ಸಗೋತ್ರ ಮದುವೆ ನಿಷಿದ್ಧ ಏಕೆ

ಸಗೋತ್ರ ಮದುವೆ ನಿಷಿದ್ಧ ಏಕೆ

Comments

ಬರಹ

ಹಿಂದೂ ಮದುವೆಗಳಲ್ಲಿ ಸಗೋತ್ರ ಮದುವೆಯನ್ನು ನಿಷೇದಿಸಲು ಕೊಡುವ ವೈಜ್ಞಾನಿಕ ಕಾರಣ, ಮುಂದೆ ಹುಟ್ಟುವ ಮಕ್ಕಳಲ್ಲಿ ಕೆಲವು ದೌರ್ಬಲ್ಯ ಕಾಣಿಸಬಹುದು ಎಂದು. ಆದರೆ ಈ ಜೆನೆಟಿಕ್ ಡಿಸಾರ್ಡರಿಗೆ ಕಾರಣವಾದ ಕಾಂಸಿಗ್ವಿನಿಟಿ, ಇಬ್ಬರ ಶರೀರದಲ್ಲಿರುವ ಸಾಮಾನ್ಯ ವಂಶವಾಹಿನಿಯ ಮೇಲೆ ಅವಲಂಬಿತವಾಗಿದೆ. ಯಾವುದೋ ಕಾಲದಲ್ಲಿ ಒಂದೇ ಮೂಲದಿಂದ ಬಂದಿದ್ದೆನ್ನಬಹುದಾದ ಎರಡು ಕುಟುಂಬದ ಇಬ್ಬರಲ್ಲಿ ಇದರ ಲಕ್ಷಣ, ಸ್ವಂತ ಅಕ್ಕನ ಮಗಳೋ, ಮಾವನ ಮಗಳನ್ನೋ ಮದುವೆಯಾಗುವುದಕ್ಕಿಂತ ಹೆಚ್ಚಿರುವುದೇ. ಹಾಗಿಲ್ಲದಿದ್ದಲ್ಲಿ, ಸಗೋತ್ರ ಮದುವೆಯನ್ನು ನಿಷೇದಿಸಿರುವುದು ಏಕೆ ಮತ್ತು ಮೇಲೆ ತಿಳಿಸಿದಂತೆ ರಕ್ತ ಸಂಬಂದಿಗಳಲ್ಲಿ ವಿವಾಹ ಏರ್ಪಡಿಸುವುದು ಏಕೆ.

 

ವೈಜ್ಞಾನಿಕ ಕಾರಣದ ನಿರೀಕ್ಷೆಯಲ್ಲಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet