ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!?

ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!?

ಕಾಡಿದ ಕಣ್ಣುಗಳು
ಕಾಣದಂತೆ ಕಾಣೆಯಾಗಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ನಿಮಿಷದ ನೋಟಗಳಲ್ಲಿ
ಕಂಗಳ ಮಾತುಗಳಲ್ಲಿ
ಹರುಷದ ಗೀತೆಗಳಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ಗುಂಡಿಗೆಯ ಗೂಡಿನಲ್ಲಿ
ಗುಂಡನೆಯ ಭೂಮಿಯಲ್ಲಿ
ಗೆಜ್ಜೆನಾದದ ಸದ್ದಿನಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ನೀರಿನಲ್ಲಿ ಬರೆದ ಚಿತ್ರಗಳಲ್ಲಿ
ಗಾಳಿಯ ಮೇಲಿನ ಗೋಪುರಗಳಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ಮಿಂಚಿ ಮರೆಯಾದ ಆ ಕಾಲದಲ್ಲಿ
ನೀ ನಾಚಿ ನಿಂತು ನಕ್ಕ ನೆನಪಲ್ಲಿ
ಮನಸಿನ ಪುಟಗಳು
ತುಂಬಿವೆ ಖಾಲಿಯಾಗಿ!?

ಮನಸಿನ ಈ ಖಾಲಿ ಪುಟಗಳಲ್ಲಿ
ಹಾಕಬೇಕಿದೆ ನೀ ಒಲವ ರಂಗವಲ್ಲಿ
ರಂಗವಲ್ಲಿಯ ರಂಗಿನ ಗುಂಗಲ್ಲಿ
ತುಂಬಬೇಕಿದೆ ಗೆಳತಿ
ಮನಸಿನ ಪುಟಗಳು ಖಾಲಿಯಾಗಿ!?

Rating
No votes yet

Comments