ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
ದಿನಾಂಕ ೭.೦೨.೨೦೧೦ ಭಾನುವಾರ ಬೆಳಿಗ್ಗೆ ೯.೦೦ ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಎದುರಿರುವ ಏ.ಡಿ.ಏ. ರಂಗಮಂದಿರದಲ್ಲಿ ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಸಮಾರಂಭ ಮತ್ತು ವೇದ ಗೋಷ್ಠಿಯು ನಡೆಯಲಿದೆ."ಎಲ್ಲರಿಗಾಗಿ ವೇದ" ಎಂಬ ಉದ್ಧೇಶಕ್ಕಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ವೇದಾಧ್ಯಾಯೀ ಸುಧಾಕರ ಶರ್ಮರು ಈ ಕಾರ್ಯಕ್ರಮಕ್ಕೆ ಸಂಪದಿಗರನ್ನು ಆಹ್ವಾನಿಸಿದ್ದಾರೆ. ವೇದದ ವಿಷಯದಲ್ಲಿ ಅಂತರ್ಜಾಲದಲ್ಲಿ ಪ್ರಚಾರ ಮಾಡುವ ಬಗ್ಗೆ ಒಂದು ಗೋಷ್ಠಿಯಲ್ಲಿ ಚರ್ಚೆಯನ್ನು ಮಾಡುವ ಉದ್ಧೇಶವಿದೆ. ಶರ್ಮರಿಗೆ ಪರಿಚಿತನಾದ ನನ್ನನ್ನು ಗೋಷ್ಠಿಗೆ ಒಬ್ಬನಾಗಿ ಆಹ್ವಾನಿಸಲಾಗಿದೆ. ಆದರೆ ವೇದದ ಬಗ್ಗೆ ಅಭಿರುಚಿಯುಳ್ಳ , ಗೋಷ್ಠಿಯಲ್ಲಿ ವಿಚಾರ ಮಂಡಿಸಬಲ್ಲ ಹಲವಾರು ಸಂಪದಿಗರು ಬೆಂಗಳೂರಿನಲ್ಲಿ ಮತ್ತು ರಾಜ್ಯಾದ್ಯಂತ ಇರುವುದರಲ್ಲಿ ಸಂದೇಹವಿಲ್ಲ. ಶರ್ಮರಿಗೆ ಸಂಪದಿಗರ ಪರಿಚಯ ವಿಲ್ಲವಾದ್ದರಿಂದ ಪ್ರಾತಿನಿಧಿಕವಾಗಿ ನನ್ನನ್ನು ಗೋಷ್ಠಿಗೆ ಆಹ್ವಾನಿಸಿದ್ದಾರೆ. ಆದರೆ ಅಂತರ್ಜಾಲದ ಬಗ್ಗೆ ಹೆಚ್ಚು ಮಾಹಿತಿಯುಳ್ಳ ಸಂಪದಿಗರು ಪಾಲ್ಗೊಂಡಲ್ಲಿ ಗೋಷ್ಠಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಸುಧಾಕರ ಶರ್ಮರ ಮತ್ತು ವ್ಯವಸ್ಥಾಪಕರ ಪರವಾಗಿ ಸಂಪದಿಗರೆಲ್ಲರಿಗೆ ಸಮಾರಂಭಕ್ಕೆ ತುಂಬುಹೃದಯದ ಆಹ್ವಾನವಿದೆ.ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ವೇದವು ಪ್ರಮುಖ ಪಾತ್ರವಹಿಸಬಲ್ಲದು. ವೇದದ ಬಗ್ಗೆ ಹೆಚ್ಚು ತಿಳಿಯಲು ಬನ್ನಿ.ಅಂತರ್ಜಾಲದಲ್ಲಿ ವೇದ ಪ್ರಚಾರಕ್ಕೆ ಕೈ ಜೋಡಿಸ ಬನ್ನಿ. ಸುಧಾಕರ ಶರ್ಮರ ಉಪನ್ಯಾಸಗಳ ಆಡಿಯೋ ಫೈಲ್ ಗಳನ್ನು ನ್ನು ಬಿನ್ ಫೈರ್ ಡಾಟ್ ಕಾಮ್ ನಲ್ಲಿ ಪೇರಿಸಿರುವ ಬಗ್ಗೆ ಸಂಪದದ ಕೆಳಗಿನ ಕೊಂಡಿಯಲ್ಲಿ ಮಾಹಿತಿ ಲಭ್ಯವಿದೆ.
http://sampada.net/blog/hariharapurasridhar/28/01/2010/23758
Comments
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
In reply to ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ by hariharapurasridhar
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
In reply to ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ by ananthesha nempu
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ
ಉ: ಕನ್ನಡ ವೇದ ಭಾಷ್ಯದ ಹದಿನೈದನೆಯ ಸಂಪುಟದ ಲೋಕಾರ್ಪಣೆ ಮತ್ತು ವೇದ ಗೋಷ್ಠಿ