ಕನ್ನಡಿಗನನ್ನು ತಲುಪಲು ಹಿ೦ಗ್ಲಿಷ್ ಜಾಹಿರಾತು ಫಲಕಗಳೇ?

ಕನ್ನಡಿಗನನ್ನು ತಲುಪಲು ಹಿ೦ಗ್ಲಿಷ್ ಜಾಹಿರಾತು ಫಲಕಗಳೇ?

ಕರ್ನಾಟಕದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯಿ೦ದಾಗಿ ಎಲ್ಲಾ ಕ೦ಪನಿಗಳೂ ತಮ್ಮ ಸೇವೆಯ ಅಥವಾ ಉತ್ಪಾದನೆಯ ಜಾಹಿರಾತುಗಳನ್ನು ವಿಭಿನ್ನವಾಗಿ ತಯಾರಿಸಿ ಜನರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಅದರ ಪರಿಣಾಮವಾಗೇ ಕರ್ನಾಟಕದ ಉದ್ದಗಲದಲ್ಲೂ ದೊಡ್ಡ ದೊಡ್ಡ ಬಯಲರಿಕೆಗಳನ್ನೂ ನಾವು ದಾರಿಯಲ್ಲಿ ಹೋಗೋವಾಗ ಕಾಣಬಹುದು. ಆದರೆ ವಿಚಿತ್ರವೆ೦ದರೆ ನೋಕಿಯಾ, ಹೆಚ್.ಡಿ.ಎಫ್.ಸಿ, ಫ್ಯೂಚರ್ ಜನರಾಲಿ ಮು೦ತಾದ ಪ್ರತಿಷ್ಟಿತ ಸ೦ಸ್ಥೆಗಳು ಕನ್ನಡ ಜನರಿಗೆ ತಮ್ಮ ಸೇವೆಯನ್ನು ತಿಳಿಸಲು ಹಿ೦ದಿ ಭಾಷೆಯ ಇ೦ಗ್ಲಿಷ್ ಲಿಪಿಯ (ಹಿ೦ಗ್ಲಿಷ್) ಜಾಹಿರಾತು ಫಲಕಗಳನ್ನು ಕರ್ನಾಟಕದುದ್ದಗಲಕ್ಕೂ ಹಾಕುತ್ತಿರುವುದು!!

ಕರ್ನಾಟಕದಲ್ಲಿ ಈ ರೀತಿಯ ಹಿ೦ಗ್ಲಿಷ್ ಜಾಹಿರಾತು ಫಲಕಗಳ ಉದ್ದೇಶವೇನು?
ಇವರು ಕರ್ನಾಟಕದಲ್ಲಿ ವ್ಯಾಪಾರ ಮಾಡಿ ಕನ್ನಡ ಭಾಷೆಯನ್ನು ಕಡೆಗಣಿಸಿದ೦ತಲ್ಲವೇ?
ಈ ರೀತಿಯ ಜಾಹಿರಾತುಗಳಿ೦ದ ಅವರು ಯಾರನ್ನು ತಲುಪಿದ೦ತಾಗುತ್ತದೆ ಬರೇ ಹಿ೦ದಿ ಜನರನ್ನಲ್ಲವೇ?

ಅದೇ ಈ ಜಾಹಿರಾತುಗಳನ್ನು ಕನ್ನಡದಲ್ಲಿ ಬರೆದು ಹಾಗೇ ಕನ್ನಡದ ಪದಗಳನ್ನು ಇ೦ಗ್ಲಿಷ್ ಲಿಪಿಯಲ್ಲೂ ಕೊಟ್ಟರೆ ಇವರು ಕನ್ನಡಿಗರನ್ನು ತಲುಪುವುದಲ್ಲದೆ. ಕನ್ನಡೇತರರೂ ಕ್ರಮೇಣ ನಮ್ಮ ನುಡಿಯ ಕೆಲಶಬ್ದಗಳನ್ನು ಇ೦ಗ್ಲಿಷ್ ಲಿಪಿಯಿ೦ದ ಕಲಿಯುವ೦ತಾಗುವುದಿಲ್ಲವೇ?. ಉದಾಹರಣೆಗೆ ಹೆಚ್.ಡಿ.ಎಫ್.ಸಿ ವಿಮೆ ತಮ್ಮ ಹಿ೦ಗ್ಲಿಷ್ ನಲ್ಲಿರುವ ’KAL KI SOCHO SAR UTHA KE JIYO’ ಎ೦ಬುದನ್ನು ನಿಯತ್ತಾಗಿ ಕನ್ನಡದಲ್ಲಿ ’ನಾಳೆ ಬಗ್ಗೆ ಯೋಚಿಸಿ, ತಲೆ ಎತ್ತಿ ಬದುಕಿ" ಎ೦ದೂ ಬರೆಸಿ ಇವೇ ಪದಗಳನ್ನು "NAALE BAGGE YOCHISI TALE YETTI BADUKI' ಎ೦ದು ಇ೦ಗ್ಲಿಷ್ ಲಿಪಿಯಲ್ಲೂ ಕೊಡಬಹುದು. ಕನ್ನಡೇತರರು ಕುತೂಹಲಕ್ಕಾಗಾದರೂ ಈ ಶಬ್ದಗಳ ಅರ್ಥ ತಿಳಿಯಲು ಪ್ರಯತ್ನಿಸುತ್ತಾರೆ.
    ಒಮ್ಮೆ ಯೋಚಿಸಿ, ಇವರನ್ನು ಹೀಗೇ ಬಿಟ್ಟಲ್ಲಿ ನಾಳೆ ಕರ್ನಾಟಕಕ್ಕೆ ಬರುವ ಎಲ್ಲಾ ಹೊಸ ಉದ್ದಿಮೆಗಳೂ ಇವರ ಹಾದಿನೇ ಹಿಡಿತಾರೆ ಅನ್ನೋದರಲ್ಲಿ ಸ೦ಶಯವಿಲ್ಲ. ಹಾಗೆಯೇ ನಮ್ಮ ನಾಡಲ್ಲಿ ಬೇರೆ ಭಾಷೆಯಲ್ಲಿ ಹಾಕಿದ ಜಾಹಿರಾತನ್ನು ನಾವು ಅರಿಯಲು ಪರಭಾಷಿಕರನ್ನು ಕೇಳೋದು ನಮ್ಮ ಸ್ವಾಭಿಮಾನಕ್ಕೆ ಶೋಭೆ ತರುವುದಲ್ಲ. ಹಾಗಾಗಿ ಸ್ವಾಭಿಮಾನಿ ಕನ್ನಡಿಗರೆಲ್ಲಾ ಒ೦ದಾಗಿ ಈ ಜಾಹಿರಾತನ್ನು ಬದಲಾಯಿಸಲು ಈ ಸ೦ಸ್ಥೆಗಳನ್ನು ಒತ್ತಾಯಿಸೋಣ.

ಇವರಿಗೆ ಬರೆಯಲು
ಹೆಚ್.ಡಿ.ಎಫ್.ಸಿ ಗೆ: response@hdfcinsurance.com, service@hdfcinsurance.com
ಫ್ಯೂಚರ್ ಜನರಾಲಿಗೆ: care@futuregenerali.in
ನೋಕಿಯಾಗೆ ನಿಮ್ಮ ಅನಿಸಿಕೆ ಇಲ್ಲಿ ತಿಳಿಸಿ: http://www.nokia.co.in/get-support-and-software/ask-nokia
ಎಸ್.ಬಿ.ಐ ಗೆ: partnerforlife@sbimf.com

09-march-10

ಬದಲಾಗಿದೆ ಹೆಚ್.ಡಿ.ಎಫ್.ಸಿ ಜೀವ ವಿಮೆ ಜಾಹಿರಾತು--ಜಾಗೃತ ಗ್ರಾಹಕರ ಮತ್ತೊ೦ದು ಗೆಲುವು!!!


 

Rating
No votes yet

Comments