"ego" ಮೂಲ ಗೊಬ್ಬರ!!!
ಕಳೆದ ವಾರಾಂತ್ಯದಲ್ಲಿ ನನ್ನ ಸಹೋದರ (ಪೃಥ್ವಿರಾಜ್) ಮತ್ತು ನನ್ನ ನಡುವೆ ನಡೆದ ಸಂದೇಶಗಳ ವಿನಿಮಯ:
ಸಹೋದರನಿಂದ:
ಅನ್ಯ ರಾತ್ರಿಗಳಂತಲ್ಲ ಇಂದಿನ ರಾತ್ರಿ, ದೀರ್ಘ ಸುಂದರ ರಾತ್ರಿ ಶಿವರಾತ್ರಿ
ನಂಬಿದವರಿಗೆ ಅನುಗ್ರಹದ ಖಾತ್ರಿ, ನಂಬದವರಿಗೆ, ಹಗಲೂ ರಾತ್ರಿ!!!
ನನ್ನಿಂದ:
ಪ್ರತೀ ರಾತ್ರಿಯೂ ಶಿವನದೇ ರಾತ್ರಿ ಎಂದು ನಂಬಿ ಬಾಳುವವನಿಗೆ ಅನುಗ್ರಹ ಖಾತ್ರಿ
ಈ ರಾತ್ರಿ ಕಳೆದ ಮೇಲೆ ಆ ಶಿವನ ಮರೆಯುವವನಿಗೆ ಪ್ರತೀ ದಿನವೂ ಕರಾಳ ರಾತ್ರಿ!!!
ನಂಬುವವರ ಮತ್ತು ನಂಬದೇ ಇರುವವರ ನಡುವೆ ವಾದವೇ ಬೇಕಾಗಿಲ್ಲ ಜಾಸ್ತಿ
ಮನುಜರಿಗೆ ಅವರವರ ನಂಬಿಕೆಗಳ ಮೇಲೇ ಇರುವ ಶ್ರದ್ಧೆಯೇ ನಿಜವಾದ ಆಸ್ತಿ!!!
ಸಹೋದರನಿಂದ:
ಮನುಷ್ಯನ ಎಲ್ಲಾ ಪಾಪ ಕರ್ಮಗಳಿಗೆ ಆತನಲ್ಲಿರುವ "ego" ಮೂಲ ಗೊಬ್ಬರ!!!
ನನ್ನಿಂದ:
ಮನುಷ್ಯ ತನ್ನ ಪಾಪಕರ್ಮಗಳಿಂದಲೇ ಸದಾ ಕಾಲ ಮಾಡುತ್ತಾ ಇರುತ್ತಾನೆ ಇಲ್ಲಿ ಅಬ್ಬರ
ಏಕೆಂದರೆ ಆತ ತನ್ನೊಳಗಿನ ಷಡ್ವೈರಿಗಳನ್ನು ಬೆಳೆಸುತ್ತಾ ಇರುತ್ತಾನೆ ಸದಾ ನೀಡಿ ಗೊಬ್ಬರ!!!
- ಆಸು ಹೆಗ್ಡೆ.
Rating
Comments
ಉ: "ego" ಮೂಲ ಗೊಬ್ಬರ!!!
In reply to ಉ: "ego" ಮೂಲ ಗೊಬ್ಬರ!!! by thesalimath
ಉ: "ego" ಮೂಲ ಗೊಬ್ಬರ!!!