ ದಿಕ್ಕು, ಬಿಡುತ್ತಿರುವ ದಿಕ್ಕು ಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ನಮ್ಮೂರಿನಲ್ಲಿ ಕೆಳ ಎಡಭಾಗದಿಂದ ಗ್ರಹಣ ಪ್ರಾರಂಭವಾಗಿತ್ತು ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಈ ಬಗ್ಗೆ ತಂತ್ರಜ್ಞಾನವನ್ನು ಬಳಸಿ ನಮ್ಮೂರಿನಲ್ಲಿಯ ಸೂರ್ಯಗ್ರಹಣದ ಚಿತ್ರವನ್ನು ಈ ಕೊಂಡಿಯಲ್ಲಿ ನೋಡಬಹುದು.
Comments
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
In reply to ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ by devaru.rbhat
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ
ಉ: ನಮ್ಮ ಮನೆಯಲ್ಲಿ ನಾನು ಕಂಡ ಸೂರ್ಯಗ್ರಹಣ