ಪದ್ಮ ಪಡೆದ ಛದ್ಮ ವೇಷಧಾರಿಗಳು

ಪದ್ಮ ಪಡೆದ ಛದ್ಮ ವೇಷಧಾರಿಗಳು

ಮೊನ್ನೆ ಹೀಗೆಯೇ ಪತ್ರಿಕೆ ಓದುವಾಗ, ಪದ್ಮಶ್ರೀ ಪ್ರಶಸ್ತಿಯ ಬಗ್ಗೆ ಎದ್ದಿರುವ ವಿವಾದಗಳ ಕುರಿತು ಓದುತ್ತಿದ್ದೆ. ಆಗ ನನ್ನನ್ನು  ಬಹಳವಾಗಿ ಕಾಡಿದ ಸಂಗತಿ ಎಂದರೆ, ಘನ ಭಾರತ ಸರ್ಕಾರವು, ಒಬ್ಬ ಭಯೋತ್ಪಾದಕನಿಗೂ ಪದ್ಮಶ್ರೀ ಪ್ರಶಸ್ತಿ ನೀಡಿದೆ ಎನ್ನುವುದು. ಬಹಳಷ್ಟು ಸಾರಿ ಈ ಪ್ರಶಸ್ತಿಗಳು, ಕೇವಲ ನೆಪ ಮಾತ್ರಕ್ಕಾಗಿ ಅನ್ನಿಸಿಬಿಡುತ್ತವೆ. ಎಷ್ಟೋ ಸಾರಿ ಪಾತ್ರರಾದವರಿಗೆ ಈ ಪ್ರಶಸ್ತಿಗಳು ಸಲ್ಲುವುದೇ ಇಲ್ಲ. ಈ ಬಾರಿಯ ಪ್ರಶಸ್ತಿಯ ಪಟ್ಟಿ ಕೂಡ ವಿವಾದಾತ್ಮಕವಾಗಿಯೇ ಇದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ಹಳೆಯ ಮೌಲ್ಯಗಳನ್ನು ಕಾಯ್ದುಕೊಳ್ಳುತ್ತಿದೆ. ಮಕ್ಕಳಿಗೆ ಆದರ್ಶ ವ್ಯಕ್ತಿಗಳ ಬಗೆಗೆ ಹೇಳುವಾಗ, ಅವರಿಗೆ ಇಂಥ ಪ್ರಶಸ್ತಿ ಸಂದಿತ್ತು, ಆ ವ್ಯಕ್ತಿ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಎಂದು ಹೇಳುವಾಗ, ಮಕ್ಕಳು ಆ ವ್ಯಕ್ತಿಗಳನ್ನು ತಮ್ಮ ಮಾದರಿ ವ್ಯಕ್ತಿಗಳನ್ನಾಗಿ ಆಯ್ದುಕೊಳ್ಳುತ್ತಾರೆ. ಅದೇ ಈ ಬಾರಿಯ ಪ್ರಶಸ್ತಿಯ ಪಟ್ಟಿ ನೋಡಿದಾಗ, ಹಿಂದಿ ಸಿನಿಮಾ ರಂಗದ ಸೈಫ್ ಅಲಿ ಖಾನ್ ರಿಗೆ ಪ್ರಶಸ್ತಿ ಲಭಿಸಿದೆ ಆದರೆ ಇದೆ ಸೈಫ್ ಅಲಿ ಖಾನ್, ಹರಿಣಗಳನ್ನು ಕೊಂದು ಅದಕ್ಕಾಗಿ ಒಂದು ವರ್ಷ ಸೆರೆ ವಾಸ ಅನುಭವಿಸಿದವ. ಅಷ್ಟೇ ಅಲ್ಲದೇ, ಕಾಶ್ಮೀರದ ಶರಣಾಗತ ಉಗ್ರ ಗುಲಾಮ್ ಮೊಹಮದ್ ಮೀರ್ ಗೂ ಪದ್ಮಶ್ರೀ ನೀಡಿರುವುದು ಈ ಪ್ರಶಸ್ತಿಯ ಘನತೆಗೇ ಕುತ್ತು ತಂದಿದೆ.ಇದರಂತೆಯೇ, ಪದ್ಮಭೂಷಣ ಪ್ರಶಸ್ತಿಗಾಗಿ ಸರ್ಕಾರ ಆಯ್ಕೆ ಮಾಡಿರುವುದು ಸಂತ ಸಿಂಗ್ ಚತ್ವಾಲ್, ಈತನ ಮೇಲೆ ಎಸ.ಬಿ.ಐ ವಂಚನೆ ಹಗರಣದ ಆರೋಪ ಕೂಡ ಇದೆ.ಇದೇ ರೀತಿಯಲ್ಲಿ ಮುಂದುವರಿದರೆ, ಕೊನೆಗೆ ಜೈಲಿನ ಖೈದಿಗೂ ಭಾರತ ರತ್ನ ಪ್ರಶಸ್ತಿ ದೊರಕಿದರೆ ಆಶ್ಚರ್ಯ ಪಡಬೇಕಿಲ್ಲ. ಇಂಥವರನು ಹೆತ್ತ ಭಾರತ ಮಾತೆಯ ತನುಜಾತೆಯರು ಪ್ರಶಸ್ತಿಗಾಗಿ ಸಂತೋಷಿಸಬೇಕೋ ಅಥವಾ ಇಂಥ ಮಕ್ಕಳನ್ನು ಹೆತ್ತ ತಪ್ಪಿಗೆ ಕಣ್ಣೀರು ಹಾಕಬೇಕೋ ಆ ಭಾರತ ಮಾತೆಯೇ ಹೇಳಬೇಕಾಗಿದೆ.
Rating
No votes yet

Comments