ದೇವಮಾನವನ ಕಾಮ ಕೇಳಿ

ದೇವಮಾನವನ ಕಾಮ ಕೇಳಿ

Comments

ಬರಹ

ಇಂದು ಬೆಳಿಗ್ಗೆಯಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸ್ವಾಮಿ ಪರಮಹಂಸ ನಿತ್ಯಾನಂದ ಎಂಬ ದೇವಮಾನವನ ಕಾಮಪುರಾಣ ಪ್ರಸಾರವಾಗುತ್ತಿದೆ. ಬಿಡದಿಯ ಬಳಿಯ ಆಶ್ರಮಕ್ಕೆ ಜನ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ಹೊರ ರಾಜ್ಯಗಳಲ್ಲಿಯ ಆತನ ಆಶ್ರಮಗಳ ಮೇಲೂ ದಾಳಿ ಮಾಡುತ್ತಿದ್ದಾರೆ. ನಂಬಿಕೆಯಿಂದ ತಾವೇ ಬೆಳ್ಳಿ ಪಲ್ಲಕ್ಕಿ, ಕಿರೀಟ ತೊಡಿಸಿ ಮೆರೆಸುವ ಭಕ್ತರೇ ಸ್ವಾಮೀಜಿಯ ಈ ಕಾಮಕೇಳಿ ದೃಶ್ಯಗಳಿಂದ ಉದ್ರಿಕ್ತರಾಗಿ ಆತನನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. 'ನಮ್ಮ ನಂಬಿಕೆಗೆ ದ್ರೋಹವಾಗಿದೆ' ಎಂದು ಹೆಚ್ಚಿನ ಭಕ್ತರು ಮಾದ್ಯಮಗಳ ಮುಂದೆ ಗೋಳಾಡುತ್ತಿದ್ದಾರೆ. ಈಗ ಆಶ್ರಮದೊಳಗಿನ ಅವ್ಯವಹಾರಗಳನ್ನು ತನಿಖೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅಕ್ರಮ ವನ್ಯಮೃಗ ಚರ್ಮ ಸಂಗ್ರಹ ಇರಬಹುದು ಎಂಬ ಶಂಕೆಯಿಂದ ಈಗ ಅರಣ್ಯ ಅಧಿಕಾರಿಗಳು ಧಾಳಿಗಿಳಿದಿದ್ದಾರೆ.


ಈಗ ಹೇಳಿ. ಈ ದೇವಮಾನವನನ್ನು ಏನು ಮಾಡಬೇಕು? ಈ ದೇವಮಾನವರು ನಮ್ಮ ನಿಮ್ಮಂತೆಯೇ ಅನ್ನ ತಿನ್ನುವ ಕಕ್ಕ ಮಾಡುವ ನರಮನುಷ್ಯರಲ್ಲವೇ? ಅವರನ್ನು ಕೋಲೆ ಬಸವನಂತೆ ಹಿಂಬಾಲಿಸುವುದು ಎಷ್ಟು ಸರಿ? ಆತನ ಒಳ್ಳೆಯ ಗುಣಗಳನ್ನು -ಒಮ್ಮೊಮ್ಮೆ ಇಲ್ಲದ ಗುಣಗಳನ್ನೂ - ಗೌರವಿಸುವ ಭಕ್ತಾದಿಗಳು ಆತನ ಒಂದೇ ಒಂದು ಸಣ್ಣ ಅವಗುಣದಿಂದಾಗಿ 'ದ್ರೋಹವಾಗಿದೆ' ಎಂದು ಹಲುಬುವುದು ಎಷ್ಟು ಸರಿ? ಇವರಿಗೆ ಬುದ್ಧಿ ಹೇಳುವವರು ಯಾರು? ಈಗ ಧಾಳಿ ಮಾಡುತ್ತಿರುವ ಅಧಿಕಾರಿಗಳು ಇಷ್ಟು ದಿನ ಏನು ಮಾಡುತ್ತಿದ್ದರು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet