ವಚನ + ಟಿಪ್ಪಣಿ

ವಚನ + ಟಿಪ್ಪಣಿ

ಈ ಬಸವಣ್ಣನವರ ವಚನವನ್ನು ವಿಚಾರಮಂಟಪದಿಂದ ಪಡೆದೆ.

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು!

ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ

ಹೋಯಿತ್ತು.

ಅದಂದೆ ಹುಟ್ಟಿತ್ತು. ಅದಂದೆ ಹೊಂದಿತ್ತು.

ಕೊಂದವರುಳಿದರೆ ಕೂಡಲಸಂಗಮದೇವ

----

ನನಗೆ ತಲೆಗಿಳಿದಿದಿಷ್ಟು.

ಇದು ಸಾವು ಅನ್ನುವುದು ಯಾವಾಗ ಬೇಕಾದರೂ ಬರಬಹುದು... ಅದರ ಬಗ್ಗೆ ಚಿಂತೆ ಬೇಡ ಅಂತ. ಮೊದಲು ಕುರಿ ತಳಿರನ್ನು ತಿಂತು ..ಅಂದೆ ಆ ಕುರಿಯನ್ನು ಕಡಿಯಲಾಯಿತು ...ಆ ಕುರಿಯನ್ನು ಕೊಂದವರು ಆಮ್ಯಾಕೆ ಸತ್ತರು... ಸಾವು ಯಾರನ್ನೂ ಬಿಡಲ್ಲ...

ಆ ಕುರಿ ತಳಿರು ತಿಂಧಾಗೆ ನಾವು ಸಾಯ್ತಿವಿ ಅಂತ ಗೊತ್ತಿದ್ರೂ ಆಸೆ ಪಡ್ತಾನೆ ಇರ್ತೀವಿ.

ನಿಮಗೆ ಬೇರೆ ತರ ತಲೆಗಿಳಿದರೆ ತಿಳಿಸಿ.

Rating
No votes yet

Comments