ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!

ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!


 

ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ

ನಾವು ಹಿಂದುಗಳು ಒಂದೇ ಮಾನದವರಾಗಬಾರದೇಕೆ

  

ನೆರೆಯ ಮನೆಯಲ್ಲಿ ಯುಗಾದಿ ಆಚರಣೆ ನಡೆಯುತ್ತಿರಲು

ಪಕ್ಕದ ಮನೆಯ ಮಕ್ಕಳೇಕೆ ಕಾಯಬೇಕೊಂದು ತಿಂಗಳು

 

ಇಡೀ ನಾಡು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿ ಮುಗಿಸಿದ್ದಾಗ

ಉಡುಪಿ ಮಠದದವರು ಕಳೆದ ವರ್ಷ ಹಾಡಿದ್ದು ಬೇರೆ ರಾಗ

 

ಚಾಂದ್ರ - ಸೌರಮಾನಗಳ ನಡುವಲ್ಲಿ ದೇವರ ಅಪಮಾನ

ಎರಡು ಜನ್ಮದಿನ ಆಚರಿಸಿದರೆ ಆದೀತೆ ಹೆಚ್ಚಿನ ಸನ್ಮಾನ

 

ಭವಿಷ್ಯ ನುಡಿಯುವುದಕೂ ಇಲ್ಲ ನೋಡಿ ಏಕ ಮಾನದಂಡ

ರಾಶಿಯಲಿ ಶುಕ್ರದೆಸೆ, ಲಗ್ನ ನೋಡಿ ಇದೆಯೆಂಬರು ಗಂಡ

 

ರಾಶಿ, ಮಾಸ, ತಿಂಗಳು, ಲಗ್ನಗಳಲಿ ಹೋಗದಿರಲಿ ಮಾನ

ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!

  
*******


 

ಆತ್ರಾಡಿ ಸುರೇಶ ಹೆಗ್ಡೆ


Rating
No votes yet

Comments