ಮಾನ್ಯ ಲೋಕಾಯುಕ್ತರೇ ದಯವಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ!!!

ಮಾನ್ಯ ಲೋಕಾಯುಕ್ತರೇ ದಯವಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ!!!

http://thatskannada.oneindia.in/news/2010/03/01/bribe-case-kgf-mla-sampangi-gets-clean-chit.html


 


"ಬೆಂಗಳೂರು, ಮಾ.1 : ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ [^]ರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ಕೆಜಿಎಫ್ ಶಾಸಕ ವೈ ಸಂಪಂಗಿ ಆರೋಪದಿಂದ ಮುಕ್ತರಾಗಿದ್ದು, ಶಾಸಕರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿದ ಫಾರೂಕ್ ಎಂಬುವವರ ವಿರುದ್ಧ ವಾಗ್ದಂಡನೆ ವಿಧಿಸಬೇಕು ಎಂದು ಪ್ರಕರಣಕ್ಕೆ ಸಂಬಂಧಿಸಿ ಸರಕಾರ ರಚಿಸಿದ್ದ ಸದನ ಸಮಿತಿ ವರದಿ ನೀಡಿದೆ. .."


ಈ ಸುದ್ದಿಯನ್ನು ಓದಿ, ಕೇಳಿ, ನೋಡಿ, ತಿಳಿದಾಗ ನನ್ನ ಮನದಲ್ಲಿ ಮೂಡಿದ ಅನಿಸಿಕೆಗಳಿವು.


ಅವುಗಳನ್ನು ಇಲ್ಲಿ ಅಕ್ಷರ ರೂಪದಲ್ಲಿ ಹೊರಹಾಕುತ್ತಿದ್ದೇನೆ :


 "ಮಾನ್ಯ ಲೋಕಾಯುಕ್ತರೇ ದಯವಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ.


ಲಂಚ ಸ್ವೀಕರಿಸುತ್ತಿದ್ದಾಗ ನಿಮ್ಮ ತಂಡದ ಕೈಗೆ ಸಿಕ್ಕಿ ಬಿದ್ದಾತನನ್ನು ಆರೋಪ ಮುಕ್ತ ಗೊಳಿಸಿದ ಮತ್ತು ಆತನ ಮೇಲೆ ದೂರು ನೀಡಿದವರ ವಿರುದ್ಧ ವಾಗ್ದಂಡನೆ ವಿಧಿಸಬೇಕು ಎಂದು ಶಿಫಾರಸು ಮಾಡಿರುವ, ಸರಕಾರವೇ ರಚಿಸಿರುವ ಸಮಿತಿಯ ವರದಿ, ಪರೋಕ್ಷವಾಗಿ ನಿಮ್ಮನ್ನೇ ತರಾಟೆಗೆ ತೆಗೆದುಕೊಂಡಿದೆ ಅಂತ ಅನ್ನಿಸುವುದಿಲ್ಲವೇ? ದೂರು ನೀಡಿದ್ದು ತಪ್ಪು ಅಂತಾದರೆ ಆ ತಪ್ಪು ದೂರಿನನ್ವಯ ಕಾರ್ಯಾಚರಣೆ ನಡೆಸಿದ್ದೂ ತಪ್ಪು ಅಂದ ಹಾಗಾಯ್ತು.


ನೀವು ಮತ್ತು ನಿಮ್ಮ ಲೋಕಾಯುಕ್ತ ತಂಡ ನಡೆಸುವ ಕಾರ್ಯಾಚರಣೆಗಳಿಗೆ ಮತ್ತು ಸಲ್ಲಿಸುವ ವರದಿ ಶಿಫಾರಸ್ಸುಗಳಿಗೆ ಕಿಂಚಿತ್ತೂ ಬೆಲೆ ನೀಡದ ಈ ಜಾಣ ಕಿವುಡು ಸರಕಾರ ನೀಡುವ ಸಂಬಳ ಪಡೆದು, ಅದೇ ಕೆಲ್ಸದಲ್ಲಿ ಮುನ್ನಡೆಯುವ ಅಸಹಾಯಕತೆ ನಿಮಗೇನಿದೆ? ಈ ಹುದ್ದೆಯಲ್ಲಿದ್ದು ನೀವಿನ್ನು ಸಾಧಿಸಬೇಕಾದ್ದು ಏನಿದೆ? ಏನನ್ನಾದರೂ ಸಾಧಿಸಲು ಬಿಟ್ಟಾರೇ? 


ಮುಂದೊಂದು ದಿನ ಈ ಭ್ರಷ್ಟಾಚಾರಿ ರಾಜಕಾರಣಿಗಳ ದಂಡು ನಿಮ್ಮ ತಲೆಯ ಮೇಲೇ ಗೂಬೆ ಕೂರಿಸಿ ನಿಮ್ಮ ಮುಖಕ್ಕೇ ಮಸಿ ಬಳಿಯುವ ಪ್ರಯತ್ನ ಮಾಡದಿರದು ಎಂದು ನಂಬುವುದು ನಮ್ಮಿಂದ  ಅಸಾಧ್ಯ. ಆ ಕರಾಳ ದಿನವನ್ನು ನೋಡುವ ಮೊದಲೇ, ನಿಮ್ಮಲ್ಲಿ ಈ ಕಳಕಳಿಯ ವಿನಂತಿ ಮಾಡುತ್ತಿದ್ದೇನೆ.


ಮಾನ್ಯ ಲೋಕಾಯುಕ್ತರೇ ದಯವಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ".


- ಆತ್ರಾಡಿ ಸುರೇಶ ಹೆಗ್ಡೆ.


 


 

Rating
No votes yet

Comments