ಮದುವೆಯ ನೆನಪು ಉಳಿಯಿತು.....

ಮದುವೆಯ ನೆನಪು ಉಳಿಯಿತು.....

ಸ್ನೇಹಿತರೊಬ್ಬರು ಕಳೆದ ವಾರ ತಮ್ಮ ಅಣ್ಣನ ಮಗಳ ಮದುವೆಯ ಫೋಟೊ ತೆಗೆದಿದ್ದರು. ಮೊನ್ನೆ ಅದೇನೋ ಮಾಡುತ್ತಿರುವಾಗ ಎಲ್ಲ ಫೋಟೊಗಳು ಮೆಮೊರಿ ಕಾರ್ಡ್ ನಿಂದ ಅಳಿಸಿ ಹೋಯ್ತಂತೆ. ಮರುದಿನ ಅವರ ಮನೆಗೆ ನಾನು ಹೋಗಿದ್ದಾಗ, ಅವರು ಹೇಳಿದ್ರು "ಮಾರಾಯ ಮದುವೇದು ಒಳ್ಳೋಳ್ಳೆ ಫೋಟೊಸ್ ಅಳಿಸಿ ಹೋತು...ಹ್ಯಂಗಾರು ಅದನ್ನ ರೆಕವರಿ ಮಾಡಕ್ಕೆ ಬತ್ತ" ಅಂದ್ರು. ಸರಿ, ರಿಕವರಿ ಮಾಡಬಹುದು ಅಂತ ಹೇಳಿ ಆ ಮೆಮೊರಿ ಕಾರ್ಡ್ ತೆಗೆದುಕೊಂಡು ಸೀದಾ ನಮ್ಮ ದೇವರು ಭಟ್ಟರ Institute ಗೆ ಬಂದೆ. ಅವರ ಒಂದು ಸಿಸ್ಟಮ್ ನಲ್ಲೆ ಮೊದಲೆ ಉಬಂಟು ಅನುಸ್ಥಾಪನೆ ಆಗಿತ್ತು. ಹಾಗೆ ಉಬಂಟು ರೆಪೊದಿಂದ "testdisk" ಅನ್ನೊ ಮುಕ್ತತಂತ್ರಂಶವನ್ನು ಅನುಸ್ಥಾಪನೆ ಮಾಡಿದೆ. ನಂತರ ಟರ್ಮಿನಲ್ (command prompt)ನಲ್ಲಿ testdisk ಸ್ಟಾರ್ಟ್ ಮಾಡಿ ರೆಕವರಿ ಮಾಡ್ಬೇಕಾದ ಮೆಮೊರಿಕರ್ಡ್ ಸೆಲೆಕ್ಟ್ ಮಾಡಿ undelete option ಎಂಟರ್ ಮಾಡಿ ನಾನು ಊಟಕ್ಕೆ ಹೊರಟೆ. ನಂತರ ಬಂದು ನೊಡಿದ್ರೆ ಎಲ್ಲಾ ಎಂಟುನೂರು ಫೋಟೊಗಳು (1.6 GB) ಹೋಮ್ ಡೈರೆಕ್ಟ್ರಿಗೆ ಕಾಪಿ ಆಗಿದ್ವು. ಮತ್ತೆ ಎಲ್ಲಾ ಫೋಟೊಗಳನ್ನು ಮೆಮೊರಿಕಾರ್ಡಿಗೆ ಕಾಪಿ ಮಾಡಿ ಅವರಿಗೆ ಕೊಟ್ಟಾಗ ಅವರು "ಅಂತೂ ಮದುವೆ ನೆನಪು ಉಳೀತು ಮಾರಾಯ" ಅಂದ್ರು. ಅವರ ಮುಖದಲ್ಲಿನ ಸಂತೋಷಕಂಡು ನಂಗೂ ಖುಷಿ ಆಯ್ತು. ಅಲ್ಲೇ ಮುಕ್ತತಂತ್ರಂಶದ ಬಗ್ಗೆ ಮತ್ತೊಂದಿಷ್ಟನ್ನ ಹೇಳಿ ಈಚೆ ಬಂದೆ. ಹಾಗೆ ದೇವರುಭಟ್ಟರಿಗೆ ಮತ್ತೊಂದು ಧನ್ಯವಾದ ಹೇಳಿ ಮನೆಗೆ ಬಂದೆ.

ನಿಮಗೂ ಇದೆ ರೀತಿ ಏನಾದ್ರು ರಿಕವರಿ ಮಾಡ್ಬೇಕಿದ್ದಾಗ ಈ testdisk ನ ಬಳಸಿ ನೋಡಿ.

ವೀಕೀಪೀಡಿಯಾ ಪೇಜ್: http://en.wikipedia.org/wiki/TestDisk.

ಡೌನ್ಲೋಡ್ ಮಾಡೊದಕ್ಕೆ: http://www.cgsecurity.org/wiki/TestDisk_Download.

Rating
No votes yet

Comments