ಇಲ್ಲೊಂದು ಕಾಶಿಯುಂಟು!

ಇಲ್ಲೊಂದು ಕಾಶಿಯುಂಟು!

ಶ್ರೀಧರ್,ಇವತ್ತು ಭಾನುವಾರ, ನಿಮ್ಮ ಕಾರ್ಯಕ್ರಮವೇನು?
ಮಿತ್ರ ದಾಸೇಗೌಡರು ಬೆಳಿಗ್ಗೆ ಆರು ಗಂಟೆಗೆ ಫೋನ್ ಮಾಡಿ ನನ್ನನ್ನು ವಿಚಾರಿಸಿದಾಗ, ಸಧ್ಯಕ್ಕೆ ಅಂತಾದ್ದೇನೂ ಇಲ್ಲ.ಬೆಂಗಳೂರಿಗೆ ಹೋಗಬೇಕಿತ್ತು, ಮುಂದಿನವಾರಕ್ಕೆ ಪೊಸ್ಟ್ ಪೋನ್ ಆಗಿದೆ, ಎಂದು ಹೇಳಿದೆ.
"ಹಾಗಾದರೆ ಬನ್ನಿ ಕಾಶಿಪುರಕ್ಕೆ ಹೋಗಿ ಬರೋಣ"ಎಂದಾಗ ಇಂದಿನ ನಮ್ಮ ಕಾರ್ಯಕ್ರಮ ಫಿಕ್ಸ್ ಆಯ್ತು.ಬೇಲೂರಿನಿಂದ ಸಂಶೋಧಕರಾದ ಡಾ.ಶ್ರೀವತ್ಸವಟಿ, ಬೆಂಗಳೂರಿನ ಸುಧೀರ್, ಹಾಸನದ ಪ್ರೊ|| ಸುಭಾಶ್ ಬಸು,ಹೊಯ್ಸಳ ಡಾಟ್ಕಾಮ್ ಮಾಸಿಕ ಪತ್ರಿಕೆಯ ಸಂಪಾದಕ ಶ್ರೀ ದಾಸೆಗೌಡರು ಹಾಗೂ ನಮಗೆಲ್ಲಾ ಮಾರ್ಗದರ್ಶಿಯಾಗಿ ಸಂಪತ್ ಮೇಸ್ಟ್ರು, ಎಲ್ಲಾ ಸೇರಿ ಹಾಸನದಿಂದ ೧೮ ಕಿಲೋ ಮೀಟರ್ ದೂರದ ಅಡಗೂರಿಗೆ ಬಸ್ ನಲ್ಲಿ ತಲುಪಿದೆವು.ಅಲ್ಲಿಂದ ಕೇವಲ ಎರಡುಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಕಾಶಿಪುರ ತಲುಪಿದ್ದಾಯ್ತು. ಕಾಶಿಪುರ-ಹೆಸರಿಗಷ್ಟೆ. ಅಲ್ಲಿ ಊರು-ಮನೆ ಅಂತಾ ಏನೂ ಇಲ್ಲ. ಎಲ್ಲಾ ನಿರ್ನಾಮವಾಗಿ ಸುಮಾರು ೧೫೦ ವರ್ಷಗಳು ಸಂದಿರಬಹುದು.ಆದರೆ ಅಲ್ಲಿದ್ದ ಸುಮಾರು ಹೊಯ್ಸಳರ ಕಾಲದ ದೇವಾಲಯದ ಪಳೆಯುಳಿಕೆಗಳು ನಮ್ಮನ್ನು ದೀನದೃಷ್ಟಿಯಿಂದ ಸ್ವಾಗತಿಸಿದವು.  ನಾವು ಸೆರೆಹಿಡಿದ  ದೃಶ್ಯಗಳನ್ನು ಮಾತ್ರ ಇಂದು ಪ್ರಕಟಿಸುವೆ. ಚಿತ್ರಗಳೇ ತಮ್ಮ ಕಥೆಯನ್ನು ಹೆಳಲಿವೆ. ಮುಂದೆ ಅಕ್ಷರಗಳ ಅಗತ್ಯವಿದ್ದರೆ ಒಂದಿಷ್ಟು ವಿವರ ಬರೆಯುವೆ.

   ನಾನ್ಯಾರಿಗೆ ಕಮ್ಮಿ ಅಂತ ನನ್ನನ್ನು ಪಾಳು ಬಿಟ್ಟಿರಿ?

ನನ್ನುದ್ದ ಈಗ ನೋಡಿ

 



ನನ್ನನ್ನು ನೋಡಿ ಇದು ವಿಷ್ಣು ದೇವಾಲಯವೆಂಬ ತೀರ್ಮಾನಕ್ಕೆ ಬನ್ನಿ, ಪರವಾಗಿಲ್ಲ, ಆದರೆ ವಿಷ್ಣು ಎಲ್ಲಿ ಆಂತಾ ನನ್ನ ಕೇಳ್ಬೇಡಿ, ನನ್ನ ದ್ವಾರಪಾಲಕ ಹುದ್ಧೆ ಹೋಗಿ ತುಂಬಾ ದಿನವಾಯ್ತು!!

 

ನೋಡಿ ನಮ್ಮ ಸ್ಥಿತಿ! ಮುಂದಿನಸಲ ಬರುವ ಹೊತ್ತಿಗೆ ನಾವು ಇರ್ತೀವೋ ಇಲ್ಲವೋ, ಈಗಲೇ ಫೋಟೋ ತೆಗೆದುಕೊಂಡು ಬಿಡಿ!

 

ನನ್ನನ್ನು ತುಂಡಿರಿಸಿ ಬಿಟ್ಟರು!

 

ನಾನೂ ಬೇಡ್ವಾ ನಿಮಗೆ?

 

ನಮ್ಮನ್ನು  ಕಿತ್ತು ಕಿತ್ತು ಯಾರ್ಯಾರೋ ಹೊತ್ತುಕೊಂಡು ಹೋಗ್ತಾ ಇದಾರೆ, ಬಚ್ಚಲುಬಾಯಿಗೆಲ್ಲಾ ನಮ್ಮನ್ನು ಹಾಕಲು ಬಿಡಬೇಡಿ, ಕಾಪಾಡಿ! ಕಾಪಾಡಿ!!

 

ನಾನು ಮಹಾದ್ವಾರದ ಒಂದು ನೋಟ. ನನ್ನೆತ್ತರ ಇಪ್ಪತ್ತು ಅಡಿ, ಅಗಲ ಐದು ಅಡಿ

 



ನಾನು ಈಗಲೂ ಗಟ್ಟಿಮುಟ್ಟಾಗಿದ್ದೀನಿ

 



ನನ್ನೊಳಗೆ ದಯಮಾಡಿ ಬನ್ನಿ

 



ದೇವಾಲಯದಿಂದ ನನ್ನಂತೆಯೇ ಎಲ್ಲರನ್ನೂ ಹೊರಹಾಕಿ ಬಿಟ್ರು

 


ಏನು- ಕಪಿಬುದ್ಧಿ! ಅಂದ್ರಾ?

 


ಇಲ್ಲಿ ನಾವು ನಿರಾಳ!

 


ನಾನೂ ಅಷ್ಟೆ, ತುಂಬಾ ಜನಕ್ಕೆ ಆಶ್ರಯಕೊಟ್ಟಿದ್ದೆ

 


ನನ್ನೊಳಗೆ ನೀವು ನೂರು ಜನ ಬಂದ್ರೂ ಆಸರೆ ಕೊಡ್ತೀನಿ, ನೀವು ಬರಬೇಕಲ್ಲಾ!

 


ಇದು ಪ್ರಕಾಶಕರ ಕೆಲಸಾನಾ

 

ಸಂಶೋಧನೆ ಅಂದ್ರೆ ಸುಮ್ನೆ ಆಯ್ತಾ?

 

ನಾನೂ ಬೇಡ್ವಾ ನಿಮಗೆ?

 

ನಾವ್ಯಾರು? ಅಂತ ನೀವೇ ಹೇಳಿ

 

 

ಪಾಪ! ಸಂಪತ್ ಮೇಸ್ಟ್ರು ಮತ್ತು ಅವರ ತಂದೆಗೆ "ಏನಾದರೂ ಇದಕ್ಕೆ ದಾರಿ ಮಾಡಬೇಕೆಂಬ ಕಾಳಜಿ"

 

ಇದು ನನ್ನೊಳಗಿನ ಸ್ಥಿತಿ!!

 

ಇಷ್ಟು ದೊಡ್ಡ ಕೈಸಾಲೆ ಉಪಯೋಗ ಮಾಡಿದ್ದೀವಿ!

 



ದೇವಾಲಯದ ಕೈಸಾಲೆ ನಾನು

 


ಪಕ್ಕದ್ದೇ ನಮ್ಮ ಜಮೀನು ಪಂಪ್ ಸೆಟ್ಟಿನ ಪೈಪ್ ಇಟ್ಟಿದ್ದೀವಿ.ಅಷ್ಟೆ!

 

ಖಾಲಿ ಇತ್ತು, ಶುಂಠಿ ಗೋಡನ್ ಮಾಡಿಕೊಂಡೆವು


ಛೇ! ಅನ್ನಬೇಡಿ



ನಾವು ಬೆಳೆಯಲು ಯಾರೂ ಅಡ್ಡಿಪಡಿಸಲಿಲ್ಲ!!



ಇದು ಕಾಡಲ್ಲ!!


ಸುಮಾರು ಒಂದು ಎಕರೆ ಪ್ರದೇದಲ್ಲಿರುವ ದೇವಾಲಯ ಸಮೂಹ

 

ನೋಡಿ ನನ್ನ ಸ್ಥಿತಿ!

ನೋಡಿ ನನ್ನ ಸ್ಥಿತಿ! ನಾನು ದೇವಾಲಯವೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ!!

 

ಕಂಬದಲ್ಲಿ ಆಂಜನೇಯನ ಚಿತ್ರ

 

ಕಂಬದಲ್ಲಿ ಗಣಪ

 

ಕಂಬದ ಮೇಲೆ ಕೆತ್ತನೆ- ಪುಂಗಿಯೂದುವ ಒಂದು ದೃಶ್ಯ

 

ದೇವಾಲಯದ ಮಾಹಾದ್ವಾರ

 

ದೇವಾಲಯದ ಮಾಹಾದ್ವಾರದ ಇನ್ನೊಂದು ದೃಶ್ಯ

 

ನನ್ನುಪಯೋಗ ಹೀಗಾಗಿದೆ ನೋಡಿ!

 

ನಮ್ಮ ಸ್ಥಿತಿ ನೋಡಿ ಬೇಜಾರಾಯ್ತಾ?


ಸಂಪದ ಮಿತ್ರರೇ,
ನಮ್ಮ ಪ್ರಾಚೀನ ದೇವಾಲಯಗಳ ಇಂದಿನ ಸ್ಥಿತಿ ನೋಡಿದಿರಾ? ಇಂತಹಾ ದೇವಾಲಯಗಳನ್ನು ಪಾಳು ಬಿಟ್ಟು ಹೊಸ ದೇವಾಲಯಗಳನ್ನು ಕಟ್ಟುವ ನಮ್ಮನ್ನು ಏನೇಂದು ಕರೆದುಕೊಳ್ಳೋಣ? ಇದು ದೇವಾಲಯವಷ್ಟೇ ಅಲ್ಲ. ಇಲ್ಲೊಂದು ದೇವಾಲಯದ ಕಾಂಪ್ಲೆಕ್ಸ್ ಇದ್ದ ಎಲ್ಲಾ ಕುರುಹುಗಳೂ ತಮ್ಮ ಗೋಲಿನ ಕಥೆಯನ್ನು ಸಾರುತ್ತಾ ನಿಂತಿವೆ. ರಾಜ್ಯ ಸರ್ಕಾರ ಎಷ್ಟೋ ಮಠ-ಮಂದಿರಗಳಿಗೆ ಧನ ಸಹಾಯ ಮಾಡಿ ಉದ್ಧಾರ ಮಾಡಿದೆ. ಇಂತಹ ಒಂದು ಪುರಾತನ ದೇವಾಲಯದ ಜೀರ್ಣೋದ್ಧಾರವಾಗ ಬಾರದೇ? ಪೂಜೆ ಮಾಡಲು ದೇವಾಲಯ ಬೇಕೆಂಬುದು ಬೇಡಿಕೆಯಲ್ಲ. ಅದೊಂದು ಸುಂದರ ತಾಣವಾಗುವ ಎಲ್ಲಾ ಅವಕಾಶಗಳಿವೆ. ಅಲ್ಲಿ ಬೆಳೆದಿರುವ ಪೊದೆಗಳನ್ನು ತೆಗೆದು ಅಲ್ಲಿರುವ ಪಳೆಯುಳಿಕೆಯನ್ನು ಭದ್ರಪಡಿಸಿದರೆ ಒಂದು ಸುಂದರ ತಾಣವಾಗುವುದರಲ್ಲಿ ಸಂಶಯವಿಲ್ಲ. ಹಾಸನ-ಹಳೇಬೀಡು ರಸ್ತೆಯಲ್ಲಿ ಹಾಸನದಿಂದ  ೨೦ ಕಿಲೋ ಮೀಟರ್ ದೂರದಲ್ಲಿರುವ ಈ ಸ್ಥಳವನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿಗರಿಗೆ ಒಂದು ಸುಂದರತಾಣವಾಗುವುದರಲ್ಲಿ ಸಂಶಯವಿಲ್ಲ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಬೇಕು.

Rating
No votes yet

Comments