ಜಸ್ಟ್ ಇಂಚ್ ಇನ್ಚ್ನಲ್ಲಿ!
ಒಂದೊಳ್ಳೆ 'ವಾಹನ'(ನಿಮ್ಮಿಷ್ಟ ಬಂದ ಬೈಕು,ಕಾರು ಯಾವ್ದೋ ಒಂದು) ಅದಕ್ಕಿಂತ ಒಳ್ಳೆ 'ರಸ್ತೆ' (ಬೇಕಿದ್ರೆ ಕಣ್ಣಿರ ಮೇಲೆದ್ದು ನಿಂತಿರುವ ನೈಸ್ ರಸ್ತೆ ಅನ್ಕೊಳ್ಳಿ) ಎರಡು ಇದ್ದು, ಆ ಕಾರನ್ನ ಒಳ್ಳೆ ಡ್ರೈವರ್ ಅಂತ ಹೆಸರು ತಗೊಂಡವ್ನು 'L' ಬೋರ್ಡ್ ತರ ಓಡಿಸಿದ್ರೆ ಹೇಗಿರುತ್ತೆ?.ಈ ಅನುಭವ ನಿಮಗೆ ಸಿಗಬೇಕು ಅಂದ್ರೆ ಸುದೀಪ್ ಅವರ 'ಜಸ್ಟ್ ಮಾತ್ ಮಾತಲ್ಲಿ' ಸಿನೆಮ ನೋಡ್ಬೇಕು.
ವಿಮಾನದಿಂದ ಶುರುವಾಗೋ ಕಥೆ ರೈಲು,ಬಸ್ಸು,ಕಾರು,ಬೈಕಿನಲ್ಲಿ ಸಾಗಿ ಕಡೆಗೆ ಸೈಕಲ್ಲಿನ ಸ್ಪೀಡು ಕಡೆ ಕಡೆಯಲ್ಲಿ ಸ್ಲೋ ಮೋಶನ್ ಅಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತದೆ.ಮೊದಲರ್ಧ ಇದ್ದುದ್ದರಲ್ಲಿ ಬೇಗ ಓಡುತ್ತೆ.ಆದ್ರೆ ಅಲ್ಲಿ ರಾಜೇಶ್ ವೈರಸ್ ತರ ಮಧ್ಯೆ ಮಧ್ಯೆ ಪ್ರಶ್ನೆ ಕೇಳಿ ತಲೆ ತಿಂತಾರೆ. ಸಿನೆಮಾದ ಒಂದು ಸನ್ನಿವೇಶದಲ್ಲಿ ರಾಜೇಶ್, ಸುದೀಪನ ಕೇಳ್ತಾರೆ 'ಆಮೇಲೇನಾಯ್ತು ನೀವು ಎದ್ದು ಹೋದ್ರ?' ಅಂತ. ಅಷ್ಟೊತ್ತಿಗಾಗಲೇ ಚಿತ್ರದ ವೇಗ ನೋಡಿ ಗಾಬರಿಯಾಗಿದ್ದ ಗೆಳೆಯ ಹೇಳಿದ 'ಅವ್ನು ಹೋಗೋದ್ ಇರ್ಲಿ, ಈಗ ಇವ್ನು (ರಾಜೇಶ್!) ಎದ್ದು ಹೋಗಲಿಲ್ಲ ಅಂದ್ರೆ ನಾವು ಇಲ್ಲಿಂದ ಹೊರಗ ಹೋಗೋದ್ ಒಳ್ಳೆ ನೋಡಪ್ಪ!' :)
'ಸೈಕೋ' ಚಿತ್ರದ ನಂತರ ಕಾಣೆಯಾಗಿದ್ದ ರಘು ದೀಕ್ಷಿತ್ ಮತ್ತೆ ಜಸ್ಟ್ ಮಾತ್ ಮಾತಲ್ಲೇ ಗುಡ್ ಅನ್ನುವಂತ ಸಂಗೀತ ನೀಡಿದ್ದಾರೆ.ಹಾಡುಗಳು ಚೆನ್ನಿವೆ.'ಮರುಭೂಮಿಯಲ್ಲಿ' ಅನ್ನೋ ಹಾಡನ್ನ ರಾಜೇಶ್ ಅವರತ್ರ ಡಿಫರೆಂಟ್ ಆಗಿ ಹಾಡಿಸಿ ಕನ್ನಡದ ಹುಡುಗರು ಹೀಗೂ ಹಾಡಬಲ್ಲರು ಅಂತ ತೋರಿಸಿ ಕೊಟ್ಟಿದ್ದಾರೆ.ಪಟ ಪಟ ಮಾತಾಡುವ ರಮ್ಯ,ಸೈಲೆಂಟ್ ಸುದೀಪ್ ಇಬ್ಬರೂ ಇಷ್ಟವಾಗುತ್ತಾರೆ.
'ಎಸ್/ನೋ' ಪದಗಳ ಸುತ್ತ ತಿರುಗುವ ಚಿತ್ರ ಕಥೆ ಚೆನ್ನಾಗಿದೆ.ಆದರೆ ಕಥೆಯನ್ನ 'ಜಸ್ಟ್ ಇಂಚ್ ಇನ್ಚ್ನಲ್ಲಿ' ಎಳೆಯದೆ, ಹೇಳಬೇಕಾದದ್ದನ್ನು ಬೇಗ ಹೇಳಿ ಮುಗಿಸಿದ್ದರೆ ಚಿತ್ರ ಚಂದ ಮೂಡಿ ಬರುತಿತ್ತು ಅನ್ನಿಸಿತು.ಅದ್ಯಾಕೋ ಒಂದೊಳ್ಳೆ ಕಥೆ ಮನಸಿನಲ್ಲಿ ಉಳಿಯುವುದಿಲ್ಲ ಮತ್ತದನ್ನ ತೆರೆಮೇಲೆ ತೋರಿಸಿ ಪ್ರೇಕ್ಷಕನ ಮನದಲ್ಲಿ ಉಳಿಸುವಲ್ಲಿ ಸುದೀಪ್ ಪೂರ್ಣ ಸಫಲರಾಗಿಲ್ಲ
ಯಥಾ ಪ್ರಕಾರ ಯಾಮಾರೋ ಹಾಗೆ ಈ ಬಾರಿನು ವಿಮರ್ಶೆಗಳನ್ನ ಓದಿ ಕೊಂಡು ಹೋಗಿ ಯಾಮಾರಿದೆ.ಒಂದು ವಿಮರ್ಶೆಯಲ್ಲಿ ಚಿತ್ರ ಮುಗಿಸಿ ಹೊರ ಬರುವಷ್ಟರಲ್ಲಿ 'ಮುಂಗಾರು ಮಳೆ' ಫೀಲಿಂಗ್ ಬರುತ್ತೆ ಅಂತ ಬರೆದಿದ್ರು!ಇನ್ನೊಂದು ಕಡೆ ೪ ನಕ್ಷತ್ರ ಕೊಟ್ಟಿದ್ರು!,ಮತ್ತೊಂದು ಕಡೆ ಸುದೀಪ್ ನಿರ್ದೇಶನ ಸಕ್ಕತ್ತ್ ಅಂದಿದ್ರು! ವಿಭಿನ್ನ ಪ್ರಯೋಗವೇನೋ ನಿಜ. ಆದರೆ ಇದ್ಯಾವ ರೀತಿಯ ವಿಮರ್ಶೆಗಳು?
Comments
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
In reply to ಉ: ಜಸ್ಟ್ ಇಂಚ್ ಇನ್ಚ್ನಲ್ಲಿ! by VeerendraC
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
In reply to ಉ: ಜಸ್ಟ್ ಇಂಚ್ ಇನ್ಚ್ನಲ್ಲಿ! by thesalimath
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
In reply to ಉ: ಜಸ್ಟ್ ಇಂಚ್ ಇನ್ಚ್ನಲ್ಲಿ! by vinayak.mdesai
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
In reply to ಉ: ಜಸ್ಟ್ ಇಂಚ್ ಇನ್ಚ್ನಲ್ಲಿ! by manjunath s reddy
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
In reply to ಉ: ಜಸ್ಟ್ ಇಂಚ್ ಇನ್ಚ್ನಲ್ಲಿ! by roshan_netla
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!
In reply to ಉ: ಜಸ್ಟ್ ಇಂಚ್ ಇನ್ಚ್ನಲ್ಲಿ! by virakannadia
ಉ: ಜಸ್ಟ್ ಇಂಚ್ ಇನ್ಚ್ನಲ್ಲಿ!