ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಬ್ರಾಹ್ಮಣರ ಒಂದು ಪಂಗಡಕ್ಕೆ ಸೇರಿದ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನವು ಇದನ್ನು ಬರೆಯಲು ಪ್ರೇರೇಪಿಸಿತು. ಅದರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ.;---ಬ್ರಾಹ್ಮಣರಲ್ಲಿ ಬಡಿಸುವವರು ಎಡಗಡೆಯಿಂದಲೇ ಬಡಿಸುತ್ತಾ ಸಾಗಬೇಕು. ಮೊದಲಿಗೆ ತುಪ್ಪ ಪಾಯಸ ಪಂಚಕಜ್ಜಾಯ ಹಾಕಿ ನಂತರ ಪಲ್ಯ ಕೋಸುಂಬರಿ ಚಿತ್ರಾನ್ನ ಇನ್ನ್ನಿತರ ಭಕ್ಷಗಳನ್ನು ಹಾಕಬೇಕು ಅನ್ನ ಹಾಕಿದ ನಂತರ ಮನೆಯ ಯಜಮಾನತಿಯೇ ಅನ್ನದ ಮೇಲೆ ತುಪ್ಪವನ್ನು ಬಡಿಸುತ್ತಾಳೆ ಹಾಗೂ ಸುಹಾಸಿನಿಯರಿಗೆ ಹೂ ಕುಂಕುಮ ಕೊಟ್ಟು ನಮಸ್ಕರಿಸುತ್ತಾಳೆ. ಮನೆಯ ಯಜಮಾನ ಪೂರ್ವಾಪೋಷನ ಹಾಕಿ ಸಾರ್ವತ್ರಿಕವಾಗಿ ಕೈ ಮುಗಿದು ನಿಧಾನವಾಗಿ ಭೋಜನ ಸ್ವೀಕರಿಸಿ ಎಂದು ಕೇಳುತ್ತಾನೆ. ಅನಂತರವೇ ಎಲ್ಲರೂ ಒಟ್ಟಿಗೇ ಭೋಜನ ಪ್ರಾರಮ್ಭಿಸುತ್ತಾರೆ.
ಇನ್ನಿತರ ಜಾತಿಯವರಲ್ಲಿ ಈ ಯಾವ ಪಕ್ಖತಿಯೂ ಕಂಡುಬರುವುದಿಲ್ಲ. ಬಾಳೆ ಎಲೆಯನ್ನು ತಮ್ಮ ಅನುಕೂಲಕ್ಕೆ ಎಲೆಯ ಮಧ್ಯದಲ್ಲಿ ಅಂತರವನ್ನು ಬಿಡದೆ ಒಂದಕ್ಕೊಂದು ಜೋಡಿಸಿಟ್ಟುಕೊಂಡು ಊಟಮಾಡುತ್ತಾರೆ. ಬಡಿಸಲು ಪ್ರಾರಂಭಿಸುದ್ದಂತೆಯೇ ಒಂದೊಂದಾಗಿ ತಿನ್ನ ತೊಡಗುತ್ತಾರೆ ಇತ್ಯಾದಿ ಇತ್ಯಾದಿ --
ಜೊತೆಗೆ ಊಟ ಬಡಿಸುವ ವಿಷಯದಲ್ಲಿ , ಬ್ರಾಹ್ಮಣ ಅದರಲ್ಲೂ ತಮ್ಮ ಪಂಗಡದ ಸಂಸ್ಕ್ುತಿಯೇ ಶ್ರೇಷ್ಟ ಎಂದು ಶರಾಬರೆದಿದ್ದಾರೆ. ಅವರು ಈರೀತಿ ಅಭಿಪ್ರಾಯಪಟ್ಟದ್ದು ತಪ್ಪು ಎಂದು ನಾನು ಹೇಳುವುದಿಲ್ಲ. ಬದಲಿಗೆ ಹೀಗೆಯೇ ತಮ್ಮ ತಮ್ಮ ಪಂಗಡಗಳ ಬಗ್ಗೆಯೇ ಹೆಮ್ಮೆ ಪಡುವ ಬ್ರಾಹ್ನಣೇತರ ಜನರೂ ಇದ್ದಾರೆ ಎಂಬ ವಾಸ್ತವವನ್ನು ಎದುರಿಗಿಡಲು ಪ್ರಯತ್ನಿಸುತ್ತೇನೆ..ಜೊತೆಗೆ ಊಟಕ್ಕೆ ಸಂಬಂಧ ಪಟ್ಟಂತೆ ನನಗಾದ ಬೇರೆ ಬೇರೆ ಅನುಭವಗಳನ್ನು ಇಲ್ಲಿ ದಾಖಲಿಸುತ್ತಿ ದ್ದೇನೆ..
ನೆನಪು ಬಹಳ ಉದ್ದವಾದುದು. ಹೀಗಾಗಿ ದಾಖಲೆಯೂ ಉದ್ದವಾಗಿದೆ. ಆದ್ದರಿಂದ ಧಾರಾವಾಹಿಯಾಗಿ ಕೊಡುತ್ತಿದ್ದೇನೆ.
“ಬ್ರಾಹ್ಮಣರ ಮನೆಗೆ ಊಟಕ್ಕೆ ಹೋಗಬಾರದು..ಅವರು ನಾಯಿಗೆ ಎಸೆಯುವಹಾಗೆ ಎತ್ತರೆದಿಂದ ಬಡಿಸುತ್ತಾರೆ.” “ಬ್ರಾಹ್ಮಣರ ಮನೆಗೆ ಹೋದರೆ ಹೊಟ್ಟೆತುಂಬುವುದಿಲ್ಲ. ಮೊದಲೇ ಹತ್ತುಸಾರೆ ಅನ್ನಾ ಬಡಸಿತ್ತಾರೆ. ಆಮೇಲೆ ಸ್ವೀಟ್ ತರುತ್ತಾರೆ. ಯಾವದೇವರಿಗೆ ಪ್ರೀತಿಯೋ ಈ ಪದ್ದತಿ.” ”ಹದಿನೆಂಟು ಬಗೆ ಬಡಿಸುತ್ತಾರೆ, ಒಂದೂ ಹೊಟ್ಟೆ ತುಂಬುವುದಿಲ್ಲ.”-- ನನ್ನ ಸಹೋದ್ಯೋಗಿಗಳ ಬಾಯಲ್ಲಿ ಇಂತಹ ಮಾತುಗಳನ್ನು ನಾನು ಸಾಕಷ್ಟುಸಾರೆ ಕೇಳಿದ್ದೇನೆ. ಪತ್ರಿಕೆಯಲ್ಲಿ ಹೆಮ್ಮೆಯಿಂದ ಹೇಳಿದ ಪದ್ದತಿಯನ್ನು ಬ್ರಾಹ್ನಣೇತರಜನರು ಹೀಗಳಿಯುತ್ತಾರೆ.
-
ಕಳೆದ ತಿಂಗಳು ಸಿರಸಿಯಲ್ಲಿ ಪ್ರತಿಭಾಕಾರಂಜಿ ಎಂಬ ರಾಜ್ಯಮಟ್ಟದ ಕಾರ್ಯಕ್ು ಮ ಒಂದು ನಡೆಯಿತು. ಸಿರಸಿಯ ಪ್ರಸಿದ್ಧ ಬೆಂಡೇಗೆದ್ದೆಯವರಿಂದ ಮೇಜವಾನಿಯ ಊಟ ವ್ಯವಸ್ಥೆಯಾಗಿತ್ತು. ಭಕ್ಷ ಭೋಜ್ಯಗಳಿಗೆ ಕೊರತೆ ಇರಲಿಲ್ಲ ಎಂದು ಕೇಳಿದ್ದೆ. ಅದರೆ , ಎಲ್ಲೋ ಒಂದು ಕಡೆ ನನ್ನ ಕಿವಿಗೆ ಈ ಮಾತು ಬಿತ್ತು.-”ಮೂರು ಹೆಜ್ಜೆ ನಡೆಯುವುದರಲ್ಲಿ ಹೊಟ್ಟೆ ಹಸಿತದಪಾ! ” ಸಂಕಟದಲ್ಲಿ ಹೇಳುತ್ತಿದ್ದ. ಏಕೆಂದರೆ ಅವನಿಗೆ ಅವನ ಊಟವು ಸಿಕ್ಕಿರಲಿಲ್ಲ. ಅವನ ಊಟವು ಜೋಳದ ರೊಟ್ಟಿಯಾಗಿತ್ತು.!!
-
ಕರ್ನಾಟಕದಲ್ಲಿ, ಬೇರೆಬೇರೆ ಪ್ರದೇಶದಲ್ಲಿ ಜೋಳ, ರಾಗಿ, ಅಕ್ಕಿಗಳು .ಪ್ರಧಾನ ಆಹಾರ ಎನ್ನಿಸಿವೆ. ಕೆಲವೇ ಕೆಲವು ಜಿಲ್ಲೆಯನ್ನು ಬಿಟ್ಟರೆ ಅಕ್ಕಿಯು ಯಾರಿಗೂ ಪ್ರಧಾನ ಆಹಾರ ಅಲ್ಲ. ಗೋದಿಯನ್ನು ಜೋಳಕ್ಕೆ ಪರ್ಯಾಯವಾಗಿ ಕೆಲಸಾರೆ ಉಪಯೋಗಿಸುವುದಿದೆ. ಅಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಇತರರಿಗೆ ಅಕ್ಕಿಯಮೇಲೆ ಯಾವ ಮೋಹವೂ ಇಲ್ಲ.
-
ಉತ್ತರ ಕರ್ನಾಟಕದಲ್ಲಿ ದಿನನಿತ್ಯದ ಹೊಟ್ಟೆತುಂಬುವ ಆಹಾರ – ಜೋಳದ ರೊಟ್ಟಿ.. (ಬ್ರಾಹ್ಮಣರ ಬಾಯಲ್ಲಿ ಅದು ಭಕ್ರಿ ಆಗುತ್ತದೆ) ಅದಿಲ್ಲದೇ ಅನ್ನವನ್ನು ಎಸ್ಟು ಉಂಡರೂ ಹೊಟ್ಟೆಯ ಉರಿ ಶಮನವಾಗುವುದಿಲ್ಲ. ದಕ್ಷಿಣದಲ್ಲಿ ರಾಗಿಮುದ್ದೆ ಮಾತ್ರ ಹೊಟ್ಟೆಯನ್ನು ತಣ್ಣಗೆ ಮಾಡಬಲ್ಲದು.. (ಮಾಜಿ ಪ್ರಧಾನಿ, ಮಾನ್ಯ ದೇವೇಗೌಡರಿಗೆ ರಾಗಿಮುದ್ದೆ ಇಲ್ಲದೇ ಊಟ ಇಲ್ಲ.) ಬಟ್ಟಲ ತುಂಬ ಬಡಿಸಿದ, ಹುಗ್ಗಿ ಹೋಳಿಗೆಗಳು ಮಾತ್ರ, ಇವುಗಳ ಸ್ಥಾನವನ್ನು ತುಂಬಬಲ್ಲವು.
-
ಊಟದ ಎಲೆಗೂ ಬಡಿಸುವ ಸೌಟಿಗೂ ಮಧ್ಯ ಅಂತರ ಇರಬೇಕು. ಅದೇನಾದರೂ ಅಪ್ಪಿತಪ್ಪಿ ಒಂದನ್ನೊಂದು ಮುಟ್ಟಿಸಿಕೊಂಡರೆ. ಆ ಸೌಟನ್ನು ಬದಲಾಯಿಸಬೇಕು. ಬಡಿಸುವ ಗಡಬಡೆಯಲ್ಲಿ ಆ ಸೌಟನ್ನು ಪಾತ್ರೆಯಲ್ಲಿ ಅದ್ದಿದರೆ, ಅದು ಎಂಜಿಲು ಎನ್ನಿಸಿಕೊಳ್ಳುತ್ತದೆ. ಆ ಪಾತ್ರೆಯಲ್ಲಿದ್ದಿದ್ದೆಲ್ಲವನ್ನೂ ತಿಪ್ಪೆಗೆ ಎಸೆಯ ಬೇಕು ಅದನ್ನು ಹಾಗೆಯೇ ಬಡಿಸುವುದು ಊಟಕ್ಕೆ ಕುಳಿತವನಿಗೆ ಮಾಡುವ ಅವಮಾನ ಎಂದು ಭಾವಿಸುತ್ತಾರೆ.- ಇದು ಬ್ರಾಹ್ಮಣರ ಪದ್ದತಿ.
-
ಬ್ರಾಹ್ಮಣೇತರರಲ್ಲಿ ಎಲೆಗೆ ಮುಟ್ಟಿಸಿಯೇ ಬಡಿಸಬೇಕು, ಅದು ಗೌರವಯುತವಾದ ನಡವಳಿಕೆ ಎನ್ನಿಸಿಕೊಳ್ಳುತ್ತದೆ. ಹಾಗೆ ಮಾಡದಿದ್ದಲ್ಲಿ ಅದು ಊಟಕ್ಕೆ ಕುಳಿತವನಿಗೆ ಮಾಡುವ ಅವಮಾನ ಎಂತಲೇ ಭಾವಿಸಿಕೊಳ್ಳುತ್ತಾರೆ. ಖಾನಾವಳಿಗಳಲ್ಲಿಯೂ ಬಡಿಸುವಾಗ ರೊಟ್ಟಿಯನ್ನು ಪಲ್ಯವನ್ನು ತಾಟಿಗೆ / ಎಲೆಗೆ ತಾಗಿಸಿಯೇ ಬಡಿಸುತ್ತಾರೆ . ಇಲ್ಲವಾದರೆ ಗ್ರಾಹಕ ಎಗರಾಡುತ್ತಾನೆ.
-
ಕಳೆದೆರಡು ತಿಂಗಳ ಹಿಂದೆ ದಕ್ಷಿಣ ಕನ್ನಡ ಶಿವಮೊಗ್ಗೆಗಳಲ್ಲಿರುವ ತೀರ್ಥಕ್ಷೇತ್ರದಲ್ಲಿ ಊಟ ಮಾಡುವಾಗ ಗಮನಿಸಿದ್ದು ಹೀಗಿದೆ. -- ನಲ್ಲಿಯಲ್ಲಿ ನೀರು ಬರದ ಬಡಾವಣೆಗಳಲ್ಲಿ, ಮುನಸೀಪಾಲಟಿಯವರು, ಕುಡಿಯುವ ನೀರಿನ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುತ್ತಾರೆ.. ನೀರನ್ನು ಹಂಚಿಕೆಮಾಡುವವನಿಗೆ ಜನತೆಯಮೇಲೆ ಯಾವ ಆತ್ಮೀಯತೆಯೂ ಇರುವುದಿಲ್ಲ. ಜನತೆ ಕಷ್ಟಪಟ್ಟು ನೀರನ್ನು ಹಿಡಿಯುತ್ತಿದ್ದರೂ, ಅವನು ಉಡಾಪೆಯಿಂದ ನೀರನ್ನು ಬಿಡುತ್ತಾನೆ. ಬಿಂದಿಗೆಯಲ್ಲಿ ಬಿದ್ದ ನೀರಿಗಿಂತ ಹೊರಗೇ ಹೆಚ್ಚಿಗೆ ನೀರನ್ನು ಚೆಲ್ಲಿರುತ್ತಾನೆ. ಟ್ಯಾಂಕರಿಗೆ ಇಷ್ಟು ಎಂದು ಪಡೆಯುವಾತನಿಗೆ ಟ್ಯಾಕರ್ ಖಾಲಿಮಾಡುವುದೇ ಗುರಿ. ಜನರ ಕಷ್ಟ ಗಮನಕ್ಕೇ ಬರುವುದಿಲ್ಲ.---- ನಾನು ಹೋದ ಕ್ಷೇತ್ರಗಳಲ್ಲಿ ಸಾರು / ಹುಳಿ ಬಡಿಸುವವರೂ ಇದೇ ಧೋರಣೆ ತೋರಿದುತ್ತಿದ್ದರು.ನಾನು ಅನ್ನವನ್ನು ಒಂದುಕಡೆಗೆ ಹಿಡಿದರೆ ಅವರು ಇನ್ನೊಂದುಕಡೆ ಸುರಿಯುತ್ತಿದ್ದರು! ಜನದಟ್ಟಣೆ ಎನ್ನುವುದಕ್ಕಿಂತ, ಬಹುಷಃ ಇದು ಶೂದ್ರರ ಪಂಗ್ತಿ ಎಂಬ ಉಡಾಪೆಯೂ ಇರಲಿಕ್ಕೆಸಾಕು. (ಆದರೆ ನೆಲಕ್ಕೆಮಾತ್ರ ಸುರಿಯುತ್ತಿರಲಿಲ್ಲ!!) ಶೂದ್ರರ ಊಟದಲ್ಲಿ ಇಂತಹ ಬೇಕಾಬಿಟ್ಟಿ ತನ ಕಾಣಸಿಗದು.
ನನಗೆ ಖುಷಿಸಿಕ್ಕಿದ್ದು, ವದ್ದಳ್ಳಿಯ ಅಮ್ಮನೋರ ದೇವಸ್ಥಾನದಲ್ಲಿ. ಪಾಯಸವನ್ನು ಒಮ್ಮೆ ಉಂಡು ಎರಡನೆಯ ಸಾರೆ ಬಡಿಸಲು ಬಂದಾಗ "ಹೊಟ್ಟೆ ತುಂಬಿದೆ ಪಾಯಸ ಬೇಡ ಎಂದ". ಅದಕ್ಕೆ ಆತ "ಪಾಯಸ ತಿಂದರೆ ಹೊಟ್ಟೆಗೆ ಏನೂ ತೊಂದರೆ ಆಗೋದಿಲ್ಲ. ತಿನ್ನಿರಿ" ಎಂದು ಎರಡು ಸೌಟು ಪಾಯಸವನ್ನು ಪ್ರೀತಿಯಿಂದ ಬಡಿಸಿದ.. ನಾನು ಯಾರೋ ಅವನ್ಯಾರೋ. ಅದರೆ ಆಗಳಿಗೆಯಲ್ಲಿ ನಾನು ಊಟ ಮಾಡುವವನು ಅವನು ಬಡಿಸುವವನು ಸಂಬಂಧ ನಮ್ಮಿಬ್ಬರ ನಡುವೆ ಇತ್ತು. ಇಂತಃ ಸಂಬಂಧ ಬ್ರಹತ್ ದೇವಸ್ಥಾನಗಳಲ್ಲಿ ಕಂಡುಬರಬೇಕು.
Comments
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by VeerendraC
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by ಅರವಿಂದ್
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by abdul
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by roopablrao
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by abdul
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by abdul
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by ishwar.shastri
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by vikraaditya
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by bhalle
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by bhasip
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧
In reply to ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧ by ksraghavendranavada
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೧