ಆಲ್ ಈಸ್ ವೆಲ್!?!
ಕಾಲೇಜಿನ ಪರೀಕ್ಷೆ ಮೊನ್ನೆಯಷ್ಟೇ ಮುಗಿಯಿತು.ಪರೀಕ್ಷೆ ನಡೆದ ದಿನಗಳಲ್ಲೆಲ್ಲಾ ಸುಮಾರು ಜನ ನನ್ನ ಸಹಪಾಠಿಗಳು ಪರೀಕ್ಷೆಯ ಭಯದಲ್ಲಿದ್ದವರಿಗೆಲ್ಲಾ "ಆಲ್ ಈಸ್ ವೆಲ್" ಎನ್ನುತ್ತಿದ್ದರು.ನನಗೆ ಏನೂ ಅರ್ಥವಾಗಲಿಲ್ಲ. ಇದೇಕೆ ಹೀಗೆ ಎಂದು ನನ್ನ ಸ್ನೇಹಿತನನ್ನು ಕೇಳಿದಾಗ ಅದು "೩ ಇಡಿಯಟ್ಸ್" ಚಿತ್ರದ ಪ್ರಭಾವ ಎಂದು ಹೇಳಿದ.ಸರಿ, ಪರೀಕ್ಷೆ ಮುಗಿದ ಮೇಲೆ ಅದರ ಕಥೆಯನ್ನು ಕೇಳಿದೆ;ಹೇಳಿದ.ಕಥೆ ತುಂಬ ಸರಳವಾಗಿತ್ತು.ಕಾಲೇಜಿಗೆ ನಾವು ಹೋಗುವುದು ಓದುವುದಕ್ಕಾಗಿ,ಕೆಲಸಕ್ಕಾಗಿ ಅಲ್ಲ ಎಂದು.ಮತ್ತು ಮನಸನ್ನು ಶಾಂತವಾಗಿಟ್ಟುಕೊಳ್ಳಲು ಹೀಗೆ "ಆಲ್ ಈಸ್ ವೆಲ್" ಎಂದುಕೊಂಡರೆ ಜೀವನದಲ್ಲಿ ಸಮಸ್ಯೆ ಎದುರಿಸುವ ಧೈರ್ಯ ಬರುತ್ತದೆ ಎಂದು.ಇರಬಹುದು.ಆದರೆ ಕಥೆಯಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಂದಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತಾರತಮ್ಯದ ಧೋರಣೆಯಿಂದ ನಡೆದುಕೊಳ್ಳುತ್ತಾರೆ ಎಂದು.ಇದನ್ನೆಲ್ಲಾ ಒಟ್ಟಾರೆಯಾಗಿ ನೋಡಿದಾಗ ಸಮಾಜದಲ್ಲಿ ಆಗುತ್ತಿರುವ ನೈತಿಕ,ಬೌಧ್ಧಿಕ ಅಧಃಪಥನವನ್ನ ಎತ್ತಿ ತೋರಿಸುತ್ತಿರುವಂತಿದೆ.ನನಗೇನೋ ಸಮಾಜದಲ್ಲಿನ ಈ ಬದಲಾವಣೆ ಮನುಷ್ಯನ ಹೆಚ್ಚುತ್ತಿರುವ ಸ್ವಾರ್ಥದಿಂದಾಗಿ,ತಾನೊಬ್ಬನೇ ಮೇಲಿರಬೇಕು ಉಳಿದವರೆಲ್ಲಾ ತನ್ನ ಕೆಳಗಿರಬೇಕು ಎಂದು ಹಲುಬುವುದರಿಂದಾಗಿ ಅನ್ನಿಸುತ್ತದೆ.ಆದರೆ ಕೊಂಚ ಇತಿಹಾಸವನ್ನು ತೆಗೆದು ನೋಡಿದರೆ ಮನುಷ್ಯನ ಈ ಗುಣ ಇಂದಿನದೇನಲ್ಲ.ಹಿಂದೆ ರಾಜ ಮಹಾರಾಜರು ಮಾಡುತ್ತಿದ್ದುದು ಇದನ್ನೇ. ಆದರೆ ಅಲ್ಲಿ ನೈತಿಕತೆಯೆಂಬುದೊಂದಿತ್ತು.ಜನ ಅದನ್ನು ಅಘೋಷಿತವಾಗಿ ಆಚರಣೆಯಲ್ಲಿಟ್ಟಿದ್ದರು.ಆದರೆ ಇಂದೇಕೆ ಹೀಗಾಗಿದೆ ಎನ್ನುವುದು ತಿಳಿಯುತ್ತಿಲ್ಲಾ.ಹತ್ತಾರು ವರ್ಷಗಳಲ್ಲಿ ಮನುಷ್ಯ ಹೀಗೇಕೆ ಆದನು ಎನ್ನುವುದೇ ಅರ್ಥವಾಗುತ್ತಿಲ್ಲಾ.ದುಡ್ಡೊಂದೇ ಇದಕ್ಕೆ ಕಾರಣ ಎಂದು ನಾನೊಪ್ಪಲಾರೆ.ಸಮಾಜ ಹೀಗೆ ದಿನದಿನವೂ ಹದಗೆಡುತ್ತಿರುವುದಾದರೂ ಏಕೆ?ಈ ಸಮಸ್ಯೆಗೆ ಯಾರ ಬಳಿಯಾದರು ಉತ್ತರವಿದೆಯೇ?
Comments
ಉ: ಆಲ್ ಈಸ್ ವೆಲ್!?!
In reply to ಉ: ಆಲ್ ಈಸ್ ವೆಲ್!?! by abdul
ಉ: ಆಲ್ ಈಸ್ ವೆಲ್!?!
In reply to ಉ: ಆಲ್ ಈಸ್ ವೆಲ್!?! by sujata
ಉ: ಆಲ್ ಈಸ್ ವೆಲ್!?!
In reply to ಉ: ಆಲ್ ಈಸ್ ವೆಲ್!?! by Rakesh Shetty
ಉ: ಆಲ್ ಈಸ್ ವೆಲ್!?!
In reply to ಉ: ಆಲ್ ಈಸ್ ವೆಲ್!?! by abdul
ಉ: ಆಲ್ ಈಸ್ ವೆಲ್!?!