ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

Comments

ಬರಹ

ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ......

ಏನಿದು ಅಂಥ ಆಶ್ಚರ್‍ಯಾನಾ?

ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಕ್ಕೆ ಬೆಲೆ ಕೊಡೋದಿಲ್ಲ ಕಣ್ರೀ ... ಅದಕ್ಕೆ ಬೇಜಾರು .....

ಉದಾಹರಣೆಗೆ ....
೧: ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು, ನಮ್ಮ ಊರನ್ನು ತೆಗಳೋದು .....
೨: ಕನ್ನಡ ಚಲನಚಿತ್ರಗಳ ಬಗ್ಗೆ ಲಘುವಾಗಿ ಮಾತನಾಡೋದು .....
೩: ಇಲ್ಲೇ ಇದ್ದುಕೊಂಡು, ಇಲ್ಲಿನ ಕಾವೇರಿ ನೀರು ಕುಡಿದು .... ತಮಿಳುನಾಡಿಗೆ ಬೆಂಬಲವಾಗಿ ಮಾತಾಡೋದು .....
೪: ರಜನಿಕಾಂತ್ ಕನ್ನಡದವನಲ್ಲ ಅಂತ ಸುಮ್ನೆ ಸುಮ್ನೆ ವಾದ ಮಾಡೋದು ......

ಈಗ ಮೇಲಿನದರ ಬಗ್ಗೆ ನೀವೇ ಹೇಳಿ .....
೧: ನಮ್ಮ ಬೆಂಗಳೂರನ್ನು ತೆಗಳೋದೇ ಆದರೆ, ಅವರವರ ರಾಜ್ಯಕ್ಕೆ ಹೋಗಿ ... ಅಲ್ಲೇ ಕೆಲಸ ಹುಡುಕಿಕೊಳ್ಳಲಿ ......
೨: ಕನ್ನಡ ಚಲನಚಿತ್ರದ ಬಗ್ಗೆ ಕೀಳಾಗಿ ಮಾತನಾಡುವವರು, ತಮ್ಮ ಭಾಷೆಯ ಚಲನಚಿತ್ರಗಳ ಬಗ್ಗೆ ಒಮ್ಮೆ ಯೋಚಿಸಿ ಮಾತನಾಡಬೇಕು (ತಮಿಳಿನಲ್ಲಾಗಲಿ, ತೆಲುಗಿನಲ್ಲಾಗಲಿ, ಹಿಂದಿಯಲ್ಲಾಗಲಿ ಕನ್ನಡದ ಹಾಗೆ ಮುಂಗಾರು ಮಳೆ, ದುನಿಯ, ಶಾಂತಿನಿವಾಸ, ಸತ್ಯವಾನ್ ಸಾವಿತ್ರಿ ತರಹ ಇಷ್ಟೊಂದು ಸೂಪರ್ ಹಿಟ್ ಚಿತ್ರಗಳು ಬಂದಿಲ್ಲ ಕಣ್ರೀ .....
೩: ಕಾವೆರಿ ವಿಶಯದಲ್ಲಿ ತಮಿಳುನಾಡಿಗೆ ಬೆಂಬಲ ಕೊಡೋದಾದ್ರೆ, ಇಲ್ಲಿ ನೆಲಸಬೇದಿ, ಕಾವೇರಿ ನೀರು ಕುಡೀ ಬೇಡಿ ..... ತಮಿಳುನಾಡಿಗೆ ತೊಲಗಿ ....
೪: ಎಷ್ಟೋ ಜನ ಹೊರ ರಾಜ್ಯದವರು ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿಕೊಂಡು, ಇಲ್ಲೇ ಸೆಟ್ಲ್ ಆಗಿದ್ದಾರೆ ... ಇವರ್‍ಯಾರು ತಮ್ಮನ್ನು ಕನ್ನಡಿಗರೆಂದು ಹೇಳಿಕೊಳ್ಳೋಲ್ಲ .... ಹೀಗಿದ್ದ ಮೇಲೆ ಕರುನಾಡಲ್ಲಿ ಹುಟ್ಟಿ, ಬೆಳೆದು ೩೦ ವರ್ಷಗಳ ನಂತರ ತಮಿಳಿಗೆ ಹೋದ ರಜನಿಕಾಂತ್ ತಮಿಳಿಗನಾಗಲು ಹೇಗೆ ಸಾಧ್ಯ? ... ನೀವೆ ಹೇಳಿ ....

ಅದಕ್ಕೆ ಹೇಳಿದ್ದು ..... ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ಅಂಥ ....

ಜೈ ಕರ್ನಾಟಕ ...... ಸಿರಿಗನ್ನಡಮ್ ಗೆಲ್ಗೆ .....

ನಿಮ್ಮ ಪ್ರೀತಿಯ ...
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet