ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನೆನಪಾದ ಕತೆ...!!!

ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನೆನಪಾದ ಕತೆ...!!!

ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಒಬ್ಬ ಯುವ ರೋಗಿ ಇದ್ದ.

ಆತ ಯಾವಾಗಲೂ ಗಾಳಿಪಟ ಹಾರಿಸುವ ಕನಸು ಕಾಣುತ್ತಲಿದ್ದ. ಮತ್ತು ಗಾಳಿಪಟ ಹಾರಿಸುವಂತೆ ನಟಿಸುತ್ತಲೂ ಇದ್ದ. ಸುಮಾರು ತಿಂಗಳ ಚಿಕಿತ್ಸೆಯ ನಂತರ ವೈದ್ಯರು ಅವನನ್ನು ಕೇಳಿದರು:

"ನಾನು ನಿನ್ನನ್ನು ನಾಳೆ ಮನೆಗೆ ಕಳುಹಿಸುತ್ತೇನೆ. ನೀನು ಮನೆಗೆ ಹೋಗಿ ಏನು ಮಾಡ್ತೀ?"

ರೋಗಿ: "ಡಾಕ್ಟ್ರೇ ನಾನು ಮದುವೆ ಆಗ್ತೀನಿ" ಈ ಉತ್ತರ ಕೇಳಿ ವೈದ್ಯರಿಗೆ ಸಂತಸ ಆಯ್ತು. ರೋಗಿ ತನ್ನ ವಯಸ್ಸಿಗೆ ಒಪ್ಪುವ ಮಾತನ್ನೇ ಆಡುತ್ತಾ ಇದ್ದಾನೆ. ಇನ್ನೂ ಕೆಲವು ಪ್ರಶ್ನೆ ಕೇಳೋಣ ಎಂದು ನಿರ್ಧರಿಸಿ ಮುಂದುವರೆದರು.

ವೈದ್ಯರು: "ಸರಿ ಮದುವೆ ಆದ ಮೇಲೆ ಏನು ಮಾಡ್ತಾರೆ ಗೊತ್ತಾ?"

ರೋಗಿ: "ಹೌದು ಹೌದು ಮೊದಲ ರಾತ್ರಿ..."

ವೈದ್ಯರು:"ಮೊದಲ ರಾತ್ರಿಗೆ ತಯಾರಿ ಹೇಗೆ ನಡೆಸುತ್ತೀ ನೀನು?"

ರೋಗಿ: "ಭೋಜನ ಎಲ್ಲಾ ಮುಗಿದ ಮೇಲೆ ... ಎಲ್ಲಾ ಮಲಗುವ ಸಮಯ ಆದಾಗ ನಾನು ನನ್ನ ವಧುವಿನೊಂದಿಗೆ ನನ್ನ ಮಲಗುವ ಕೋಣೆಗೆ ಹೋಗ್ತೇನೆ"

ವೈದ್ಯರು:"ಆಮೇಲೆ?"

ರೋಗಿ: "ದೀಪ ಆರಿಸ್ತೇನೆ..."

ವೈದ್ಯರು:"ಆಮೇಲೆ?"

ರೋಗಿ: "ಆಕೆಯ ಸೀರೆ ತೆಗೆದಿರಿಸಲು ಹೇಳ್ತೇನೆ"

ವೈದ್ಯರು:"ಆಮೇಲೆ"

ರೋಗಿ: "ಆಕೆಯ ಲಂಗದ ಲಾಡಿಯನ್ನು ತೆಗೆದು ನನಗೆ ನೀಡಲು ಹೇಳ್ತೇನೆ"

ವೈದ್ಯರು:"ಲಾಡಿ...?! ಯಾಕೆ?"

ರೋಗಿ: "ನನ್ನ ಗಾಳಿಪಟಕ್ಕೆ ಕಟ್ಟುವುದಕ್ಕೆ....ಆಮೇಲೆ ಇಡೀ ರಾತ್ರಿ ಗಾಳಿಪಟ ಹಾರಿಸುತ್ತೇನೆ..."

ವೈದ್ಯರು: "ಸರಿ ಒಳಗೆ ಹೋಗು ಇನ್ನು ಆರು ತಿಂಗಳು ನಿನ್ನನ್ನು ಮನೆಗೆ ಕಳುಹಿಸೋಲ್ಲ....ನೀನು ಇಲ್ಲೇ ಇರಬೇಕು..."

 

ಸಂಪದದಲ್ಲಿನ ಕೆಲವು ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನನಗೆ ಅದೇಕೋ  ಈ ಕತೆ ನೆನಪಾಯ್ತು...ನಿಮ್ಮೊಂದಿಗೂ ಹಂಚಿಕೊಂಡೆ, ಅಷ್ಟೆ.

:)

- ಆತ್ರಾಡಿ ಸುರೇಶ ಹೆಗ್ಡೆ
Rating
No votes yet

Comments