ರಾಮಾಯಣದ ಸೇತುವೆ....
ವಸುಧೇಂದ್ರರ ಪುಸ್ತಕ "ಕೋತಿಗಳು ಸಾರ್ ಕೋತಿಗಳು" ಓದುತ್ತಿದ್ದೆ. ಪುಸ್ತಕದ ಮೊದಲ ಪುಟದಲ್ಲೇ ಬರೆದಿರುವಂತೆ ಇದು ಸುಲಲಿತ ಪ್ರಬಂಧಗಳ ಸಂಕಲನ. ಇದರಲ್ಲಿಯ ಒಂದೊಂದು ಪ್ರಬಂಧಗಳೂ ಅತ್ಯಂತ ಆಪ್ತವಾಗಿ ಬರೆಯಲ್ಪಟ್ಟಿವೆ. ಎಲ್ಲಾ ವಿಷಯಗಳಿಗೂ ಒಂದು ಹೊಸ ದೃಷ್ಟಿಕೋನವಿದೆಯೆಂದು ವಸುಧೇಂದ್ರರು ಸರಳವಾಗಿ ಹೇಳುತ್ತಾರೆ. "ಲಂಕೆಗೆ ಸೇತುವೆ ಕಟ್ಟಿದ್ದು ಯಾರು" ಎಂಬ ಲೇಖನ ನನ್ನನ್ನು ನಿಜಕ್ಕೂ ಚಿಂತೆಗೆ ಹಚ್ಚಿತು. ನಾನ್ಯಾವತ್ತೂ ಈ ವಸ್ತು ವಿಷಯವನ್ನು ಬೇರೆಯ ದೃಷ್ಟಿಕೋನದಿಂದ ನೋಡಿರಲೇ ಇಲ್ಲ. ಇಲ್ಲಿ ಲೇಖಕರು ಲಂಕೆಗೆ ಸೇತುವೆಯನ್ನು ರಾವಣನು ಕಟ್ಟಿರಬಹುದೆಂಬುದು ಹೆಚ್ಚು ತಾರ್ಕಿಕ ಎನ್ನುತ್ತಾರೆ. ಅವರ ವಿಶ್ಲೇಷಣೆ ಎಷ್ಟು ಸರಿಯಾಗಿದೆ ಎಂದು ನನಗನ್ನಿಸಿತು. ಅವಶ್ಯಕತೆಗೆ ಅನುಗುಣವಾಗಿ ಯೋಚಿಸಿದರೆ, ಸೇತುವೆ ರಾಮನಿಗಿಂತ ಹೆಚ್ಚಾಗಿ ರಾವಣನಿಗೇ, ಸೀತೆಯನ್ನು ಹೊತ್ತು ತರುವ ಬಹು ಮೊದಲೇ ಬೇಕಿತ್ತು. ಸೀತೆಯ ಸ್ವಯಂವರಕ್ಕೆ ರಾವಣ ಬಂದಾಗ ಅವನ ಪರಿವಾರ, ಸರಕು - ಸಾಮಗ್ರಿಗಳೊಂದಿಗೆ ಸಮುದ್ರ ಹೇಗೆ ದಾಟಿದ್ದ ಸೇತುವೆಯಿಲ್ಲದೆ ಎಂಬುದೇ ದೊಡ್ಡ ತರ್ಕವಲ್ಲವೇ?........
ಕಪಿ ಸೈನ್ಯ ರಾಮನ ಉಸ್ತುವಾರಿಯಲ್ಲಿ ಸೇತುವೆ ಕಟ್ಟುತ್ತಿದ್ದಾಗ, ರಾವಣ ಏನು ಮಾಡುತ್ತಿದ್ದ? ಸೇತುವೆ ನಿರ್ಮಿಸಿ, ರಾಮ ಸೈನ್ಯದ ಸಮೇತ ಲಂಕೆಗೆ ಬರುವ ಮೊದಲೇ ರಾವಣ ರಾಮನ ಸೈನ್ಯದ ಮೇಲೆ ಯುದ್ಧಕ್ಕೆ ಬರಬಹುದಿತ್ತಲ್ಲವೇ ? ಹೀಗೆ ಅನೇಕ ಹೊಸ ಪ್ರಶ್ನೆಗಳನ್ನು ಈ ಒಂದು ಬರಹ ನನ್ನಲ್ಲಿ ಹುಟ್ಟು ಹಾಕಿದೆ. ನಾನೂ ಯಾವುದೊ ಒಂದು ಲೇಖನದಲ್ಲಿ (ಎಲ್ಲಿ ಮತ್ತು ಯಾವುದೆಂದು ನೆನಪಿಲ್ಲ) ಓದಿದ್ದೆ... ಮಹಾ ಬ್ರಾಹ್ಮಣನಾದ ರಾವಣ ರಾಮನ ಕೈಯಿಂದ ಮೋಕ್ಷ ಪಡೆಯುವುದಕ್ಕೋಸ್ಕರವೇ ಸೀತೆಯನ್ನು ಹೊತ್ತು ತರುತ್ತಾನೆ, ಯಾವುದೇ ವಾಂಛೆಯಿಂದ ಅಲ್ಲವೆಂದು.... ನಿಜವಿರಬಹುದೇ?....... ನೀವೇನಂತೀರಿ?..........
Comments
ಉ: ರಾಮಾಯಣದ ಸೇತುವೆ....
In reply to ಉ: ರಾಮಾಯಣದ ಸೇತುವೆ.... by thesalimath
ಉ: ರಾಮಾಯಣದ ಸೇತುವೆ....
In reply to ಉ: ರಾಮಾಯಣದ ಸೇತುವೆ.... by praveena saya
ಉ: ರಾಮಾಯಣದ ಸೇತುವೆ....
In reply to ಉ: ರಾಮಾಯಣದ ಸೇತುವೆ.... by Ananatha
ಉ: ರಾಮಾಯಣದ ಸೇತುವೆ....
ಉ: ರಾಮಾಯಣದ ಸೇತುವೆ....