ರಾಷ್ಟ್ರಪ್ರಶಸ್ತಿ ವಿಜೇತ “ವಿಮುಕ್ತಿ” ಚಿತ್ರಪ್ರದರ್ಶನ ಮತ್ತು ಸಂವಾದ
ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಫೆಬ್ರವರಿ ೧೪ ರಂದು ತನ್ನ ‘ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ’ ಕಾರ್ಯಕ್ರಮದಡಿಯಲ್ಲಿ ಪಿ.ಶೇಷಾದ್ರಿಯವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ “ವಿಮುಕ್ತಿ” ಯ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
ಸೃಷ್ಟಿ ವೆಂಚರ್ಸ್ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಕಾಳಜಿಯ ವಿವಿಧ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಹಲವು ಕ್ಷೇತ್ರಗಳ ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡಿ ಬೆಳೆಸುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸುವ, ಅರಿವು ಮೂಡಿಸುವ ಮತ್ತು ಆರೈಕೆ ಮಾಡುವ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.‘ಸಮರ್ಪಕ ಸಿನೆಮಾ’-ಇದು ಸೃಷ್ಟಿ ವೆಂಚರ್ಸ್‌ನ ಸದಭಿರುಚಿಯ ಮತ್ತು ಪ್ರಯೋಗಶೀಲ ಚಿತ್ರಗಳ ಪ್ರದರ್ಶನ ಹಾಗೂ ಸಂವಾದದ ಸರಣಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ಈ ಬಾರಿ ‘ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ’ ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ ಪಿ.ಶೇಷಾದ್ರಿಯವರ ‘ವಿಮುಕ್ತಿ’ ಚಿತ್ರದ ಪ್ರದರ್ಶನ ಹಾಗೂ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ನಿರ್ದೇಶಕ ಪಿ.ಶೇಷಾದ್ರಿಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ.ಶೇಷಾದ್ರಿ, ಹಿರಿಯ ನಟ ರಾಮಕೃಷ್ಣ , ಹಿರಿಯ ಚಿತ್ರವಿಮರ್ಶಕ ಕನ್ನಡಸಾಹಿತ್ಯ.ಕಾಂ ನ ಶ್ರೀ ಶೇಖರಪೂರ್ಣ, ಚಿತ್ರದ ಕಲಾವಿದರು ಹಾಗೂ ತಂತ್ರಜ್ಞ ರು ಭಾಗವಹಿಸಲಿದ್ದಾರೆ.
ಪಿ.ಶೇಷಾದ್ರಿ : ನಿರ್ದೇಶಿಸಿದ ಐದೂ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಖ್ಯಾತಿಯನ್ನು ವಿಸ್ತರಿಸಿದ ಹೆಮ್ಮೆಯ ನಿರ್ದೇಶಕ. ‘ಮುನ್ನುಡಿ’, ‘ಅತಿಥಿ’, ‘ಬೇರು’, ‘ತುತ್ತೂರಿ’, ‘ವಿಮುಕ್ತಿ’ ಇವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು. ಈ ಚಿತ್ರಗಳ ಕುರಿತ ವಿವರಗಳು http://www.psheshadri.com/ ನಲ್ಲಿ ಲಭ್ಯ.
‘ವಿಮುಕ್ತಿ’- ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ‘ನವ್ಯ ಕ್ರಿಯೇಶನ್ಸ್’ ನ ಮಿತ್ರರ ತಂಡದ ಹೊಸ ಪ್ರಯೋಗ. ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ತೀರಾ ಭಿನ್ನ ನೆಲೆಯೊಂದರ ಮೂಲಕ ಕಂಡರಿಸುವ ಪ್ರಯತ್ನ. ‘ವಿಮುಕ್ತಿ’ ಯ ಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿರುವವರು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ. ಎಸ್.ರಾಮಚಂದ್ರ ಐತಾಳ್ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತ, ಕೆಂಪರಾಜ್ ಸಂಕಲನ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ಹಿರಿಯ ನಟ ರಾಮಕೃಷ್ಣ, ಭಾವನಾ, ಅರವಿಂದ್, ಸಾನಿಯಾ ಮುಂತಾದವರಿದ್ದಾರೆ. ‘ವಿಮುಕ್ತಿ’ ೨೦೦೮ ನೇ ಸಾಲಿನ ‘ಅತ್ಯುತ್ತಮ ಪ್ರಾದೇಶಿಕ ಚಿತ್ರ’ ವೆಂಬ ಗೌರವಕ್ಕೆ ಪಾತ್ರವಾಗಿದೆ.
-----------------------------------------------------------------------------
ಪಾಸ್ ಒಂದಕ್ಕೆ 100ರೂಗಳು
ಕಾರ್ಯಕ್ರಮದ ಪಾಸ್ ಮತ್ತಿತರ ವಿವರಗಳಿಗೆ ಸಂಪರ್ಕಿಸಿ: ಸೃಷ್ಟಿ ವೆಂಚರ್ಸ್, ನಂ.೮೧, ೧ ನೇ ಮಹಡಿ, (ಪುಳಿಯೋಗರೆ ಪಾಯಿಂಟ್ ಮೇಲೆ)E.A.T. ರಸ್ತೆ, ಎನ್.ಆರ್.ಕಾಲೋನಿ, ಬಸವನಗುಡಿ, ಬೆಂಗಳೂರು-೦೪.
ಮೊಬೈಲ್: 9448171069, 9900439930
ಪಾಸ್ ಒಂದಕ್ಕೆ 100ರೂಗಳು
ಕಾರ್ಯಕ್ರಮದ ಪಾಸ್ ಮತ್ತಿತರ ವಿವರಗಳಿಗೆ ಸಂಪರ್ಕಿಸಿ: ಸೃಷ್ಟಿ ವೆಂಚರ್ಸ್, ನಂ.೮೧, ೧ ನೇ ಮಹಡಿ, (ಪುಳಿಯೋಗರೆ ಪಾಯಿಂಟ್ ಮೇಲೆ)E.A.T. ರಸ್ತೆ, ಎನ್.ಆರ್.ಕಾಲೋನಿ, ಬಸವನಗುಡಿ, ಬೆಂಗಳೂರು-೦೪.
ಮೊಬೈಲ್: 9448171069, 9900439930
ಮಿಂಚಂಚೆ :sristiventures@gmail.com
Rating
Comments
ಉ: ರಾಷ್ಟ್ರಪ್ರಶಸ್ತಿ ವಿಜೇತ “ವಿಮುಕ್ತಿ” ಚಿತ್ರಪ್ರದರ್ಶನ ಮತ್ತು ಸಂವಾದ