ದಂತಕತೆ- ಇಮ್ಲೀ ಕಾ ಊತ..

ದಂತಕತೆ- ಇಮ್ಲೀ ಕಾ ಊತ..

ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ, ಒಬ್ಬ ಯುವ ವೈದ್ಯರು, ಒಂದು ಚಿಕಿತ್ಸಾಲಯ ಆರಂಭಿಸಿದರು.


ದೂರದ ಊರಲ್ಲಿದ್ದ ವೃದ್ಧ ವೈದ್ಯರು, ಈ ಯುವ ವೈದ್ಯರ ಬುದ್ಧಿವಂತಿಕೆ ಪರೀಕ್ಷಿಸಲು ತೀರ್ಮಾನಿಸಿದರು-ಒಬ್ಬ "ಆರೋಗ್ಯವಂತ" ಯುವಕನ ಕೈಯಲ್ಲಿ ಒಂದು ಪತ್ರ ಕೊಟ್ಟು, ಯುವ ವೈದ್ಯರಿಗೆ ತಲುಪಿಸಲು ಹೇಳಿದರು. ಆ ಊರಿಗೆ ಹೋಗುವಾಗ ರಾತ್ರಿ ಹೊತ್ತಲ್ಲಿ "ಹುಣಸೇಮರ"ದ ಬುಡದಲ್ಲಿ ಮಲಗಬೇಕೆಂದು ಹೇಳಿದರು.


ಆ ಯುವಕ ರಾತ್ರಿ ಹೊತ್ತು ಹುಣಸೇ ಮರದ ಬುಡದಲ್ಲಿ ನಿದ್ರಿಸಿ, ಮರುದಿನ ಯುವವೈದ್ಯರನ್ನು ಭೇಟಿಯಾಗಿ, ಪತ್ರವನ್ನು ಕೊಟ್ಟನು.


ಪತ್ರದಲ್ಲಿ " ಕೃಪೆ ಮಾಡಿ, ಈತನಿಗಿರುವ ರೋಗವನ್ನು ಔಷಧಿ ನೀಡದೇ, ಶೀಘ್ರವೇ ಗುಣಪಡಿಸಿ ಕಳುಹಿಸಿ" ಎಂದಿತ್ತು. ಯುವಕನ ಮೈ ಸ್ವಲ್ಪ ಊದಿರುವುದನ್ನು ಗಮನಿಸಿದ ಯುವವೈದ್ಯರು ಪ್ರಶ್ನಿಸಿದಾಗ, ಆತ ಹಿಂದಿನ ರಾತ್ರಿ ಹುಣಸೇಮರದಡಿ ಮಲಗಿದ್ದನ್ನು ತಿಳಿಸಿದನು.


ಯುವ ವೈದ್ಯರು ಆತನಿಗೆ ಯಾವುದೇ ಔಷಧಿ ನೀಡದೇ, ಮರು ಪ್ರಯಾಣ ಮಾಡುವಾಗ, ಹುಣಸೇ ಮರದಡಿ ಮಲಗದೇ, "_ _ _ _ _"ದ ಬುಡದಲ್ಲಿ ಮಲಗಲು ಹೇಳಿದರು.


ಮರಳಿ ಬಂದ ಯುವಕನ ದೇಹ ಊದಿಲ್ಲದಿರುವುದನ್ನು ಗಮನಿಸಿದ ವೃದ್ಧವೈದ್ಯರು, ಯುವವೈದ್ಯರ ಬುದ್ಧಿವಂತಿಕೆಯನ್ನು ಪ್ರಶಂಸಿಸಿದರು.


ಅಂದಹಾಗೆ ಆ ಯುವ ವೈದ್ಯರು ಹೇಳಿದ "_ _ _"ಮರ ಯಾವುದಿರಬಹುದು?


-ಇನ್ನಷ್ಟು ವಿವರಗಳು ಮುಂದಿನ ಕಂತಲ್ಲಿ..


ಸಂಗ್ರಹ-


-ಗಣೇಶ.


 


 

Rating
No votes yet

Comments